ದಲಿತ ಸಾಹಿತ್ಯ ಪರಿಷತ್ತಿನ ಪೂರ್ವಭಾವಿ ಸಭೆ.
ಮಸ್ಕಿ ಜು.17

ಪಟ್ಟಣದ ಸರ್ಕ್ಯೂಟ್ ಹೌಸ್ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ತ್ ಮಸ್ಕಿ ತಾಲೂಕ ಘಟಕದ ವತಿಯಿಂದ ದಲಿತ ಸಾಹಿತ್ಯ ಪರಿಷತ್ತ್ ತಾಲೂಕ ಘಟಕ ಮತ್ತು ದಲಿತ ಸಾಹಿತ್ಯ ಪರಿಷತ್ತ್ ತಾಲೂಕ ಯುವ ಘಟಕಗಳ ಅಧ್ಯಕ್ಷರುಗಳ ಮತ್ತು ಸಮಿತಿಯ ಪದಾಧಿಕಾರಿಗಳ ಪದ ಗ್ರಹಣದ ಪೂರ್ವ ಭಾವಿ ಸಭೆಯನ್ನು ದಿನಾಂಕ 17/07/2024 ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ಸಭೆಯನ್ನು ಏರ್ಪಡಿಸಲಾಯಿತು.ಈ ಸಭೆಯನ್ನು ದಲಿತ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ನಾಗೇಶ್ ಜಂಗಮರಹಳ್ಳಿ ನೇತೃತ್ವದಲ್ಲಿ ಜರುಗಿತು. ಸಭೆಯಲ್ಲಿ ದಿನಾಂಕ 28-07-2024 ಭಾನುವಾರ ದಂದು ದಲಿತ ಸಾಹಿತ್ಯ ಪರಿಷತ್ ತಾಲೂಕ ಸಮಿತಿ ಮಸ್ಕಿ ವತಿಯಿಂದ ಪದಾಧಿಕಾರಿಗಳ ಪದ ಗ್ರಹಣ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಯಿತು.ಅಂದಿನ ದಿನ ಪ್ರಗತಿಪರ ಚಿಂತಕರು, ರೈತ ಮುಖಂಡರು, ಸಾಹಿತ್ಯಾ ಸಕ್ತಿಯ ಯುವಕ ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ವಿನಂತಿ ಎಂದು ತಾಲೂಕ ಅಧ್ಯಕ್ಷರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಹನುಮಂತ ನಾಯಕ ರಂಗಾಪೂರು, ರಾಮನಗೌಡ ಮಸ್ಕಿ, ಹುಲುಗಪ್ಪ ಗೋನಾಳ, ಗ್ಯಾನಪ್ಪ ಮೆದಿಕಿನಾಳ ವರದಿಗಾರರು, ದೇವರಾಜ ಜಿ.ಘಂಟಿ, ವೀರಪ್ಪ.ಡಿ, ಹನುಮಂತಪ್ಪ ಚಿಕ್ಕಕಡಬೂರು ಹಾಗೂ ಇತರರು ಉಪಸ್ಥಿತಿ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.