ದೊಡ್ಡ ಗೊಲ್ಲರಹಟ್ಟಿ.ವಾಂತಿ — ಭೇದಿ ಅಸ್ವಸ್ಥ ಗೊಡಿದ್ದ 20 ಜನರು – ಚೇತರಿಕೆ.
ದೊಡ್ಡ ಗೊಲ್ಲರಹಟ್ಟಿ ಜುಲೈ.3

ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ಬಡೇಲಡಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಗೊಲ್ಲರಹಟ್ಟಿ ಗ್ರಾಮದಲ್ಲಿ,ಜೂ2ರಂದು ಕಲುಷಿತ ನೀರು ಸೇವಿಸಿದ ಪರಿಣಾಮ20ಜನ ವಾಂತಿ ಬೇಧಿಯಿಂದ ಅಸ್ವಸ್ಥಗೊಂಡಿರುವ ಪ್ರಕರಣ ಜರುಗಿದೆ. ಹಲವು ದಿನಗಳಿಂದ ತಾವು ಸೇವಿಸುತ್ತಿದ್ದ ಕುಡಿಯುವ ನೀರು, ಕಲುಷಿತಗೊಂಡಿದ್ದು ಕಲುಷಿತ ನೀರು ಸೇವನೆ ವಾಂತಿ ಬೇಧಿಗೆ ಕಾರಣ ಎಂದು ತಿಳಿದು ಬಂದಿದೆ. ಅನಾರೋಗ್ಯಕ್ಕೆ ತುತ್ತಾದವರು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಅಸ್ವಸ್ಥಗೊಂಡವರು ತುರ್ತು ಚಿಕಿತ್ಸೆಯ ನಂತರ ಭಾಗಶಃ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆಯೇ ಹೊಸಪೇಟೆಗೆ ತೆರಳಿರುವ, “ಶಾಸಕರಾದ ಡಾll ಎನ್.ಟಿ.ಶ್ರೀನಿವಾಸ್” ರವರು. ಬೆಳಿಗ್ಗೆಯಿಂದಲೇ ಹೊಸಪೇಟೆಯಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಸಚಿವರೊಂದಿಗಿದ್ದು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವೇದಿಕೆಗಳನ್ನ ಹಂಚಿಕೊಂಡಿದ್ದರು. ಅವರು ಬಿಡುವಿಲ್ಲದೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು,ಕಾರ್ಯಕ್ರಮಗಳನ್ನ ಮುಗಿಸಿಕೊಂಡು ಸಚಿವರಿಗೆ ಬೀಳ್ಕೊಡುಗೆ ನೀಡಿದ ಶಾಸಕರು.ದೀಢೀರ್ ದೌಡಾಯಿಸಿ ಸ್ಪಂಧಿಸಿದ ಶಾಸಕರು ವಾಂತಿ ಬೇಧಿ ಪ್ರಕರಣ ಘಟನೆಯ ಸುದ್ದಿ ತಿಳಿದ ಕೂಡಲೇ ಶಾಸಕರು ಕೂಡ್ಲಿಗಿ ಕಡೆಗೆ ದೌಡಾಯಿಸಿದ್ದಾರೆ,

ಅವರು ಅಲ್ಪಾವಧಿಯಲ್ಲಿಯೇಹೊಸಪೇಟೆ ಯಿಂದ ಕೂಡ್ಲಿಗಿ ಪಟ್ಟಣಕ್ಕೆ ಧಾವಿಸಿದ್ದಾರೆ. ಅವರು ನೇರವಾಗಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾರೆ, ಅಸ್ವಸ್ಥತಗೊಂಡವರನ್ನು ಭೇಟಿ ಮಾಡಿ ಅವರೇ ಖುದ್ದು ತಪಾಸಣೆ ಮಾಡಿದ್ದಾರೆ. ಮತ್ತು ಅಸ್ವಸ್ಥಗೊಂಡವರ ಕುರಿತು ಆರೋಗ್ಯಾಧಿಕಾರಿಗಳಲ್ಲಿ, ಚರ್ಚಿಸಿ ಅವರಿಂದ ಮಾಹಿತಿ ಪಡೆದಿದ್ದಾರೆ.ತಾಲೂಕು ಆರೋಗ್ಯಾಧಿಕಾರಿ ಪ್ರದೀಪ ಕುಮಾರ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿಯರು, ಅಸ್ವಸ್ಥಗೊಂಡವರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಿದ್ದರ ಫಲವಾಗಿ ಭಾಗಶಃ ಎಲ್ಲರೂ ಚೇತರಿಸಿಕೊಂಡಿದ್ದಾರೆ.ನಂತರ ದೊಡ್ಡಗೊಲ್ಲರ ಹಟ್ಟಿ ಗ್ರಾಮಕ್ಕೆ ತೆರಳಿದ ಶಾಸಕರು, ಅನಾರೋಗ್ಯಕ್ಕೀಡಾಗಿರುವ ಕುಟುಂಬಸ್ಥರನ್ನು ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ. ಸ್ಥಳದಲ್ಲಿಯೇ ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.”ಜಿ.ಪಂ ಸಿಇಒ ಭೇಟಿ” ವಾಂತಿ ಬೇಧಿ ಪ್ರಕರಣ ಘಟನೆ ಜರುಗಿರುವ ಗ್ರಾಮಕ್ಕೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ, ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತುರ್ತು ಸಭೆ ಕರೆದು ಘಟನೆ ಬಗ್ಗೆ ಗಂಭೀರವಾಗಿ ವಿಚಾರಣೆ ನಡೆಸಿದ್ದಾರೆ, ಗ್ರಾಪಂ ಸಿಬ್ಬಂದಿಯೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮತ್ತು ವಾಂತಿ ಬೇಧಿಗಳಂತಹ ಪ್ರಕರಣಗಳು ಮರುಕಳಿಸದಂತೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಎಲ್ಲಾ ಗ್ರಾಮಗಳಲ್ಲಿ ಜರುಗಿಸಬೇಕೆಂದು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ