ಮೊಳಕಾಲ್ಮೂರು ಪಟ್ಟಣದಲ್ಲಿ ಹಳೆ ಚರಂಡಿ ದುರಸ್ಥಿ ಮಾಡುವುದರ ಬಗ್ಗೆ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯತಿ ಅಧಿಕಾರಿಗಳು.
ಮೊಳಕಾಲ್ಮೂರು ಜುಲೈ.2

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಮೊಳಕಾಲ್ಮುರು ಪಟ್ಟಣದ ಎಚ್ ಆರ್ ರಸ್ತೆ ಪಕ್ಕದಲ್ಲಿರುವ ಹಳೆ ಚರಂಡಿ ಹಿಂದೆ ಕಾನೂನಾತ್ಮಕವಾಗಿ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಹಳೆ ಚರಂಡಿ ಪಟ್ಟಣ ಪಂಚಾಯತಿಯವರು ನಿರ್ಲಕ್ಷ್ಯತೆಯಿಂದ ಮತ್ತು ಪ್ರಭಾವಿಗಳ ಒತ್ತಡದಿಂದ ಈ ಹಳೆ ಚರಂಡಿ ಮುಚ್ಚಿ ಹಾಕಿರುವುದು ಎಲ್ಲಾ ಸಾರ್ವಜನಿಕರಿಗೆ ಕಂಡುಬರುತ್ತದೆ ಆದರೆ ಈಗ ಸಾರ್ವಜನಿಕರ ಗಮನ ಹರಿಸಿ ಈ ಹಳೆ ಚರಂಡಿ ಮುಖಾಂತರ ಎರಡು ಮೂರು ಕೆರೆಗಳ ನೀರು ಈ ಚರಂಡಿ ಇಂದಲೇ ಬರಬೇಕಾಗಿತ್ತು ಈಗ ಆ ಚರಂಡಿಯನ್ನು ಎಚ್ ಆರ್ ರಸ್ತೆ ಮಧ್ಯದಲ್ಲಿ ಲೇಔಟ್ ಗಳು ಮಾಡುವ ಪ್ರಭಾವಿಗಳು ಈ ಚರಂಡಿಯನ್ನು ಮುಚ್ಚಿ ಹಾಕಿರುವುದು ಕಂಡು ಬರುತ್ತದೆ ಆದರೆ ಈಗ ಆ ಚರಂಡಿ ನೀರು ಬಿಎಸ್ಎನ್ಎಲ್ ಆಫೀಸ್ ಮುಂದೆ ಆ ನೀರು ಹೋಗಲು ಡಕ್ ಮಾಡಿರುತ್ತಾರೆ ಭಾರಿ ಮಳೆ ಅವಾಂತರದಿಂದ ಆ ಚರಂಡಿಯಲ್ಲಿ ಬರುವ ನೀರು ಬಿಎಸ್ಎನ್ಎಲ್ ಆಫೀಸ್ ಮುಂದೆ ಡಕ್ಕು ಮುಖಾಂತರ ಸರಾಗವಾಗಿ ಹರಿಯುತ್ತವೆ ಎಂದು ಕಂಡುಬರುತ್ತದೆ .

ಆದರೆ ಈಗ ಈ ಹಳೆ ಚರಂಡಿ ದುರಸ್ತಿಯನ್ನು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರ ಗಮನಕ್ಕೆ ಬಂದಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ ಜೆಸಿಬಿ ಮುಖಾಂತರ ಆ ಚರಂಡಿ ಕ್ಲೀನ್ ಮಾಡುತ್ತಾರೆ ಎಂದು ಕಂಡುಬರುತ್ತದೆ ಮೊಳಕಾಲ್ಮೂರು ಪಟ್ಟಣದ ನಾಗರಿಕರು ಎನ್. ವೈ. ಗೋಪಾಲಕೃಷ್ಣ ಶಾಸಕರು ಈ ಚರಂಡಿಯ ಬಗ್ಗೆ ಗಮನ ಹರಿಸುವುದು ಎಲ್ಲಾ ಸಾರ್ವಜನಿಕರು ಅಭಿನಂದನೆ ವ್ಯಕ್ತಪಡಿಸಿದರು ಎನ್.ವೈ.ಗೋಪಾಲಕೃಷ್ಣ ಶಾಸಕರು ಏನೇ ಮಾಡಿದರು ಅದು ಎಲ್ಲಾ ಸಾರ್ವಜನಿಕರ ಗೋಸ್ಕರ ಒಳ್ಳೇದು ಆಗಬೇಕು ಎಂದು ಬಯಸುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು