ರಾಜಕೀಯ ಬೆಳವಣಿಗೆಗೆ ಪತ್ರಕರ್ತರೇ ಕಾರಣ — ಕೆ.ಜೆ.ಜಾರ್ಜ್.

ಚಿಕ್ಕಮಗಳೂರು ಜುಲೈ.30

ರೈತರು ಸಂಕಷ್ಟದಲ್ಲಿದ್ದಾರೆ ಅವರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ ಖಾತೆ ಸಚಿವರಾದ ಕೆಜೆ ಜಾರ್ಜ್ ಹಿಂದು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ, ಕರ್ನಾಟಕ ಪತ್ರಕರ್ತರ ಸಂಘ, ಐ ಜೆ ಯು, ನವದೆಹಲಿ, ಇವರು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ನಾನು ಕೊಡಗಿನಲ್ಲಿ ರಾಜಕೀಯವಾಗಿ ಬೆಳೆಯಲು ಪತ್ರಿಕೆಗಳು ಪತ್ರಕರ್ತರ ಪ್ರೋತ್ಸಾಹ ಕಾರಣ, ಪತ್ರಕರ್ತರ ಸಲಹೆ ತುಂಬಾ ಅನುಕೂಲವಾದದ್ದು, ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಶಾಸಕರಾಗಲಿ, ಮಂತ್ರಿಗಳಾಗಲಿ ಯಾರು ಸಹ ಹಣ ತೆಗೆದುಕೊಳ್ಳುವಂತಿಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವಧೂತ ವಿನಯ್ ಗುರೂಜಿ ಮಾತನಾಡಿ,ಸಮಾಜದಲ್ಲಿ ಬದಲಾವಣೆಯನ್ನು ತರುವುದೇ ಪತ್ರಿಕೆಗಳು, ಪತ್ರಕರ್ತರು ಸಮಾಜದ ಒಳತಿನ ಬಗ್ಗೆ ಯೋಚಿಸುತ್ತಾರೆ ಅಷ್ಟೇ ಅಲ್ಲದೆ ತಮ್ಮ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಇರುವುದರಿಂದ ಗೃಹಸ್ಥನಾಗಿ ಕಷ್ಟಗಳನ್ನು ಅನುಭವಿಸಬೇಕಾಗಿದೆ.

ಸಿದ್ದಾಂತದಿಂದ ನಡೆದು ಸಮಾಜದ ಅಂಕುಡೊಂಕು ತಿದ್ದಬೇಕು ಎಂದು ಹೇಳಿದರು. ಶೃಂಗೇರಿ ಶಾಸಕರಾದ ಟಿ ಡಿ ರಾಜೇಗೌಡ ಮಾತನಾಡಿ ಜಿಲ್ಲೆಯಲ್ಲಿ ಮಳೆಯಿಂದ ತೊಂದರೆ ಭೂ ಕುಸಿತ ಸಮಸ್ಯೆ ಗಳಿಗೆ ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಜೆ ಜಾರ್ಜ್ ರವರು ಸ್ಪಂದಿಸಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಕಮ ಕೈಗೊಂಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆ, ಭ್ರಷ್ಟಾಚಾರಕ್ಕೆ ಪತ್ರಿಕೆಗಳು ಕಡಿವಾಣ ಹಾಕಿದೆ. ಸಂವಿಧಾನದಲ್ಲಿ ತಿಳಿಸಿರುವಂತೆ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ,ಸರ್ಕಾರದ ಸೌಲಭ್ಯ ಕುರಿತು ಜನರಿಗೆ ತಿಳಿಸಿ,ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್ ಉಪಸಭಾಪತಿಯಾದ ಎಂಕೆ ಪ್ರಾಣೇಶ್ ರವರು ಚರ್ಮ ವಾದ್ಯ ನುಡಿಸುವ ಮೂಲಕ, ಜಿಲ್ಲಾ ಸಾಂಸ್ಕೃತಿಕ ಘಟಕವನ್ನು ಉದ್ಘಾಟನೆ ಮಾಡಿ,ಅಧಿಕಾರಿಗಳ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ನೆನಪಿಸುವ ಕೆಲಸ ಪತ್ರಿಕೆಗಳು ಮಾಡುತ್ತಿವೆ ಎಂದು ಹೇಳಿದರು. ಚಿಕ್ಕಮಗಳೂರು ಕ್ಷೇತ್ರದ ಶಾಸಕರಾದ ಎಚ್ ಡಿ ತಮ್ಮಯ್ಯ ಮಾತನಾಡಿ ಸಂವಿಧಾನದ ಮೂರು ಅಂಗಗಳ ಜೊತೆಗೆ ನಾಲ್ಕನೇ ಅಂಗವಾದ ಪತ್ರಿಕಾ ರಂಗ ತುಂಬಾ ಪ್ರಾಮುಖ್ಯತೆ ಪಡೆದಿದೆ.

ಮಳೆಯಿಂದ ವಿದ್ಯುತ್ತು ತೊಂದರೆಯಾಗಿದ್ದು ಸಚಿವರಾದ ಕೆಜೆ ಜಾರ್ಜ್ ರವರು ತಕ್ಷಣ ಸ್ಪಂದಿಸಿ ವಿದ್ಯುತ್ ಸಮಸ್ಯೆಯನ್ನು ಬಗೆರಿಸಿದ್ದಾರೆ, ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿರುವುದು, ಶಾಂತಿ ನೆಮ್ಮದಿಯೊಂದಿಗೆ ಜನಸ್ನೇಹಿ ಆಡಳಿತವೇ,ನಮ್ಮ ಉದ್ದೇಶ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ ಎಂ ರಾಜಶೇಖರ್ ಮಾತನಾಡಿ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು, ಅವರಿಗೆ ಭದ್ರತೆ ಇಲ್ಲಾ, ಪತ್ರಿಕೋದ್ಯಮ ಸಂಕಷ್ಟದಲ್ಲಿದೆ,ಪತ್ರಕರ್ತರಿಗೆ ನಿವೃತ್ತಿ ವೇತನ ಸಿಗುತ್ತಿಲ್ಲ , ಮಾಶಾಸನ ಸಿಗುತ್ತಿಲ್ಲ, ಉಚಿತ ಬಸ್ಸು ಪ್ರಯಾಣದ ಪಾಸುಗಳು ಕೊಡುತ್ತಿಲ್ಲ, ಪತ್ರಕರ್ತರಿಗೆ ವಸತಿ ಸಮಸ್ಯೆ ಬಗೆಹರಿಸಿ ಪತ್ರಕರ್ತರ ಬಡಾವಣೆಗಳನ್ನು ಎಲ್ಲಾ ತಾಲೂಕಿನಲ್ಲೂ ನಿರ್ಮಾಣ ಮಾಡಬೇಕು. ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು. ಪತ್ರಕರ್ತರಾದ ಗುರುಶಾಂತಪ್ಪ, ಮಹಾರುದ್ರ, ಮೊಹಮ್ಮದ್ ಇಬ್ರಾಹಿಂ, ಎಚ್ಎಸ್ ಶಿವಕುಮಾರ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಓಂಕಾರ ಸ್ವಾಮಿ, ನಿವೃತ್ತ ರಾಜಸ್ವ ನಿರೀಕ್ಷಕರಾದ ಸತ್ಯನಾರಾಯಣರವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಮಹಿಳಾ ಪತ್ರಕರ್ತರಾದ ಶಾರದಾ,ತನುಜಾ, ಶೋಭಾ ರವರನ್ನು ಹಾಗೂ ತರೀಕೆರೆ ಪತ್ರಕರ್ತರಾದ ಕೆ ಆರ್ ರಮೇಶ್ ಕುಮಾರ್ ಸೇರಿದಂತೆ ಒಂಬತ್ತು ತಾಲೂಕಿನಿಂದ 9 ಜನ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button