ದೇವಸ್ಥಾನದಲ್ಲಿ ಕದ್ದ ಆರೋಪಿಯನ್ನು ಬಂಧಿಸಿದ ಸಿಪಿಐ ರವರಿಗೆ ಸನ್ಮಾನ
ಇಂಡಿ ಜುಲೈ.24
ತಾಲೂಕಿನ ಮಿರಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವರ ದೇವಸ್ಥಾನದಲ್ಲಿನ ಮೂರ್ತಿ ಹಾಗೂ ಬೆಳ್ಳಿ,ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಇಂಡಿ ಸಿಪಿಐ ಮಹಾದೇವ ಶಿರಹಟ್ಟಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಮಿರಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಅರ್ಚಕರು ಹಾಗೂ ಗ್ರಾಮಸ್ತರು ಅವರನ್ನು ಸನ್ಮಾನಿಸಿದರು.

ಜೂ.27 ರಂದು ಕಳ್ಳರು ಮಿರಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವರ ದೇವಸ್ಥಾನದ ಬಾಗಿಲು ಮುರಿದು ಶ್ರೀ ಸಂಗಮೇಶ್ವರ ದೇವರ ಮೂರುವರಿ ಕೆಜಿಯ ಮೂರ್ತಿಯ ಬೆಳ್ಳಿಮುಖ,ಬೆಳ್ಳಿಯ ನಾಗರ ಹೆಡೆ,ಅರ್ಧ ಗ್ರಾಂ ಕಣ್ಣಬಟ್ಟಲ,1 ಕೆಜಿಯ ಲಿಂಗದ ಮೇಲಿನ ಬೆಳ್ಳಿಯ ನಾಗಪ್ಪ,ಬೆಳ್ಳಿ ಗಾಯತ್ರಿ,ಗಣಪತಿ ಮೂರ್ತಿ,ಬೆಳ್ಳಿ ತಂಬಿಗೆ,ಚೈನ್ ಹಾಗೂ ಬೆಳ್ಳಿಯ ಪಾದಕಗಳು,ಬೆಳ್ಳಿಯ ತ್ರೀಶೂಲ,3 ಈಶ್ವರ ಲಿಂಗಗಳು,ಸಣ್ಣ ನಾಗಪ್ಪನ 3 ಮೂರ್ತಿಗಳು,ಬಸವಣ್ಣನ ಮೂರ್ತಿ,ದೇವರ ಹಣಿಪಟ್ಟಿ ಸೇರಿದಂತೆ 2.10 ಲಕ್ಷ ಮೌಲ್ಯದ (10 ವರ್ಷದ ಹಿಂದಿನ ಮೌಲ್ಯ) ಬೆಳ್ಳಿ,ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.ಪ್ರಕರಣವನ್ನು ಬೆನ್ನಟ್ಟಿದ ಇಂಡಿ ಸಿಪಿಐ ಮಹಾದೇವ ಶಿರಹಟ್ಟಿ ಅವರ ತಂಡ ಒಂದೇ ವಾರದಲ್ಲಿ ಆರೋಪಿ ಆಳಂದ ತಾಲೂಕಿನ ಉಮರ್ಗಾ ಗ್ರಾಮದ ಈರಣ್ಣ ಗೋಡಕೆ(22)ನನ್ನು ಪತ್ತೆ ಹಚ್ಚಿ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಬಳಿ ಜು.20 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳ್ಳತನ ಮಾಡಿದ ಆರೋಪಿ ಕಳ್ಳತನ ಮಾಡಿರುವ ಕುರಿತು ತಪ್ಪೋಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಗ್ರಾಮದ ದೇವಸ್ಥಾನದ ಕಮೀಟಿ ಹಾಗೂ ಗ್ರಾಮಸ್ಥರು ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘೀಸಿ ಸಿಪಿಐ ಮಹಾದೇವ ಶಿರಹಟ್ಟಿ,ಪಿಎಸೈ ಸೋಮೇಶ ಗೆಜ್ಜಿ, ಪೊಲೀಸ್ ಸಿಬ್ಬಂದಿಯಾದ ವಿ.ಜಿ.ಶಿರಮಗೊಂಡ,ಆರ್.ಪಿ.ಗಡೇದ,ಎಂ.ಎಸ್.ಕುಡಿಗನೂರ,ಎಸ್.ವೈ.ಜೇರಟಗಿ,ಎಸ್.ಪಿ.ಕಾಂಬಳೆ ಅವರನ್ನು ಸನ್ಮಾನಿಸಿದರು.ದೇವಸ್ಥಾನದ ಅರ್ಚಕರಾದ ಚಿದಂಬರ ಪಾಟೀಲ,ಕಲ್ಯಾಣರಾವ ಕುಲಕರ್ಣಿ,ಬಾಳಾಸಾಹೇಬ ಕುಲಕರ್ಣಿ,ಶ್ರೀಹರಿ ಪಾಟೀಲ,ದತ್ತಾತ್ರೇಯ ಪಾಟೀಲ ಹಾಗೂ ಗ್ರಾಮದ ಗಂಗಾಧರ ಬಡಿಗೇರ,ಧರೇಪ್ಪ ಹಳ್ಳಿ,ಚಿದಾನಂದ ಆಲಮೇಲ, ಮಹಾದೇವ ರಾವೂರ,ಭೀಮಣ್ಣ ಅವಟಿ ಇತರರು ಈ ಸಂದರ್ಭದಲ್ಲಿ ಇದ್ದರು.
ಜಿಲ್ಲಾ ವರದಿಗಾರರು:ರಾಜಶೇಖರ್.ಶಿಂಧೆ ಶಿರಗುರ