ಸರ್ವಶ್ರೇಷ್ಠ ಜನಪರ ಆಡಳಿತಗಾರ ಕೆಂಪೇಗೌಡರ ಕಾರ್ಯಗಳು ಇಂದಿಗೂ ಪ್ರಸ್ತುತ.

ವಿಜಯಪುರ ಜೂನ್.29

ಸರ್ವಶ್ರೇಷ್ಠ ಜನಪರ ಆಡಳಿತಗಾರ ಹಾಗೂ ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರ ಕಾರ್ಯಗಳು ಇಂದಿಗೂ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ್ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಿಜಯಪುರ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ಶ್ರೀ ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೌಡರು ಬೆಂಗಳೂರನ್ನು ವೈಜ್ಞಾನಿಕವಾದ ಅಭಿವೃದ್ಧಿ ನಗರವನ್ನಾಗಿ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ ಸರ್ವಶ್ರೇಷ್ಠ ಆಡಳಿತಗಾರ ಎನ್ನುವುದಕ್ಕೆ ಅವರು ಜನಜೀವನ ಮತ್ತು ನಾಗರಿಕತೆಗಳ ವಿಕಸನಕ್ಕೆ ನೀರಿಗಾಗಿ ನಿರ್ಮಿಸಿದ ಸಾವಿರಾರು ಕೆರೆಗಳ ನಾಡಿನ ಕೊಡುಗೆಗೆ ಸಾಕ್ಷಿಯಾಗಿದೆ. ಕೆರೆಗಳ ನಿರ್ಮಾಣ ಹಾಗೂ ಸಂರಕ್ಷಣೆ, ಮಾರುಕಟ್ಟೆ ಸೇರಿದಂತೆ ಜನೋಪಯೋಗಿ ಕಾರ್ಯ ಒತ್ತು ನೀಡಿದ ಅವರು ದೂರದೃಷ್ಟಿಯುಳ್ಳವರಾಗಿದ್ದರು ಎಂದು ಹೇಳಿದರು.ಕೆಂಪೇಗೌಡರಿಗೆ ಸಂಬಂಧಿಸಿದ 46 ತಾಣಗಳನ್ನು ಅಭಿವೃದ್ಧಿಪಡಿಸಲು ‘ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರವನ್ನೇ ರಚಿಸಲಾಗಿದ್ದು, ಕೆಂಪೇಗೌಡರು ಕಟ್ಟಿಸಿದ ಕೋಟೆಗಳು, ಕೆರೆಗಳು, ಪಾರಂಪರಿಕ ತಾಣಗಳೆಲ್ಲವೂ ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ಹೇಳಿದರು.ಸಂಕೇತಗೌಡ ಬ್ಯಾಕೋಡ ಅವರು ಶ್ರೀ ಕೆಂಪೇಗೌಡ ಅವರ ಕುರಿತು ಉಪನ್ಯಾಸ ನೀಡಿ, ಉತ್ತಮ ಆಡಳಿತಗಾರನಾಗಿ ಜಾತಿ, ಮತ, ಪಂಥಗಳನ್ನು ಬದಿಗೊತ್ತಿ, ಸರ್ವರಿಗೂ ಸಮಾನತೆಯನ್ನು ಸಾರುವ ಮೂಲಕ ಎಲ್ಲ ಸಮುದಾಯದ ಜನತೆಗೆ ಅನುಕೂಲವಾಗುವಂತೆ ನೀರಿನ ಆಸರೆಯಾಗಿ, ಸಮೃದ್ಧ ನಗರ ನಿರ್ಮಿಸಿ ವಿಶ್ವಕ್ಕೆ ಮಾದರಿಯಾದ ಶ್ರೇಷ್ಠ ಆಡಳಿತಗಾರ ಎಂದರೇ ಅದು ಕೆಂಪೇಗೌಡರು ಎಂದು ಹೇಳಿದರು.ಬೆಂಗಳೂರಿನ ನಗರದಲ್ಲೆಲ್ಲ ಕೆರೆಗಳನ್ನು ನಿರ್ಮಿಸಿ, ಇದನ್ನು ‘ಸಾವಿರ ಕೆರೆಗಳ ನಾಡ’ನ್ನಾಗಿ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಧಮಾರ್ಂಬುಧಿ, ಕೆಂಪಾಂಬುಧಿ, ಸಂಪಂಗಿರಾಮನ ಕೆರೆ, ಚೆನ್ನಮ್ಮನ ಕೆರೆ, ಹಲಸೂರು ಕೆರೆ, ಮತ್ತಿಕೆರೆ ಇತ್ಯಾದಿ ಕೆರೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಅನುಸೂಯ ಚಲವಾದಿ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ರವಿಗೌಡ ಮಹಲ್, ಸಿದ್ದುಗೌಡ ಯಂಬತ್ನಾಳ, ಸಿದ್ದುಗೌಡ ಹಂದಿಗನೂರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಸಂಗೀತ ಶಿಕ್ಷಕರಾದ ಮುರುಳೀಧರ್ ಭಜಂತ್ರಿ ಅವರು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು.ಮೆರವಣಿಗೆಗೆ ಚಾಲನೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಶ್ರೀ ಕೆಂಪೇಗೌಡ ಭಾವಚಿತ್ರದ ಮೆರವಣಿಗೆಗೆ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಧೋಂಡಿಬಾ ಕಟಕಧೋಂಡ ಹಾಗೂ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು.ಮೆರವಣಿಗೆಯು ಕಲಾ ತಂಡದೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ,ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದಿಂದ ಆಗಮಿಸಿ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮುಕ್ತಾಯವಾಯಿತು.

ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶರಗೂರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button