ಭೀಮಾತೀರದಲ್ಲಿ ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಜಪ್ತಿ!.
ಇಂಡಿ ಆಗಷ್ಟ.16

ಯಾವುದೋ ಕೆಲಸಕ್ಕಾಗಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡು ಹೋಗುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗಿಳಿದು ಕಂಟ್ರಿ ಪಿಸ್ತೂಲ್, ಜೀವಂತ ಗುಂಡು ಜಪ್ತಿಗೈದಿದ್ದಾರೆ. ಇಂಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಘಟನೆ ಸಂಭವಿಸಿದೆ. ಲಚ್ಯಾಣ ಗ್ರಾಮದ ಅನಿಲ ಮಲ್ಲಪ್ಪ ಬಂಡಾರಿ (35) ಬಂಧಿತ ಆರೋಪಿ. ಇನ್ನು ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದಿಂದ ಅಹಿರಸಂಗ ಕಡೆಗೆ ಹೋಗುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಸೋಮೇಶ ಗೆಜ್ಜಿ ನೇತೃತ್ವದಲ್ಲಿ ದಾಳಿಗಿಳಿದು ಒಂದು ಕಂಟ್ರಿ ಪಿಸ್ತೂಲ್, ಎರಡು ಜೀವಂತ ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್ಲದೇ, ಆರೋಪಿಯ ವಿರುದ್ಧ ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಾಳಿಯಲ್ಲಿ ಇಂಡಿ ಗ್ರಾಮೀಣ ಪೋಲಿಸ್ ಠಾಣೆಯ ಉಸ್ತುವಾರಿ ಸಿಪಿಐ ರತನಕುಮಾರ ಜೀರಗಾಳ,ಎ ಎಸ್ ಐಗಳಾದ ಎಸ್ ಎಂ ಹೊಟಗಾರ,ಎಸ್ ಎಸ್ ತಳವಾರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಎಸ್ ವೈ ಜೇರಟಗಿ, ಆರ್ ಪಿ ಗಡೇದ, ಎಂ ಎಸ್ ಕೂಡಿಗನೂರ, ರವಿ ಕೋಟೆ, ಪುಂಡಲೀಕ ಬಿರಾದಾರ, ಜೇಟ್ಟೆಪ್ಪ ದೊಡಮನಿ ಶ್ರೀಶೈಲ್ ಅವಜಿ.ಇದ್ದರು. ಇವರ ಕಾರ್ಯವೈಖರಿಯ ಬಗ್ಗೆ ಮಾನ್ಯ ಎಸ್.ಪಿ. ಸಾಹೇಬರು ಶ್ಲಾಘಿಸಿದ್ದು ಇರುತ್ತದೆ.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ