ವೈಭವ ಸೈನಿಕ ಕೋಚಿಂಗ್ ವಿಶಿಷ್ಟ ಸಾಧನೆ –6 ವಿದ್ಯಾರ್ಥಿಗಳು ಆಯ್ಕೆ.
ಖಾನಹೊಸಹಳ್ಳಿ ಜೂನ್.25

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ ವೈಭವ ಸೈನಿಕ/ನವೋದಯ ಕೋಚಿಂಗ್ ಸೆಂಟರ್ ನಲ್ಲಿ2022-2023 ನೇ ಸಾಲಿನಲ್ಲಿ ಜವಾಹರ್ ನವೋದಯ ವಸತಿ ಶಾಲೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದಕುಶವಂತ್ ಬಾಬು, ನಂದಿ ವರ್ಧನ, ಮಧು, ಎಸ್.ನಂದೀಶ್, ಸಾನ್ವಿಕಾ, ಹನ್ಸಿಕಾ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಮುರುಳಿಧರ್ ಗಜೇಂದ್ರಗಡ ಮತ್ತು ಶ್ರೀಮತಿ ಸವಿತಾ ಮುರುಳಿಧರ್ ಅವರು ಅಭಿನಂದನೆ ಸಲ್ಲಿಸಿ ನಂತರ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳು ನವೋದಯ ಶಾಲೆಯ ಆಯ್ಕೆಯಲ್ಲಿ ವೈಭವ ಸೈನಿಕ/ನವೋದಯ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದ ಆರು ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ನಮ್ಮ ತರಬೇತಿ ಸಂಸ್ಥೆಗೆ ಹೆಮ್ಮೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರಕಾಶ್, ಮಲ್ಲೇಶ್, ರಮೇಶ್, ಮಂಜುನಾಥ್, ಪ್ರವೀಣ್, ಹೇಮಂತ್, ಪ್ರೀತಿ, ತ್ರಿವೇಣಿ, ಬಸವರಾಜ್, ವಿಜಯ್ ಕುಮಾರ್, ಕೋಚರ್ ಬಿ.ಅಂಜಿನಪ್ಪ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ಪಾಲಕರು ಮೆಚ್ಚುಗೆ ಸೂಚಿಸಿ ಶುಭ ಕೋರಿದ್ದಾರೆ. ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ