ಸಿದ್ದರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಲಾವತಿ ವೇಲಾಯುಧನ್ ಆಯ್ಕೆ.
ತರೀಕೆರೆ ಆಗಷ್ಟ. 5

ಪಕ್ಷ ಭೇದ ಮರೆತು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿರಿ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆಎಚ್ ಮಹೇಂದ್ರ ರವರು ಹೇಳಿದರು. ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೂ ಸಹ ಸರಿಸಮವಾಗಿ ಕಾಮಗಾರಿಗಳನ್ನು ಮಾಡಬೇಕು ಎಂದು ಹೇಳಿದರು. ತರೀಕೆರೆ ತಾಲೂಕಿನ ಸಿದ್ದರಹಳ್ಳಿ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಲಾವತಿ ವೆಲಾಯೂದನ್, ಉಪಾಧ್ಯಕ್ಷರಾಗಿ ಅನುಪಮಾ ಈಶ್ವರಪ್ಪ, ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಂದು ಚುನಾವಣಾ ಅಧಿಕಾರಿಯದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಜೈನುಲಾಬ್ದಾನ್ ಘೋಷಣೆ ಮಾಡಿದರು. ನಂತರ ತರೀಕೆರೆ ಶಾಸಕರಾದ ಜಿಎಚ್ ಶ್ರೀನಿವಾಸ್ ರವರ ಪತ್ನಿಯಾದ ವಾಣಿ ಶ್ರೀನಿವಾಸರವರು ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನು ಅಭಿನಂದಿಸಿ, ಶಾಸಕರ ಸಹಕಾರದಿಂದ ಪಂಚಾಯಿತಿಗೆ ಹೆಚ್ಚಿನ ಅನುದಾನ ಪಡೆದು ಕಾಮಗಾರಿಗಳನ್ನು ಮಾಡಿಸಿರಿ ಎಂದು ಹೇಳಿದರು. ಪಂಚಾಯಿತಿ ಸದಸ್ಯರಾದ ವೀರಮಣಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಕೆಂಪೇಗೌಡ, ಮುಖಂಡರಾದ ರಂಗಪ್ಪ ಮಾತನಾಡಿದರು. ಪಿಡಿಒ ರವಿ ನಾಯಕ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ