ಪೌರಕಾರ್ಮಿಕರಿಗೆ ಪಥಸಂಚಲನ ಪೂರ್ವ ತರಬೇತಿ.
ತರೀಕೆರೆ ಆಗಷ್ಟ.10

ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆ ಜೊತೆಗೆ ನಗರವಾಸಿಗಳ ಆರೋಗ್ಯವನ್ನು ಕಾಪಾಡುವುದರೊಂದಿಗೆ, ಕಳೆದ ಮೂರು ವರ್ಷಗಳಿಂದ ನಾಡ ಹಬ್ಬಗಳ ಆಚರಣೆ ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆ, ಗೃಹರಕ್ಷಕ ದಳ, ಶಾಲಾ ಕಾಲೇಜು ಮಕ್ಕಳ ಜೊತೆಗೆ ಪೌರಕಾರ್ಮಿಕರು ಸಹ ಪಥ ಸಂಚಲನ ಮಾಡುತ್ತಿದ್ದಾರೆ.
ಮುಂಬರುವ ಆಗಸ್ಟ್ 15 ಸ್ವತಂತ್ರ ದಿನಾಚರಣೆಯ ಪ್ರಯುಕ್ತ, ಪೌರಕಾರ್ಮಿಕರು ಪಥ ಸಂಚಲನದಲ್ಲಿ ಭಾಗವಹಿಸಲು, ಜನಸ್ನೇಹಿ ಪುರಸಭಾ ಮುಖ್ಯ ಅಧಿಕಾರಿಯಯಾದ ಪ್ರಶಾಂತ್ ರವರು ಕಳೆದ ಮೂರು ದಿನಗಳಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಪೌರಕಾರ್ಮಿಕರಿಗೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 1 ಗಂಟೆಗಳ ಕಾಲ ಪತನ ಸಂಚಲನ ಪೂರ್ವಭಾವಿ ತರಬೇತಿ ನೀಡುತ್ತಿದ್ದಾರೆ. ಪೌರ ಕಾರ್ಮಿಕರು ಸಹ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ.ತರೀಕೆರೆ