ಯಶಸ್ವಿಯಾದ 3ನೇ ದಿನದ ಶಿಶುಪಾಲನಾ ತರಬೇತಿ ಕಾರ್ಯಾಗಾರ.
ಬಾಗಲಕೋಟ ಆಗಷ್ಟ.10





ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಕೂಸಿನ ಮನೆ (ಶಿಶುಪಾಲನಾ ಕೇಂದ್ರ)ದ ಕಾರ್ಯಕರ್ತೆಯರಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮೂರನೇ ದಿನದ ಕಾರ್ಯಾಗಾರ ಜರುಗಿತು.ಈ ಕಾರ್ಯಾಗಾರದಲ್ಲಿ, ಆಹಾರ, ಆರೋಗ್ಯ, ಸ್ವಚ್ಛತೆ, ಶಿಕ್ಷಣ ಸೇರಿ ಹಲವು ಅಂಶಗಳನ್ನು ತಿಳಿಸಿಕೊಡಲಾಯಿತು. ಜೊತೆಗೆ ಒಂದಿಷ್ಟು ಆಟ, ಸಂಗೀತ ಸೇರಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಶುಪಾಲನಾ ಕಾರ್ಯಕರ್ತೆ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಸವಿವರವಾಗಿ ತಿಳಿಸಲಾಯಿತು.ಈ ಸಂದರ್ಭದಲ್ಲಿ ಮಾಸ್ಟರ್ ಟ್ರೇನರ್ಸ್ ಬಸವರಾಜ ಕೊಪ್ಪದ, ವೆಂಕಪ್ಪ ಗಿರಿತಮ್ಮನವರ, ಐಇಸಿ ಸಂಯೋಜಕ ಸಮೀರ ಉಮರ್ಜಿ , ವಾದಿರಾಜ ಕುಲಕರ್ಣಿ, ಕಾಯಕ ಮಿತ್ರರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.