ಜನರ ಸೇವೆಯೇ ದೇವರ ಸೇವೆ — ಎಂ ರಾಮೇಗೌಡ.
ತರೀಕೆರೆ ಜುಲೈ.26

ಜಿಲ್ಲಾ ಪಂಚಾಯಿತಿಯ ಸದಸ್ಯನಾಗುವ ಆಸೆ ನನಗಿಲ್ಲ, ತಾಲೂಕು ಪಂಚಾಯಿತಿ ಸದಸ್ಯರಾಗುವ ಆಸೆಯೂ ನನಗಿಲ್ಲ ಎಂದು ಎಂ ಸಿ ಹಳ್ಳಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಸದಸ್ಯರಾಗಿ ಆಯ್ಕೆಯಾಗಿರುವ ಎಂ ರಾಮೇಗೌಡ ಇಂದು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸದಸ್ಯತ್ವ ಪ್ರಮಾಣ ಪತ್ರ ಪಡೆದು ಮಾತನಾಡಿದರು.
ನನಗೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡಿ ಜನರ ಸೇವೆ ಮಾಡಿದರೆ ಅದುವೇ ದೇವರ ಸೇವೆ ಮಾಡಿದಂತೆ ಎಲ್ಲಾ ಜಾತಿ ಧರ್ಮದವರನ್ನು ವಿಶ್ವಾಸದಿಂದ ಕಾಣುತ್ತೇನೆ. ಗ್ರಾಮ ಪಂಚಾಯಿತಿಯ ಯಾವುದೇ ದುಡ್ಡು ಕಾಸು ನನಗೆ ಬೇಡ, ಒಳ್ಳೆಯ ಕೆಲಸ ಮಾಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣ. ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಎಚ್ ರಂಗಪುರದ ಸದಸ್ಯರಾದ ಮೋಹನ್ ಕುಮಾರ್ ನಿಧನರಾದ ಸ್ಥಾನಕ್ಕೆ ಐದು ಜನರು ಸ್ಪರ್ಧಿಸಿದ್ದು ಉಳಿದ ನಾಲ್ಕು ಜನರಿಗಿಂತ ಅತಿ ಹೆಚ್ಚು ಅಂದರೆ 365 ಮತಗಳನ್ನು ಪಡೆದು ಹತ್ತಿರದ ಪ್ರತಿಸ್ಪರ್ಧಿ ಮಂಜುನಾಥ ರವರಿಗಿಂತ 261 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಆರ್ ಓ ಅವಿನಾಶ್ ಸಹಾಯಕ ಚುನಾವಣೆ ಅಧಿಕಾರಿ ವಿ ಪಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತೆದಾರ್ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ನಂತರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಇ ಧನಂಜಯ, ಹೊಸ ಬಡಾವಣೆ ಪ್ರಶಾಂತ್, ಎಮ್ ಎಚ್ ರಾಮಚಂದ್ರ, ಏಳುಮಲೈ, ಹೆಚ್‌ವಿ ನಾಗೇಶ್, ವಿಶ್ವನಾಥ, ಚೆಲುವ, ಗುರು, ಕುಮಾರಣ್ಣ, ರಾಜು, ರೇವಣ್ಣ, ಪ್ರಮೋದ್, ನಟರಾಜ್ ಮುಂತಾದವರು ಪುಷ್ಪ ಹಾರಗಳೊಂದಿಗೆ ಅಭಿನಂದನೆ ಸಲ್ಲಿಸಿ ವಿಜಯೋತ್ಸವ ಆಚರಿಸಲಾಯಿತು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ