ಚುಟುಕು.
1..ದಾಳ..
***************
ಜಗದೊಳು ಬದುಕು ನೀ
ಯಾರ ಹಂಗಿಲ್ಲದೆ
ನಿಲ್ಲದೆ ಹಾಕುತಿರು ಮನವೆ
ನಿನ್ನದೆ ದಾಳವ ಬಾಳಬಂದದಿ!
2..ಮಾರ್ಜಾಲ
****************
ನಿನ್ನ ಮಾರ್ಜಾಲದ ಮಾತು ಕೇಳಲು
ಸಭೆ ಕರೆದು ಎಲ್ಲರೂ ಕೂಡವ್ರೆ
ಕೊಡುವದ ಕಂಡು ಬರುತನಕ ತೋಚಿ
ಬಲ್ಲವ್ರೆ ಎಲ್ಲರೂ ಬಲವಾಗಿ ಬೆಳೆದವ್ರೆ !
3..ಮಾಯಾವಿ
****************
ಮಾಯಗಾರ ಮೇಲೌವ್ನೆ
ಮರೆಯದೆ ಅರಿತು ಬಾಳು
ನಿನ್ನಾಟ ಬಲ್ಲಾವ್ನೆ ಮನುಜ
ಎಚ್ಚರದಿ ಸಾಗು ನೀ ಕೇಳು !
4..ಆಶಾವಾದಿ
**************
ನಂಬಿಕೆ ಜನರ ಮನಗೆದ್ದು
ಸಾಧಿಸು ನೀ ಗುರಿಯ
ಪ್ರತೀಕಾರ ಬಿಟ್ಟು ಸಹಕಾರದಿ
ಮೇರಿ ನೀ ಬೆಲೆಕಟ್ಟುವದು ಈ ಧರೆಯ !
******************
ಎನ್.ಎಸ್. ಹಾಲವರ
*******************