ಕೂಡ್ಲಿಗಿ ಪಟ್ಟಣವನ್ನು ಶಿಕ್ಷಣ, ಆರೋಗ್ಯ ಮತ್ತು ವಾಣಿಜ್ಯ ನಗರವನ್ನಾಗಿ ಕಟ್ಟಲು ಪ್ರಯತ್ನಿಸೋಣ – ಶಾಸಕ ಡಾ, ಶ್ರೀ ನಿವಾಸ್.ಎನ್.ಟಿ
ಕೂಡ್ಲಿಗಿ ಆ.06

ಕೂಡ್ಲಿಗಿ ಪಟ್ಟಣ ಪಂಚಾಯತಿಯ ಆಡಳಿತ ಅಧಿಕಾರಿಗಳಾದ ಅಸಿಸ್ಟೆಂಟ್ ಕಮಿಷನರ್ ಶ್ರೀ ವಿವೇಕಾನಂದ ಅವರು ಹಾಗೂ ಪಟ್ಟಣ ಪಂಚಾಯತಿ ಸದಸ್ಯ ರೊಂದಿಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ ಅವರು ದಿನಾಂಕ 06-08- 24 ರಂದು ಸಭೆ ನಡೆಸಿ ಅಭಿವೃದ್ಧಿಗೆ ಒತ್ತು ಕೊಡಲು ಸೂಚಿಸಿದರು. ಕರ್ನಾಟಕ ಘನ ಸರ್ಕಾರದಲ್ಲಿ ನಮ್ಮ ಪಟ್ಟಣ ಸರ್ವ ರೀತಿಯ ಅಭಿವೃದ್ಧಿಗೆ ಶ್ರಮಿಸಲು ವಿವಿಧ ಅನುದಾನಗಳನ್ನು ತರಲು ಪ್ರಯತ್ನಿಸುತ್ತೇನೆ. ಅಧಿಕಾರಿಗಳು ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ವಿವಿಧ ವಾರ್ಡ್ ಗಳ ಕುಂದು ಕೊರತೆಗಳನ್ನು ಆಲಿಸಿ ಅಭಿವೃದ್ಧಿ ಪಡಿಸಲು ಶ್ರಮಿಸ ಬೇಕು. ನಮ್ಮ ಕೂಡ್ಲಿಗಿ ಪಟ್ಟಣವನ್ನು ಇಪ್ಪತ್ತು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ವಾಣಿಜ್ಯ ನಗರವನ್ನಾಗಿ ನಿರ್ಮಿಸುವ ಕಡೆಗೆ ನಾವು ಪ್ರಯತ್ನಿಸೋಣ ಎಂದರು. ಪಟ್ಟಣ ಪಂಚಾಯತಿ ಸದಸ್ಯರ ಬಾಕಿ ಉಳಿದ ವಿವಿಧ ಕಾಮಗಾರಿಗಳಿಗೆ ಅಧಿಕಾರಿಗಳು ಸ್ಪಂದಿಸ ಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ವಿವಿಧ ಸದಸ್ಯರು ಮತ್ತು ಅಧಿಕಾರಿಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.