ಮಾದಿಗ ಸಮುದಾಯದ ಪರ ಗಟ್ಟಿ ಧ್ವನಿ ಮತ್ತು ಒಳ ಮೀಸಲಾತಿ ಹೋರಾಟದ ಕಾನೂನಾತ್ಮಕ ರೂವಾರಿ – ವಕೀಲರಾದ ಎಸ್. ಅರುಣಕುಮಾರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಕುಷ್ಟಗಿ ಜೂ.23





ಡಾ, ಬಿ.ಆರ್ ಅಂಬೇಡ್ಕರ್ ರವರ ಸೈದ್ದಾಂತಿಕ & ತಾತ್ವಿಕ ನೆಲೆ ಗಟ್ಟಿನ ಮೇಲೆ ಬೆಳೆದ ಮಹಾತ್ಮಾ ಪ್ರೊ, ಬಿ. ಕೃಷ್ಣಪ್ಪ ರವರ ಸ್ವಾಭಿಮಾನ, ದಿಟ್ಟತನ, ಎದೆಗಾರಿಕೆಯನ್ನು ಮೈಗೂಡಿಸಿ ಕೊಂಡು ಒಳ ಮೀಸಲಾತಿಯ ಹೋರಾಟದ ಆಳ ಹೋಳ ಅರ್ಥೈಸಿಕೊಂಡ ದಕ್ಷಿಣ ಭಾರತದಲ್ಲಿ ಸಮುದಾಯಕ್ಕೆ ಆಗುತೀರು ಅನ್ಯಾಯ, ದಘಲಭಾಜಿತನದ ವಿರುದ್ಧ ಹೆಬ್ಬಂಡೆಯಾಗಿ ಮೆಟ್ಟಿನಿಂತು ಸುಪ್ರೀಂ ಕೋರ್ಟ್ ಮೂಲಕ ನ್ಯಾಯ ಸಮ್ಮತವಾಗಿ ಹಂಚಿಕೆಯಲ್ಲಿ ನಿರ್ಣಯಿಸುವಲ್ಲಿ ಪ್ರಮುಖ ಹೆಗ್ಗುರುತಾಗಿ ನಿಂತ “ಎ.ನಾರಾಯಣಸ್ವಾಮಿ” ನವ ನಕ್ಷತ್ರದ ಪ್ರಜ್ವಲ್ ಪ್ರಕಾಶಮಾನವಾಗಿ ಇಡೀ ಸಮುದಾಯದ ತೆರೆ ಮರೆಯಲ್ಲಿ ನಿಂತ ಅವರ ಹಾದಿಯಾಗಿ ಸಮಾಜದ ಹಿತಕ್ಕಾಗಿ ವೈಯಕ್ತಿಕ ಹಿತಾಸಕ್ತಿ ಅಡ್ಡಿ ಬಂದರೆ ವೈಯಕ್ತಿಕ ಹಿತಾಸಕ್ತಿಯನ್ನು ಬಲಿಕೊಟ್ಟು ಸಮಾಜದ ಹಿತವನ್ನು ಕಾಪಾಡಬೇಕು ಎಂಬ ಬಾಬಾ ಸಾಹೇಬರ ಮಾತನ್ನು ಸ್ವೀಕರಿಸಿ ಸದಾ ಸಮಾಜಕ್ಕಾಗಿ ಸ್ವಾಭಿಮಾನ ಮತ್ತು ಆತ್ಮ ಗೌರವವನ್ನು ತುಂಬುತ್ತಾ 35 ವರ್ಷದ ಒಳ ಮೀಸಲಾತಿ ಚಳುವಳಿಯನ್ನು ಯಾರು ಏನೇ ಅಂದರೂ ಜೈ ಮಾದಿಗ ಜೈ ಜೈ ಮಾದಿಗ ಎನ್ನುತ್ತಾ ಅತ್ಯಂತ ನಿಷ್ಟೂರ ಹೋರಾಟದ ಮಾತುಗಳಲ್ಲಿ ಶಾಸಕರು, ಸಚಿವರು, ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಮುಂದೆ ಒಳ ಮೀಸಲಾತಿಯ ಹಕ್ಕನ್ನು ಕಾನೂನಾತ್ಮಕವಾಗಿ ವಿವರಿಸಿ ಅವರ ಕಂಚಿನ ಕಂಠದಲ್ಲಿ ಮಂಡನೆ ಮಾಡುತ್ತಿದ್ದರೆ ಮಂತ್ರ ಮಗ್ನರಾಗಿರುವ ಸಂಗತಿಗಳು ಕಣ್ಣು ಮುಂದಿದೆ.

ನಮ್ಮ ಹೋರಾಟಗಾರರಲ್ಲೂ ಆತ್ಮ ವಿಶ್ವಾಸವನ್ನು ತುಂಬುತ್ತಾ ಒಳ ಮೀಸಲಾತಿಯನ್ನು ನಾವು ಏನೇ ಕಷ್ಟ ಬಂದರೂ ಹೋರಾಟದ ಮೂಲಕ ಸಮಾಜಕ್ಕೆ ದಕ್ಕಿಸ ಬೇಕೆಂಬ ದಿಟ್ಟ ನಿಲುವಿನೊಂದಿಗೆ ಕರ್ನಾಟಕ ರಾಜ್ಯವನ್ನು ಸುತ್ತಿ ವಕೀಲರು ಹಾಗೂ ಸಮಾಜವನ್ನು ಸಂಘಟಿಸಿ ಹೋರಾಟದ ಕಾವಿನ ನಿರಂತರತೆಯನ್ನು ಕಾಪಾಡಿ ಕೊಂಡು ಒಳ ಮೀಸಲಾತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಎಸ್.ಅರುಣ್ ಕುಮಾರ್ ಅವರಿಗೆ ಸಮಾಜದ ಸಮಸ್ತ ವಕೀಲರು ಹಾಗೂ ಸಮಾಜದ ಆಶೀರ್ವಾದ ಗಳೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಾ ಅವರಿಗೆ ಬುದ್ಧ ಬಸವ ಅಂಬೇಡ್ಕರ್ ಕಾನ್ಸಿ ರಾಮ್ ಮತ್ತು ಪ್ರೊ, ಬಿ.ಕೆ ರವರ ಆಯುರಾ ರೋಗ್ಯ ಕರುಣಿಸಲಿ ಎಂದು ಆಶಿಸುತ್ತೇವೆ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಬೆಂಗಳೂರು ರವರಿಗೆ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ಪರವಾಗಿ ಚಲನಶೀಲತೆಯ ವೇಗ ಹೆಚ್ಚಿಸಿರಿ ಅಂತಾ ಅಖಂಡ ದಕ್ಷಿಣ ಭಾರತದ ಮಾದಿಗ ಪರವಾಗಿ & ಸುದ್ದಿ ವಾಹಿನಿ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ವರದಿ:ವಕೀಲರು ಶಿವುಕುಮಾರ.ದೊಡ್ಡಮನಿ ಕುಷ್ಟಗಿ