ಕೆ ಆಯ್ಯನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎನ್.ಸತೀಶ್ ಕುಮಾರ್.ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ ಆಯ್ಯನಹಳ್ಳಿ ಜುಲೈ.5

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್ ಸತೀಶ್ ಕುಮಾರ್, ಉಪಾಧ್ಯಕ್ಷರಾಗಿ ಎಎಂಎಂ ರೇವಮ್ಮ, ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು ಚುನಾವಣೆ ಅಧಿಕಾರಿ ಬಿ ಮಾನಸ ನೇತೃತ್ವದಲ್ಲಿ ನಡೆಸಲಾಯಿತು.ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರೆಯವರು ನಾಮಪತ್ರ ಸಲ್ಲಿಸಿದ್ದರಿಂದ ಇವರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದರು.ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಜೆ ಕೆ ಹನುಮಂತಪ್ಪ.ಎ ಜನಾರ್ದನ್. ಸಿದ್ದರಾಮಗೌಡ.ಕೆ ಶಂಕ್ರಪ್ಪ.ಎಂಎಂಬಿ ವೀರಯ್ಯ.ಜಿ ಮಲುಕಪ್ಪ.ಬಿ ಕೊಟ್ರಪ್ಪ. ಕರಡಿ ಕಾಳಮ್ಮ. ಸಂಗಮ ನಾಯಕರ. ಹಾಜರಿದ್ದರು.ಮುಖಂಡರಾದ ಎಸ್ ಮಲ್ಲಿನಾಥ್. ಗುರುಮೂರ್ತಿ ಶಾನ್ಬೋಗಾರ್. ಎಂ ಓ ಕೊಟ್ರಯ್ಯ. ಅಂಬಳಿ ಕೆ ಕೊಟ್ರೇಶಪ್ಪ. ಇತರರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು