100 ಹಾಸಿಗೆ ಆಸ್ಪತ್ರೆಗೆ ಭೇಟಿ ನೀಡಿದ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್.

ಹೊಸಪೇಟೆ ಜುಲೈ.2

ನಿನ್ನೆ ವಿಜಯನಗರ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಲಾರಿ ಮತ್ತು ಪ್ರಯಾಣಿಕರ ಅಟೋಗಳ ಮದ್ಯೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಬಳ್ಳಾರಿ ವಿಮ್ಸ್ ಮತ್ತು ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ವಸತಿ ಮತ್ತು ವಕ್ಸ್ ಸಚಿವ ಬಿ.ಝಡ್ಸ್ ಜಮೀರ್ ಅಹಮ್ಮದ್ ಖಾನ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಇದೇ ಸಂದರ್ಭದಲ್ಲಿ ಸುದ್ದಿ ಮಾಧ್ಯಮ ದವರೊಂದಿಗೆ ಮಾತನಾಡಿ, ನಿನ್ನೆ ನಡೆದ ಅಪಘಾತದ ಘಟನೆ ಕಂಡು ಕೇಳಿರಿಯದಂತ ಘಟನೆಯಾಗಿದೆ. ಈ ಘಟನೆ ನನಗೆ ವೈಯಕ್ತಿಕವಾಗಿ ಅತೀವ ದುಖಃ ತಂದಿದೆ. ದೇವರು ಮೃತ ಕುಟುಂಬಸ್ಥರಿಗೆ ದುಖಃವನ್ನು ಭರಿಸುವ ಶಕ್ತಿ ಕೊಡಲೆ, ಹಾಗೂ ನಿನ್ನೆ ಮುಖ್ಯಮಂತ್ರಿಯವರು ಮೃತರ ಕುಟುಂಬಕ್ಕೆ ಎರಡು ಲಕ್ಷ ಮತ್ತು ಗಾಯಾಳುಗಳಿಗೆ ತಲಾ ಐವತ್ತು ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಲ್ಪ ಸಂಖ್ಯಾತ ಇಲಾಖೆಯಿಂದ ಮೃತರಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ದೊರಕಿಸಿಕೊಡುತ್ತೇನೆಂದು ಭರವಸೆ ನೀಡಿದರು.ಅದಾದ ನಂತರ ಬಳ್ಳಾರಿ ವಿಮ್ಸನ ಟ್ರಾಮಾ ಕೇರ್ ಭೇಟಿ ಮಾಡಲು ತೆರಳಿದರು.ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಎಚ್.ಆರ್ ಗವಿಯಪ್ಪ, ಬಳ್ಳಾರಿ ನಗರ ಶಾಸಕ ಎನ್. ಭರತ್. ರೆಡ್ಡಿ, ಕೆ.ಎಂ.ಎಫ್ ಅಧ್ಯಕ್ಷ ಭೀಮನಾಯಕ್, ಇನ್ನೂ ಹಲವಾರು ಕಾಂಗ್ರೆಸ್ ಪಕ್ಷದ ನಾಯಕರು ಸದಸ್ಯರು ಪಾಲ್ಗೊಂಡಿದ್ದರುಹೊಸ ಜಿಲ್ಲೆಯಾಗಿ ಎರಡು ವರ್ಷ ಕಳೆದರೂ, ಹಲವು ಇಲಾಖೆಗಳಿಗೆ ಕಚೇರಿಗಳಿಲ್ಲ. ಕೆಲ ಇಲಾಖೆಗಳಲ್ಲಿ ಪ್ರಭಾರ ಅಧಿಕಾರಿಗಳನ್ನಿಟ್ಟುಕೊಂಡು ಜಿಲ್ಲೆಯನ್ನು ಹೇಗೆ ನಡೆಸುತ್ತೀರಿ ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ಗೆ. ವಸತಿ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಬಿ.ಜೆಡ್.ಜಮೀರ್ ಅಹ್ಮದ್‌ ಖಾನ್ ಪ್ರಶ್ನಿಸಿದರು. ಸಚಿವನಗರದ ಡಿಸಿ ಕಚೇರಿಯಲ್ಲಿ ಶನಿವಾರ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದು. ಪ್ರಭಾರ ವಹಿಸಿಕೊಂಡ ಹಲವುಇಲಾಖೆಗಳ ಅಧಿಕಾರಿಗಳು, ಬಳ್ಳಾರಿಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. 19 ಇಲಾಖೆಗಳಿಗೆ ಕಚೇರಿಯಿಲ್ಲ. ಅಧಿಕಾರಿಗಳು ಹೇಗೆ ಕೆಲಸ ಗವಿಯಪ್ಪ ಮಾಡಬೇಕು.

ಪ್ರಭಾರ ವಹಿಸಿಕೊಂಡವರು ಬಳ್ಳಾರಿಯಲ್ಲೂ ಇರಲ್ಲ. ವಿಜಯನಗರದಲ್ಲೂ ಇರಲ್ಲ. ಅಂಥವರಿಂದ ಜಿಲ್ಲೆಯ ಅಭಿವೃದ್ಧಿಹೇಗೆ ನಿರೀಕ್ಷಿಸಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಇಲಾಖಾವಾರು ಪ್ರಭಾರ ಅಧಿಕಾರಿಗಳು ಮತ್ತು ಕಚೇರಿಗಳ ಕೊರತೆ ಪಟ್ಟಿ ಮಾಡಿ, ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಬಜೆಟ್‌ ಅಧಿವೇಶನದ ಬಳಿಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ತಿಂಗಳಿಗೊಮ್ಮೆ ಬರುವ ನನಗ್ಯಾಕೆ ಕಚೇರಿ?: ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಪ್ರವಾಸಿ ಮಂದಿರದಲ್ಲಿ ದೊಡ್ಡ ಕಚೇರಿ ಮೀಸಲಿಡಲಾಗಿದೆ. ತಿಂಗಳಿಗೊಮ್ಮೆ ಬರುವ ನನಗೆ ಅಷ್ಟು ದೊಡ್ಡ ಕಚೇರಿ ಬೇಕಿಲ್ಲ. ನನ್ನ ಸಹಾಯಕ ಕುಳಿತುಕೊಳ್ಳಲು ಒಂದು ಟೇಬಲ್, ಕುರ್ಚಿ ಸಾಕು. ನಾನು ಬಂದಾಗ ಡಿಸಿ ಕಚೇರಿಯಲ್ಲೇ ಇರುತ್ತೇನೆ. ನನಗಾಗಿ ಮೀಸಲಿಟ್ಟಿರುವ ಐಬಿಯಲ್ಲಿ ಕ್ಯಾಬಿನ್‌ಗಳನ್ನಾಗಿಸಿ ಐದಾರು ಇಲಾಖೆಗಳಿಗೆ ಕಚೇರಿಯಾಗುತ್ತವೆ. ಅಧಿಕಾರಿಗಳು ಕೆಲಸ ಮಾಡಿದರೆ, ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವಾರದಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಜಮೀರ್ ಸೂಚಿಸಿದರು. ಶಾಸಕರಾದ ಎಚ್‌.ಆರ್. ಗವಿಯಪ್ಪ, ಎಂ.ಪಿ.ಲತಾ ಮಲ್ಲಿಕಾರ್ಜುನ, ಡಾ.ಎನ್.ಟಿ.ಶ್ರೀನಿವಾಸ್, ಕೃಷ್ಣನಾಯ್ಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್, ಜಿಲ್ಲಾಧಿಕಾರಿ ವೆಂಕಟೇಶ್‌. ಟಿ. ಜಿಪಂ ಸಿಇಒ ಸದಾಶಿವ ಪ್ರಭು ಬಿ., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಇದ್ದರುಐದು ವರ್ಷವಾದರೂ ಕಟ್ಟಡ ಸಿಕ್ಕಿಲ್ಲವೇ? ಹೊಸಪೇಟೆ ತಾಲೂಕಿನ ಕಾಳಗಟ್ಟದ ಮುರಾರ್ಜಿ ದೇಸಾಯಿ ಶಾಲೆಯಒಂದೇ ಕಟ್ಟಡದಲ್ಲಿ ಬಾಲಕರು ಮತ್ತು ಬಾಲಕಿಯರಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ, ಯಾರು ಹೊಣೆ? ಐದು ವರ್ಷ ಕಳೆದರೂ, ಪ್ರತ್ಯೇಕ ಕಟ್ಟಡ ಒದಗಿಸಿಲ್ಲವೆಂದರೆ ನಿಮ್ಮ ಕಾರ್ಯವೈಖರಿ ಗೊತ್ತಾಗುತ್ತದೆ. ಎಂದು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ವಿರುದ್ಧ ಸಚಿವ ಕಿಡಿಕಾರಿದರು. ಒಂದು ತಿಂಗಳಲ್ಲಿ ಪ್ರತ್ಯೇಕ ಕಟ್ಟಡ ಒದಗಿಸಬೇಕು. ಸರ್ಕಾರಿ ಕಟ್ಟಡ ಲಭ್ಯವಿಲ್ಲದಿದ್ದರೆ, ಬಾಡಿಗೆ ಪಡೆದುಕೊಳ್ಳುವಂತೆ ತಾಕೀತು ಮಾಡಿದರು.ಮಾದರಿ ಜಿಲ್ಲೆಯ ಕನಸಿಗೆ ಸಹಕರಿಸಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ವಿಶ್ವಾಸವಿಟ್ಟು ನೂತನ ವಿಜಯನಗರ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ. ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿಸುವ ಕನಸು ಹೊಂದಿದ್ದೇನೆ. ಎಲ್ಲಾ ಇಲಾಖೆಗಳ ಕಾರ್ಯಚಟುವಟಿಗಳನ್ನು ಚುರುಕುಗೊಳಿಸಲು ಜು.24 ರಿಂದ ಒಂದು ವಾರ ತಾಲೂಕುವಾರು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುತ್ತೇನೆ. ಎಲ್ಲ ಇಲಾಖೆ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರ ಸಚಿವ ಜಮೀರ್ ಅಹ್ಮದ್‌ ಖಾನ್ ಮನವಿ ಮಾಡಿದರು.

ತಾಲೂಕ ವರದಿಗಾರರು:ಮಾಲತೇಶ. ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button