ಶಿಕ್ಷಕ ವಾಸುದೇವ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಭಾಜನ.
ತೂಲಹಳ್ಳಿ ಜುಲೈ.3
ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದ ಶಿಕ್ಷಕರಾದ ಕೆ.ಎಂ.ವಾಸುದೇವ ಅವರ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಲಭಿಸಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಇವರು ಬಳ್ಳಾರಿ ಜಿಲ್ಲೆಯ ಸಿದ್ದರಾಮಪುರ , ಯರ್ರಮ್ಮನಹಳ್ಳಿ ಯಲ್ಲಿ 27 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಮನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸೇವೆಯ ಪೂರ್ವದಿಂದಲೂ ಸದಾ ಶಿಸ್ತು ಬದ್ದ ಜೀವನ ಹಾಗೂ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡಿರುವ ಇವರು ತಾವು ಕಾರ್ಯ ನಿರ್ವಹಿಸಿದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಾಹಿತ್ಯ ಜೊತೆಗೆ ಕಲಿಕಾ ಪೂರಕ ಚಟುವಟಿಕೆ ವಿಶೇಷ ಬೋಧನೆ ಹಾಗೂ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಸಾವಿರಾರು ವಿಧ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಕರ್ತವ್ಯ ನಿರ್ವಹಿಸಿದ ಎಲ್ಲಾ ಶಾಲೆಗಳಲ್ಲೂ ಸಹ ವಿಶೇಷ ಚಟುವಟಿಕೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮೆಚ್ಚಿನ ಶಿಕ್ಷರೆನಿಸಿದ್ದಲ್ಲದೆ ಸಾಹಿತ್ಯ ಚಟುವಟಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಚುಟುಕು ಕವನ , ಪದ್ಯಗಳು , ಕವನ ಸಂಕಲನಗಳನ್ನ ರಚಿಸಿ ಮಕ್ಕಳ ಪೂರಕ ಚಟುವಟಿಕೆಗೆ ಸಹಕಾರಿಯಾಗಿದ್ದಾರೆ ಇವರ ಸಾಧನೆ ಗುರುತಿಸಿ ಸುಜ್ಞಾನ ವಿಧ್ಯಾಪೀಠ ಮತ್ತು ಸಾಂಸ್ಕೃತಿಕ ಕಲಾವಿದರ ಸಾಧಕರ ಶ್ರೀ ಮಾತ ಪ್ರಕಾಶನ ಕರ್ನಾಟಕ ಹಾಗೂ ದಿ ಜರ್ನಿ ಆಪ್ ಸೊಸೈಟಿ ನೊಂದಾಯಿತ ಸಂಸ್ಥೆ ಹಗರಿಬೊಮ್ಮನಹಳ್ಳಿ ಇವರ ವತಿಯಿಂದ ಧಾರವಾಡದಲ್ಲಿನ ರಂಗಾಯಣ ಸಾಂಸ್ಕೃತಿಕ ಸಭಾ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಸಮ್ಮೇಳನದಲ್ಲಿ ಶಿಕ್ಷಕ ವಾಸುದೇವ ಅವರಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಶಿಕ್ಷಕರ ಸಾಧನೆಗೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳು ಪೋಷಕರು ಹಾಗು ಸ್ನೇಹಿತರು ಬಂಧುಗಳು ಶುಭ ಹಾರೈಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು