ಹಜ್ ಯಾತ್ರಿಗಳಿಗೆ ಗೌವರ ಸನ್ಮಾನ.

ಇಂಡಿ ಆಗಷ್ಟ. 5

ಮುಸ್ಲಿಂ ಬಂಧುಗಳ ಪವಿತ್ರ ಹಜ್ ಯಾತ್ರೆ ಪೂರ್ಣಗೊಳಿಸಿ ಆಗಮಿಸಿದ ಮೌಲಾನಾ ಶಾಕೀರ್ ಹುಸೇನ್ ಕಾಸ್ಮಿ ಅವರಿಗೆ ಪಟ್ಟಣದ ಮಾಡೆಲ್ ಉರ್ದು ಪ್ರೌಢಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ರಹಿಮ್ ಅರಬ, ನಾಡಿನಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಲು ಮತ್ತು ಮಾನವೀಯ ಸಂಬಂಧಗಳನ್ನು ಸದೃಡಗೊಳಿಸಿ ಮನುಕುಲವನ್ನು ಗೌರವಿಸಲು ದೇವರ ಅನುಗ್ರಹ ಬಹು ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಮೌಲಾನಾ ಶಾಕಿರ್ ಹುಸೇನ್ ಕಾಸ್ಮಿ,ಸಮಾಜ ಸೇವಕ ಹಸನ ಮುಜಾವರ, ಶಾಲಾ ಮುಖ್ಯ ಶಿಕ್ಷಕ ರಫೀಕ್ ಮುಲ್ಲಾ,ಸಲಾವದ್ದೀನ್ ನಾಗೂರ,ಅಬ್ದುಲ್ ಪಟೇಲ್,ನಾಸಿರ್ ಇನಾಮದಾರ, ಮುಜೀಬ್ ಅಫಜಲಪುರ, ಮುನ್ನಾ ಇಂಡೀಕರ್ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.

ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Check Also
Close
Back to top button