ಬೆಳಗಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪ್ರಿಯಾದರ್ಶಿನಿ ಉಂಡೋಡಿ ಉಪಾಧ್ಯಕ್ಷರಾಗಿ ಶಾಂತವ್ವ ಮಾರುತಿ ಚನ್ನದಾಸರ ಆಯ್ಕೆ.
ಬೆಳಗಲ್ಲ ಆಗಷ್ಟ.1

ತಾಲೂಕಿನ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದ ಕೆಲವೇ ಕೆಲವು ಗ್ರಾ.ಪಂಗಳಲ್ಲಿ ಬೆಳಗಲ್ಲ ಗ್ರಾಮ ಪಂಚಾಯತಿ ಒಂದು. ಇನ್ನೇನು ಈ ಬಾರಿ ಕಾಂಗ್ರೇಸ್ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷರಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಅನೇಕರಿಗೆ ಮತ್ತೇ ನಿರಾಶೆ ತಂದಿದೆ.ಸೋಮವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು.ಅಧ್ಯಕ್ಷ ಸ್ಥಾನ ಸಾಮಾನ್ಯ ಉಪಾಧ್ಯಕ್ಷ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಿಯಾದರ್ಶಿನಿ ಉಂಡೋಡಿ ಕಾಂಗ್ರೆಸ್ ಕಡೆಯಿಂದ ಬಸವರಾಜ ನಾಗಠಾಣ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಬೆಂಬಲಿತ ಶಾಂತವ್ವ ಮಾರುತಿ ಚನ್ನದಾಸರ ಕಾಂಗ್ರೆಸ್‌ನ ರೇಣುಕಾ ಮಾದರ ನಾಮಪತ್ರ ಸಲ್ಲಿಸಿದರು.ನಂತರ ಚುನಾವಣೆಯಲ್ಲಿ ೮ ಮತಗಳನ್ನು ಪ್ರಿಯಾದರ್ಶಿನಿ ಉಂಡೋಡಿ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರೇ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರಿಗೆ ತಲಾ ೭ ಮತಗಳನ್ನು ಪಡೆದಿದ್ದರಿಂದ ಚೀಟಿ ಹಾಕಲಾಯಿತು ಅದರಲ್ಲಿ ಬಿಜೆಪಿ ಬೆಂಬಲ ಅಭ್ಯರ್ಥಿ ಶಾಂತವ್ವ ಮಾರುತಿ ಚನ್ನದಾಸರ ಆಯ್ಕೆಯಾದರು.ಸಂಭ್ರಮಾಚರಣೆ-ಬಿಜೆಪಿ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷರಾಗುತ್ತಿದ್ದಂತೆ ಬಿಜೆಪಿ ಮುಖಂಡರು,ಕಾರ್ಯಕರ್ತರು ಗುಲಾಲು ಎರಚಿ,ಸಿಹಿ ಹಂಚಿ,ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಈ ವೇಳೆ ಜಿ.ಪಂ ಮಾಜಿ ಸದಸ್ಯ ವೀರೇಶ ಉಂಡೋಡಿ,ಏಕಪ್ಪಯ್ಯ ಗ್ಯಾನಪ್ಪಯ್ಯನವರ,ಪರಸಪ್ಪ ಬೂದಗೂಳಿ,ಸಿದ್ರಾಮಪ್ಪ ದೇಸಾಯಿ,ಮುತ್ತನಗೌಡ ಗೌಡರ ಸೇರಿದಂತೆ ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ