ಹುನಗುಂದ ಮತಕ್ಷೇತ್ರದಲ್ಲಿ ಕೃಷ್ಣ. ಮಲಪ್ರಭಾ.ಘಟಪ್ರಭಾ ಜೊತೆಗೆ ಸಾವಿರಾರು ಕೋಟಿಯ ಹನಿ ನೀರಾವರಿ ಯೋಜನೆ — ಮತಕ್ಷೇತ್ರದಲ್ಲಿ ಅಪಾರ ಪ್ರಮಾಣದ ಸರ್ಕಾರದ ಗ್ರಾನೈಟ್ ಪ್ರದೇಶಗಳು ಇದ್ದರೂ ನಿರುದ್ಯೋಗ — ಬಡತನ ಯಾಕೆ ?.

ಹುನಗುಂದ ಜುಲೈ.23

ಒಂದು ಕಾಲದಲ್ಲಿ ಹುನಗುಂದ ಮತಕ್ಷೇತ್ರ ಹೊನ್ನಗುಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹುನಗುಂದ ಮತಕ್ಷೇತ್ರದಲ್ಲಿ ಮೂರು ಪ್ರಮುಖ ನದಿಗಳು ಹಾದಿವೆ ಒಂದನೆಯದು ಮಲಪ್ರಭಾ ನದಿ – ಎರಡನೆಯದು ಕೃಷ್ಣ ನದಿ – ಮೂರನೆಯದು ಘಟಪ್ರಭಾ ಈ ತ್ರಿವೇಣಿಗೆ ನದಿಗಳು, ಜಗಜ್ಯೋತಿ ಬಸವಣ್ಣನ ಐಕ್ಯ ಸ್ಥಳವಾದ ಶ್ರೀ ಕೂಡಲಸಂಗಮನಾಥನ ಸನ್ನಿಧಾನದಲ್ಲಿ ಮಿಲನವಾಗಿರುವದು ಮತಕ್ಷೇತ್ರದ ಜನರ ಪುಣ್ಯ ಆದರೆ ರೈತಾಪಿ ವರ್ಗಕ್ಕೆ ಪ್ರಯೋಜನ ಶೇಖಡಾ ಎಂಬತ್ತು ಸೊನ್ನೆಯಾಗಿರುವುದು ದೊಡ್ಡದುರಂತವೇ ಆಗಿದೆ.

ಇದಕ್ಕೆ ಮೂಲ ಕಾರಣ ಬಡವ ಬಡವನಾಗಿರಬೇಕು ಶ್ರೀಮಂತರು ಶ್ರೀಮಂತರಾಗಿರಬೇಕು ಈ ವಾಕ್ಯಗಳಿಗೆ ರಾಜಕೀಯ ಬಣ್ಣದ ಲೇಪನ ವಿಪರೀತವಾಗಿರುವದರಿಂದ ಮತಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗಳಿಗೆ ಪ್ರಾಧನ್ಯತೆಯ ಕೊರತೆಯೇ ಮೂಲಕಾರಣ 1983 ರಿಂದ ಪ್ರಬುದ್ಧತೆ ಹೊಂದಿದ ನಾಗರಿಕರು ಹೇಳುವುದೇನೆಂದರೆ, ಅಂದಿನಿಂದ ಇಂದಿನವರೆಗೆ ಸಣ್ಣ ರೈತರು ಅತೀ ಸಣ್ಣ ರೈತರು ಮಳೆಯನ್ನೇ ಅವಲಂಬಿಸಿ ಬೇಸಾಯ ಮಾಡುತ್ತಾ ಬಂದಿರುವರು. ಸರಿಯಾದ ಸಮಯಕ್ಕೆ ಮಳೆಬಾರದ ಬೆಳೆಯೂ ಬಾರದ ಬರಗಾಲದ ಬವಣೆಯಲ್ಲಿ ಮಿಂದು ಹಣೆಬರಹ ಇಷ್ಟೇ ನಮ್ಮದು ಎಂದು ಬದುಕೆಂಬ ಜಟಕಾ ಬಂಡಿಯನ್ನು ಮುನ್ನಡೆಸುತ್ತಲೇ ಇದ್ದಾರೆ.ಸಣ್ಣ ರೈತರು ಅತೀ ಸಣ್ಣ ರೈತರು ತಾವು ಅನುಭವಿಸುತ್ತಿರುವ ನೋವು-ಯಾತನೆ-ಕಷ್ಟಗಳು ನಮ್ಮ ಮಕ್ಕಳಿಗೆ ದೇವರೇ ಕೊಡಬೇಡ ನಮಗೆ ಎಷ್ಟು ಕಷ್ಟಗಳನ್ನು ಕೊಟ್ಟರು ನಮ್ಮ ಮಕ್ಕಳಿಗೆ ವಿದ್ಯೆಯನ್ನು ದಯಪಾಲಿಸು ಎಂಬ ಅಚಲ ವಿಶ್ವಾಸದೊಂದಿಗೆ ಮಕ್ಕಳಿಗೆ ಶಿಕ್ಷಣ ಕಲಿಸುತ್ತ ಸಾಗಿದ ರೈತಾಪಿ ವರ್ಗ ಮಕ್ಕಳಿಗೆ ನೌಕರಿ ಕೊಡುವವರು ಯಾರು? ಸರಕಾರದ ನೌಕರಿ ಕೆಲವರಿಗೆ ದೊರೆತರೆ ಇನ್ನುಳಿದವರ ಗತಿ ಏನು? ಮತಕ್ಷೇತ್ರದಲ್ಲಿ ಹಣಕಾಸಿನ ಸಂಘ-ಸಂಸ್ಥೆಗಳಲ್ಲಿ ನೌಕರಿಗಾಗಿ ಅರ್ಜಿ ಹಾಕಿದರೆ ಅಲ್ಲಿ 35 ಲಕ್ಷದಿಂದ 60 ಲಕ್ಷದವರೆಗೆ ಹಣವನ್ನು ನೀಡಿದಾಗ ಮಾತ್ರ ಬಡ ರೈತನ ಪ್ರತಿಭಾವಂತ ಮಗನಿಗೆ ನೌಕರಿ ಗ್ಯಾರಂಟಿ ಇಲ್ಲದಿದ್ದರೆ ನೌಕರಿ ಇಲ್ಲಾ ಆದರು ಕೆಲವು ರೈತರು ತಮ್ಮ ಮಕ್ಕಳ ನಮ್ಮಂತೆ ಕಷ್ಟ ಪಡುವದು ಬೇಡ ಎಂದು ಅಂತ ತಮ್ಮ ಭೂಮಿಯಲ್ಲಿಯ ಅರ್ಧ ಭೂಮಿಯನ್ನು ಮಾರಿ ಮಕ್ಕಳಿಗೆ ನೌಕರಿ ಕೊಡಿಸಿರುವ ಸಾಕಷ್ಟು ನಿರ್ದೇಶನಗಳು ಗೋಚರಿಸುತ್ತಲೆ ಇವೆ. ಇದಕ್ಕೆ ಮೂಲಕಾರಣ ಅಜ್ಞಾನದ ಅಂದಕಾರದೊಂದಿಗೆ ಕುರುಡು ಕಾಂಚಣಕ್ಕೆ ಬಲಿಯಾಗುತ್ತಲೇ ಇದ್ದಾರೆ. ಯಾವದೇ ಹಣಕಾಸಿನ ಸಂಘ-ಸಂಸ್ಥೆಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬೇಕಾದರೆ ದರಗಳು ಇರುವುದಿಲ್ಲ. ಆದರೆ ಹಣವಿದ್ದರೆ ನೌಕರಿ ಎಂಬ ಕುರುಡು ಕಾಂಚನದ ವಾಕ್ಯವನ್ನು ಯಾವ ಶಕ್ತಿಯು ಮತಕ್ಷೇತ್ರದಲ್ಲಿ ಆಕಾಶವಾಣಿಯಂತೆ ಪ್ರಸಾರ ಮಾಡುತ್ತಲೆ ಇದೆ ಆದರೂ ನಿಗೂಢ ರಹಸ್ಯವಾಗಿರುವುದು ಸತ್ಯ ಮತಕ್ಷೇತ್ರದಲ್ಲಿ ನಾಲವತ್ತು ಸಾವಿರಕ್ಕಿಂತ ಅಧಿಕ ಪ್ರಮಾಣದಲ್ಲಿ ಸಣ್ಣ ರೈತಾಪಿ ವರ್ಗ ಅತೀ ಸಣ್ಣ ರೈತಾಪಿ ವರ್ಗ ಇರುವುದು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮನವರಿಕೆಯಾಗಿರುವುದು, ಸುಳ್ಳಲ್ಲಾ ಕಾರಣ ಪ್ರಧಾನಮಂತ್ರಿ: ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿ ದಾಖಲಾಗಿರುವುದು ಹೀಗಿದ್ದರು. ಮೂರು ನದಿಗಳಿಂದ ರೈತರಿಗೆ ಯಾವ ರೀತಿಯಲ್ಲಿಯೂ ಪ್ರಯೋಜನೆವಾಗದೇ ಇರುವುದು ದೊಡ್ಡ ದುರಂತವೇ ಸರಿ ಮತ್ತಿನ್ನೇನು?ಒಂದುವರೆ ದಶಕದ ಹಿಂದೆಯೇ ಹುನಗುಂದ ಮತಕ್ಷೇತ್ರಕ್ಕೆ ಹನಿ ನೀರಾವರಿ ಯೋಜನೆಯನ್ನು ತರಲಾಯಿತು ಇದಕ್ಕಾಗಿ ಸರಕಾರದ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಲಾಯಿತು. ಈ ಯೋಜನೆಯ ಕಾಮಗಾರಿಗಳನ್ನು ಎರಡು ಖಾಸಗಿ ಕಂಪನಿಗಳಿಗೆ (ಜೈನ್‌ ಇರಿಗೇಶನ್ ಮತ್ತು ನೆಟಾಫಿನ್ ಇರಿಗೇಶನ್ ) ಟೆಂಡರ್ ಮುಖಾಂತರ ನೀಡಲಾಯಿತು ಆದರೆ ಹನಿ ನೀರಾವರಿಯ ಕಾಮಗಾರಿಗಳಲ್ಲಿ ಸಂಪೂರ್ಣ ಕಳಪೆ ಸಾಮಾಗ್ರಿಗಳನ್ನು ಬಳಸಿ ಕಾಮಗಾರಿ ಸಂಪೂರ್ಣ ಮಾಡದೇ ಸರಕಾರದ ಹಣವನ್ನು ಬೇಕಾಬಿಟ್ಟಿ ಬಿಲ್ ಎತ್ತಿರುವರೆಂದು ನೂರಾರು ರೈತರು ಹಲವಾರು ಬಾರಿ ಹನಿ ನೀರಾವರಿ ಯೋಜನೆಯ ಕಾಮಗಾರಿಗಳಲ್ಲಿ ಸಂಪೂರ್ಣ ಕಳಪೆ ಸಾಮಾಗ್ರಿ ಅವೈಜ್ಞಾನಿಕ ಪೈಪ್ ಜೋಡಣೆ ಅಲ್ಲದೇ ಕೆಲವು ಪ್ರದೇಶಗಳಲ್ಲಿ ಕಾಮಗಾರಿ ಮಾಡದೇ ಸರಕಾರದ ಹಣವನ್ನು ಬೇಕಾಬಿಟ್ಟಿ ಬಿಲ್‌ ತೆಗೆದು ನುಂಗಿ ಹಾಕಿರುವರೆಂದು ನೂರಾರು ರೈತರು ಹಲವಾರು ಬಾರಿ ಹನಿ ನೀರಾವರಿ ಯೋಜನೆಯ ಕಾಮಗಾರಿಗಳು, ಬಗ್ಗೆ, ಪ್ರತಿಭಟನೆ ಮಾಡಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿಗಳನ್ನು ಕೊಟ್ಟರುವ ಹಲವಾರು ನಿದರ್ಶನಗಳು ತಾಲೂಕ ತಹಶೀಲ್ದಾರ ಕಛೇರಿಯಲ್ಲಿ ನಿದರ್ಶನಗಳನ್ನು ನೋಡಬಹುದು.ರೈತರ, ಪ್ರತಿಭಟನೆಗಳು ಸರಕಾರಕ್ಕೆ ಮನವಿಗಳ ನೀಡುವಿಕೆಯಲ್ಲಿ ಹೆಚ್ಚುತ್ತಲೇ ಇರುವುದರಿಂದ ಅಂದಿನ ಶಾಸಕರಾದ ದೊಡ್ಡನಗೌಡ ಜಿ.ಪಾಟೀಲ್, ವಿಧಾನಸೌಧದ ಅಧಿವೇಶನದಲ್ಲಿ ರೈತಾಪಿ ವರ್ಗದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಸರಕಾರದ ಗಮನಕ್ಕೆ ತಂದ ಪರಿಣಾಮ ಹುನಗುಂದ ಮತಕ್ಷೇತ್ರದಲ್ಲಿ ಹನಿ ನೀರಾವರಿ ಯೋಜನೆಯಲ್ಲಿಯ ಕಾಮಗಾರಿಗಳನ್ನು ಪರಿಶೀಲಿಸಲು ಸರಕಾರ ತನಿಖಾ ಸಮೀತಿಯನ್ನು ರಚನೆ ಮಾಡಿ ಆದೇಶವನ್ನು ಹೊರಡಿಸಿತ್ತು ಆದರಂತೆ ಅಂದಿನ ಜೆ.ಡಿ.ಎಸ್. ಶಾಸಕರಾದ ಶಿವಲಿಂಗೇಗೌಡರು ಹಾಗೂ ಸಮಿತಿಯ ಅಧ್ಯಕ್ಷರು ಹುನಗುಂದ ಮತಕ್ಷೇತ್ರಕ್ಕೆ ಒಳಪಡುವ ಬೇವಿನಮಟ್ಟಿ ಗ್ರಾಮದವರೆಗೆ ಖುದ್ದಾಗಿ ಪರಿಶೀಲನೆ ಮಾಡಿ ಇದು ಸಂಪೂರ್ಣ ಬೋಗಸ್‌ ಕಾಮಗಾರಿ ಯಾಗಿರುವದೆಂದು ಕೂಡಿದ ನೂರಾರು ರೈತರ ಸಮ್ಮುಖದಲ್ಲಿ ಸಂಬಂಧಿಸಿದ ಕಂಪನಿಗಳ ಅಭಿಯಂತರರಿಗೆ ತರಾಟೆಗೆ ತಗೆದು ಕೊಂಡದ್ದನ್ನು ರೈತರು ಕಣ್ಣಾರೆ ನೋಡಿ ಸಾಹೇಬರ ಇದರಿಂದ ರೈತರಿಗೆ ಏನು ಲಾಭ ಎಂದು ಪ್ರಶ್ನೆಮಾಡಿದಾಗ ಸಮಿತಿಯ ಸದಸ್ಯರಾದ ಶಿವಲಿಂಗೇಗೌಡರು ನಾನು ಸುಮ್ಮನೆ ಬಿಡುವುದಿಲ್ಲ ನಾನು ಪಕ್ಕಾ ರೈತನಿದ್ದು ಇಂಥಹ ಭ್ರಷ್ಟಾಚಾರ ಕಂಪನಿಗಳಿಂದ ಸರಕಾರಕ್ಕೆ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾಮಾಣಿಕವಾಗಿ ಸರಕಾರಕ್ಕೆ ವರದಿಯನ್ನು ನೀಡುತ್ತೇವೆ. ಕಾರಣ ಹುನಗುಂದ ಮತಕ್ಷೇತ್ರದಲ್ಲಿ ಎಷ್ಟೊಂದು ಮುಗ್ಧ ರೈತರಿದ್ದಾರೆ ಎಂಬುವುದಕ್ಕೆ ಈ ಬ್ರಷ್ಟಾಚಾರದ ಹನಿ ನೀರಾವರಿ ಯೋಜನೆಯೇ ಜೀವಂತ ಸಾಕ್ಷೀ ಇದಕ್ಕಿಂತ ಬೇರೆ ಸಾಕ್ಷೀ ಬೇಕಾ ಎಂದು ರೈತರ ಬಗ್ಗೆ ಅನುಕಂಪದ ಮಾತುಗಳನ್ನಾಡಿ ಸಮಸ್ತ ರೈತರಿಗೆ ಭರವಸೆ ನೀಡುವವುದರ ಜೊತೆಗೆ ಈ ಯೋಜನೆ ನಮ್ಮ ಕಡೆ ಮಾಡಿದ್ದರೆ ಕೂಡಲೇ ಸಂಬಂಧಿಸಿದ ಕಂಪನಿಯವರನ್ನು ಕರಸಿ ಕಾಮಗಾರಿಯನ್ನು ಮಾಡದಂತೆ ಮತಕ್ಷೇತ್ರದಿಂದ ಓಡಿಸಿಬಿಡುತ್ತದೆ ಇದಕ್ಕೆ ರೈತಾಪಿ ವರ್ಗ ಕೇ-ಕೇ-ಹಾಕಿದರು ಆದರೆ ಬಾಳು ಒಂದು ಬೆಳಕಿನಾಟ ಆಸೆಯೊಂದು ಕತ್ತಲೆಯ ಓಟ ಎಂಬಂತೆ ಇದುವರೆಗೂ ಹುನಗುಂದ ಮತಕ್ಷೇತ್ರದಲ್ಲಿ ನಡೆದಿರುವ ಹನಿ ನೀರಾವರಿ ಕಳಪೆ ಕಾಮಗಾರಿಯನ್ನು ಪರಿಶೀಲಿಸಲು ಬಂದ ಸರಕಾರ ನೇಮಿಸಿದ ಪರಿಶೀಲನಾ ತನಿಖಾ ತಂಡ ವರದಿಯು ಸರಕಾರಕ್ಕೆ ತಲುಪಿದಿಯೋ ಅಥವಾ ಇಲ್ಲವೋ? ಎಂಬುವುದನ್ನು ಅಧಿವೇಶನ ನಡೆಸುವ ಮೂಲಕ ಸಭಾಧ್ಯಕ್ಷರೇ ಹುನಗಗುಂದ ಮತಕ್ಷೇತ್ರದ ರೈತಾಪಿ ವರ್ಗಕ್ಕೆ ತನಿಖಾ ತಂಡದ ವರದಿಯನ್ನು ಪ್ರಸ್ತುತ ಪಡಿಸಬೇಕು ಇಲ್ಲದಿದ್ದರೆ ನ್ಯಾಯ ಎಲ್ಲಿದೆಯೋ ಅಣ್ಣ ಬಡರೈತಾಪಿ ವರ್ಗ ಕೇಳುವುದು ಮತಕ್ಷೇತ್ರದಲ್ಲಿ ಸಾವಿರಾರು ಎಕರೆ “ಪಿಂಕ್ ಕಲರ್ ಗ್ರಾನೈಟ್ ಗೆ ಇರುವ ವಿಷಯ ರಾಜ್ಯ-ದೇಶ-ವಿದೇಶದ ನಾಗಕರಿಕಗೆ ತಿಳಿದಿರುವ ವಿಷಯ ಈ ಗಾನೈಟ್ ವ್ಯವಹಾರಕ್ಕೆ ಕೇವಲ ಶ್ರೀಮಂತ ಹಾಗೂ ಬಲಾಡ್ಯರ ಕಪಿ ಮುಷ್ಟಿಯಲ್ಲಿ ಸಿಲುಕಿರುವದು ದುರಂತ ಇಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಶಬ್ದಗಳನ್ನು ದೀಪ ಹಚ್ಚಿ ಹುಡಿಕಿದರೂ ಕಣ್ಣಿಗೆ ಕಾಣುವುದೇ ಇಲ್ಲಾ ಸುಮಾರು ಎರಡುವರೆ ದಶಕಗಳ ಹಿಂದೆ ಇಲಕಲ್ಲ ನಗರದಲ್ಲಿ ಪ್ರತಿನಿತ್ಯ ಸಣ್ಣ ವ್ಯವಹಾರದಿಂದ ದೊಡ್ಡ ವ್ಯವಹಾರದವರೆಗೆ ಲಕ್ಷ ಲಕ್ಷದವರೆಗೆ ವ್ಯವಹಾರ ಇತ್ತು ಇದಕ್ಕೆ ಮೂಲಕಾರಣ ಮತಕ್ಷೇತ್ರದ ಸಾವಿರಾರು ಎಕರೆ ಗ್ರಾನೈಟ್ ಪ್ರದೇಶಗಳಿಂದ ಗ್ರಾನೈಟ್ ಪಾಲಿಸಿಂಗ್ ಫ್ಯಾಕ್ಟರಿಗಳ ಪ್ರಾರಂಭಗೊಂಡಿದ್ದವು.

ಈ ಫ್ಯಾಕ್ಟರಿಗಳಲ್ಲಿ ದಿನನಿತ್ಯ ನೂರಾರು ಕಾರ್ಮಿಕರು ದುಡಿಯುತ್ತಿದ್ದರು ಇದರ ಜೊತೆಗೆ ಬಲಕುಂದಿ ಗ್ರಾಮಕ್ಕೆ ಹೊಂದಿಕೊಂಡು ರಿ.ಸಂ.ನಂ. 293/ಬ/1 ರಲ್ಲಿ 364 ಎಕರೆ ಹಾಗೂ ರಿ.ಸ.ನಂ. 296/ಎ1 ರಲ್ಲಿ 150 ಎಕರೆ ಒಟ್ಟು 514 ಎಕರೆ ಗ್ರಾನೈಟ್ ಪ್ರದೇಶದಲ್ಲಿ 1972 ರಲ್ಲಿ ಮದರಾಸಿನ ಆರ್.ವೀರಮಣಿ ಎಂಬ ವ್ಯಕ್ತಿಯ ಜೆಮ್ ಗ್ರಾನೈಟ್ ಕಂಪನಿ ಎಂಬ ಶಿರೋನಾಮದೊಂದಿಗೆ ಗ್ರಾನೈಟ್ ಬ್ಲಾಕ್ ಗಳನ್ನು ಗ್ರಾನೈಟ್ ಪ್ರದೇಶದ ಒಡಲಾಳದಿಂದ ತೆಗೆಯಲು ಪ್ರಾರಂಭಿಸದನು ಈ ಕಂಪನಿಯಲ್ಲಿ ಸಾವಿರಾರು ಕಾರ್ಮಿಕರು ಹಗಲು-ರಾತ್ರಿ ದುಡಿಯತ್ತಿದ್ದ ಪರಿಣಾಮ ಮತಕ್ಷೇತ್ರದಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ವ್ಯವಹಾರಗಳು ನಡೆಯುತ್ತಿದ್ದನ್ನ ಕಣ್ಣಾರೆ ಕಂಡಿರುವ ಕಾರ್ಮಿಕರಿಗೆ ಕೆಲಸಗಳಿಲ್ಲಾ ಇದಕ್ಕೆ ಮೂಲ ಕಾರಣ ಗ್ರಾನೈಟ್ ಪಾಲಿಸಿಂಗ್ ಫ್ಯಾಕ್ಟರಿಗಳು ಶೇ 80 ರಷ್ಟು ಬಂದಾಗಿರುವದರ ಜೊತೆಗೆ ಜೆಮ್ ಗ್ರಾನೈಟ್ ಕಂಪನಿಗೂ ದೊಡ್ಡದಾದ ಇಚ್ಚಾ ಶಕ್ತಿ ಕೊರತೆಯಂಬ ಕೀಲಿಪತ್ತವನ್ನು ಜಡಿದು ಕಂಪನಿಯನ್ನು ಬಂದ್‌ ಮಾಡಿಸಲಾಗಿದೆ ಗ್ರಾನೈಟ್ ಪಾಲಿಸಿಂಗ್ ಫ್ಯಾಕ್ಟರಿಗಳು-ಜೆಮ್ ಗ್ರಾನೈಟ್ ಕಂಪನಿ ಬಂದ್ ಆಗಿರುವದಕ್ಕೆ ಮೂಲಕಾರಣಕರ್ತರಾರು? ಸಾವಿರಾರು ಕಾರ್ಮಿಕರನ್ನು ಬೀದಿಗೆ ತಳ್ಳಿದ ಕಾಣದ ಶಕ್ತಿ ಯಾವುದು? ಕಾರ್ಮಿಕರು ಮಕ್ಕಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕ್ಷಣವನ್ನು ಮುಂದುವರಿಸದೇ ಅರ್ಧಕ್ಕೆ ನಿಲ್ಲಿಸಿ ಹೋಟೆಲ್ಲಗಳಲ್ಲಿ-ಮಾಲಗಳಲ್ಲಿ-ಚಹಾದಂಗಡಿಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಸೇರಲು ಕಾರ್ಣಿಕರ್ತರು ಯಾರು? ಸುಮಾರು ದಶಕಗಳಿಂದಲೂ ಹುನಗುಂದ ಮತಕ್ಷೇತ್ರಕ್ಕೆ ಜನಪ್ರತಿ ನಿಧಿಗಳು ಇದ್ದರು ಇರುತ್ತಲೇ ಇದ್ದಾರೆ ಯಾವ ಒಬ್ಬ ಜನಪ್ರತಿನಿಧಿಯೂ ಮತಕ್ಷೇತ್ರದಲ್ಲಿ ಅಮೂಲ್ಯವಾದ ಗ್ರಾನೈಟ್ ಸಂಪತ್ತ ಎಷ್ಟು ಎಕರೆ ಇದೆ ಎಂದು ಸರಕಾರದ ಗಮನಕ್ಕೆ ತಂದಿದ್ದರೆ ಅದರಲ್ಲೂ ಸರಕಾರದ ಹೆಸರಿನಲ್ಲಿ ಸವಿರಾರು ಎಕರೆಗಿಂತ ಅಧಿಕ ಗ್ರಾನೈಟ್ ಪ್ರದೇಶಗಳಿದ್ದು ಸರ್ಕಾರಗಳು ಸ್ವತಃ ಮುಂದಾಗಿ ಗ್ರಾನೈಟ್ ಕ್ವಾರಿಗಳನ್ನು ಗ್ರಾನೈಟ್ ಪಾಲಿಸಿಂಗ್ ಫ್ಯಾಕ್ಟರಿಗಳನ್ನು ಪ್ರಾರಂಭಿಸಬಹುದಿತ್ತು ಆದರೆ ಯಾವ ಒಬ್ಬ ಜನಪ್ರತಿನಿಧಿಯೂ ಸರ್ಕಾರದ ಗಮನಕ್ಕೆ ತರದೇ ಕುಂಟ ಕೋಣ ಮೂಕ ಜಾಣ ಎಂಬಂತೆ ತಮ್ಮ ತನವನ್ನು ಬೆಟ್ಟದೆತ್ತರಕ್ಕೆ ನಡೆಯುತ್ತಲೇ ಇದ್ದಾರೆ ಬೆಟ್ಟದ ಕೆಳಗಿರುವವರನ್ನು ಹಿಂದುರುಗಿ ನೋಡದೇ ನಂಗಾನಾಚ್ ಮಾಡುತ್ತಲೇ ತಲ್ಲೀನರಾಗಿರುವದು ಇದು ಕೂಡಾ ಮತಕ್ಷೇತ್ರದಲ್ಲಿ ಜನಸಾಮನ್ಯರು ಆರ್ಥಿಕ ಪರಿಸ್ಥಿತಿಯಿಂದ ಹಿಂದುಳಿಯಲು ಮೂಲಕಾರಣವಾಗಿದೆ. ಇದರಿಂದಾಗಿ ಸಾಮಾನ್ಯ ಜನರು ಕೆಲಸಗಳಿಲ್ಲದೆ ತಮ್ಮ ಸಂಸಾರದ ಜವಾಬ್ದಾರಿ ಎಂಬ ಬದುಕೆಂಬ ಜಟಕಾಬಂಡಿಯನ್ನು ಉಚಿತವಾಗಿ ಸಿಗುವ ರೇಶನ್ ಅಕ್ಕಿ-ವಯೋವೃದ್ಧರಿಗೆ ಸಿಗುವ ಪಿಂಚಣಿ-ರೈತಾಪಿ ವರ್ಗಕ್ಕೆ ಸಿಗುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣಗಳಿಂದ ಓಡಿಸುತ್ತಲೇ ಇದ್ದಾರೆ. ಮತಕ್ಷೇತ್ರದಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹಣಕಾಸಿನ ಸಂಸ್ಥೆಗಳು-ಕ್ರೀಡಾ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳು-ನಗರಗಳ ಹಿತಚಿಂತಕರ ವೇದಿಕೆಗಳು-ಗ್ರಾಮೀಣ ಪ್ರದೇಶಗಳಲ್ಲಿ ವೇದಿಕೆಗಳು ಅಲ್ಲದೇ ಹಲವಾರು ವಿವಿಧ ಸಂಘಟನಾ ಶಕ್ತಿಗಳು ಇದ್ದರೂ ಬಡತನ- ನಿರುದ್ಯೋಗದ ವಿಷಯವಾಗಿ ಇದುವರೆಗೂ ಯಾವದೇ ಒಬ್ಬ ಜನಪ್ರತಿನಿಧಿಯಾಗಲಿ-ಸಂಘಟನೆಗಳಾಗಲಿ ಪ್ರಯತ್ನ (ಚಿಂತನೆ) ಮಾಡದೇ ಇರುವದು ಎಷ್ಟು ಸಮಂಜಸ ಪ್ರತಿಯೊಂದು ನಗರ ಪ್ರದೇಶಗಳಲ್ಲಿ-ಗ್ರಾಮೀಣ ಪ್ರದೇಶಗಳಲ್ಲಿ ಭಾಷೆಗಾಗಿ- ಕನ್ನಡಕ್ಕಾಗಿ-ರೈತರಿಗಾಗಿ ಹಲವಾರು ವಿಷಯಗಳ ಬಗ್ಗೆ ಬ್ಯಾನರ್ ಭರಾಟೆ ಜೈಕಾರದ ಭರಾಟೆ ಮಾಡುವರೇ ವಿನಾಃ ತಾಲೂಕಿನಲ್ಲಿ ಸಂಪದ್ಭರಿತ ಭೂಮಿಗಳ ಬಗ್ಗೆ ಸಂಪದ್ಭರಿತ ಗ್ರಾನೈಟ್ ಪ್ರದೇಶಗಳ ಬಗ್ಗೆ ಇದರ ಜೊತೆಗೆ ನಿರುದ್ಯೋಗದ ಬಗ್ಗೆ ಯಾರು ಚಳವಳಿ ಮಾಡಿರುವುದಿಲ್ಲಾ ಇದು ಕೂಡಾ ಮತಕ್ಷೇತ್ರದಲ್ಲಿಯ ಬಡತನ-ನಿರುದ್ಯೋಗಕ್ಕೆ ಕಾರಣ ಹಲವು ದಶಕಗಳ ಹಿಂದಿನಿಂದ ಭೂಮಿ-ಗ್ರಾನೈಟ್-ಕೈಗಾರಿಕೆಗಳ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದರೆ. ಸರ್ಕಾರಗಳು ಚಿಂತನೆ ಮಾಡಿ: ಒಂದು ಶಾಶ್ವತ ಪರಿಹಾರ ನೀಡುತ್ತಿತ್ತೋವಿನೋ ಆದರೆ ಕಣ್ಣಿದ್ದರೂ ಕಿವಿಗಳಿದ್ದರೂ ಯಾರು ಈ ಪ್ರಮುಖ ವಿಷಯಗಳ ಬಗ್ಗೆ ಚಿಂತನೆ ಮಾಡದೇ ಇಂದಿಗೂ ಚಿಂತಿಸದೇ ನಿರುದ್ಯೋಗ, ಬಡತನದ ಹಾದಿಯಲ್ಲಿಯೇ ಸಾಗಿರುವದು ಎಷ್ಟು ವಿಪರ್ಯಾಸಒಟ್ಟಾರೆ ಹುನಗುಂದ ಮಕ್ಷೇತ್ರದಲ್ಲಿ ಅಪಾರ ಪ್ರಮಾಣದ ಗ್ರಾನೈಟ್ಸ್ ಫಲವತ್ತಾದ ಭೂಮಿ ಇದ್ದರು ಒಂದು ಮತಕ್ಷೇತ್ರದ ಜನತೆಗೆ ಪ್ರಯೋಜನ ಇಲ್ಲದಂತಾಗಿದೆ. ಯಾವ ಉದ್ದೇಶದಿಂದ ದುಡಿಯುವ ಕಾರ್ಮಿಕರಿಗೆ ಕೆಲಸಗಳು ಇಲ್ಲಾ? ಫಲವತ್ತಾದ ಭೂಮಿಗಳಿಗೆ ಮೂರು ನದಿಗಳು ಹರಿದರೂ ಅದರ ಸದುಪಯೋಗ ರೈತಾಪಿ ವರ್ಗಕ್ಕೆ ಮರೀಚಿಕೆಯಾಗಿರುವದು ಯಾವ ಉದ್ದೇಶಕ್ಕೆ? ಯಾರು ಪರಿಹಾರ ನೀಡಬೇಕು. ಹುನಗುಂದ ಮತಕ್ಷೇತ್ರೇಶ್ವರಾ.

ವರದಿಗಾರರು:ಮಹಾಂತೇಶ, ಎಸ್‌. ಜಿಗಳೂರಹುನಗುಂದ-587118ಮೊಬೈಲ್ ನಂಬರ್. 7996517876

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button