ನಾದ ಗ್ರಾಮ ಪಂಚಾಯತಿಗೆ ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ.
ನಾದ ಕೆ.ಡಿ ಆಗಷ್ಟ.3

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮಪಂಚಾಯತಿಗೆ ದಿನಾಂಕ 02.08.2023 ರಂದು ಎರಡನೆ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ನಡೆಯಿತು.ಈ ಪಂಚಾತಿಗೆ ಒಟ್ಟು 21 ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಮೀಸಲಿರಿಸಿದ್ದ ಸಾಮಾನ್ಯ 2ಎ ಗೆ ಶ್ರೀ ಸಿಧರಾಯ ಐರೋಡಗಿಯವರು ಅವಿರೋಧಅಧ್ಯಕ್ಷರಾಗಿ ಆಯ್ಕೆಯಾದರು.ಅದೆ ರೀತಿ ಮೀಸಲಿರಿಸಿದ್ಧ ಪ.ಜಾತಿ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ಮತಿ ಜಯಶ್ರೀ .ಸೋ.ಮ್ಯಾಕೇರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇದು ಈ ಬಾರಿ ಈ ಪಂಚಾಯತ್ ಆಡಳಿತದಲ್ಲಿ ಗಿನ್ನಿಸ್ ದಾಖಲೆಯಾಗಿದ್ದು, ಈ ಸಂದರ್ಭದಲ್ಲಿ ಪಂಚಾಯಿತಿಯ 21 ಸದಸ್ಯರಲ್ಲಿ 20 ಸದಸ್ಯರು ಹಾಜರಿದ್ದರು . ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಹೊಸ ಸಂತೋಷವನ್ನುಂಟುಮಾಡಿದೆ.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ. ಇಂಡಿ.
..