ವಿದ್ಯುತ್ ತಂತಿ ತಗುಲಿ 17 ಕುರಿಗಳು ಸಾವು.
ಖಾನಹೊಸಹಳ್ಳಿ ಜುಲೈ.17

ವಿದ್ಯುತ್ ತಂತಿ ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ 17 ಕುರಿಗಳು ಸಾವಿಗೀಡಾದ ಘಟನೆ ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ 66/11ಕೆವಿ ಉಪ ಕೇಂದ್ರದ ಮುಂಭಾಗದಲ್ಲಿ ಸೋಮವಾರ ಸಂಜೆ 5:00 ಗಂಟೆ ಸಮಯದಲ್ಲಿ ಸಂಭವಿಸಿದೆ. ಗ್ರಾಮದ ಪರಸಪ್ಪ ಎಂಬುವವರಿಗೆ ಸೇರಿದ ಕುರಿಗಳು. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಕುರಿಗಳು ನಷ್ಟ ಆಗಿದ್ದಾವೆ ಎಂದು ಮೂಲಗಳು ತಿಳಿದು ಬಂದಿದ್ದಾವೆ. 11 ಸಾವಿರ ಕೆವಿ ವೋಲ್ಟ್ ವಿದ್ಯುತ್ ಹರಿಯುವ ತಂತಿ ತುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. ಕುರಿಗಳನ್ನು ಒಂದೇ ಹೊಲದಲ್ಲಿ ಮೇಯಿಸಲು ಎನ್ನಲಾಗಿದೆ. ತಂತಿ ತುಳಿದ ತಕ್ಷಣ ಕುರಿಗಳು ವಿಲವಿಲನೆ ಒದ್ದಾಡತೊಡಗಿದವು. ಪಕ್ಕದಲ್ಲಿ ಇದ್ದ ಕೆವಿ ಸಿಬ್ಬಂದಿಗಳು ತಂತಿಯಲ್ಲಿ ಹರಿಯುತ್ತಿದ್ದ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದರು. ಸ್ಥಳಕ್ಕೆ ಆಗಮಿಸಿದ ಹೊಸಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಎರಿಯಪ್ಪ ಅಂಗಡಿ, ಎಡಬ್ಯುಇ ಮಾರಪ್ಪ, ಪಶು ಚಿಕಿತ್ಸಾಲಯ ವೈದ್ಯ ಸುನಿಲ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ್, ಜೋಗಿಹಳ್ಳಿ ಸಿದ್ದಪ್ಪ ಸೇರಿದಂತೆ ಕೆವಿ ಸಿಬ್ಬಂದಿಗಳು ಇತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ