“ಸೃಷ್ಠಿಯ ಸಿರಿತನದ ಸ್ನೇಹ, ಕಾಯಕ ನಿಜ ಗೌರವ”…..

ಜೀವನದ ಸೋಲು ಗೆಲುವಿನ




ಲೆಕ್ಕ ಹಾಕದಿರು
ಅರಿಷಡ್ವರ್ಗ ಸೋಲಿಸು
ಸೋಮಾರಿತನದ ಜಡತ್ವ ನಾಶಪಡಿಸು
ದುಷ್ಟ ಭ್ರಷ್ಟತೆಯ ನಾಶಮಾಡು
ಕಷ್ಠ ಕಾರ್ಪಣ್ಯ ಅನುಭವಿಸು
ಶುಭ ಸುಖ ನೆಮ್ಮದಿ ಸಂತೃಪ್ತಿ ಗಳಿಸು
ಅಹಂಕಾರ ಕೋಪ ದ್ವೇಷ ಅಳಿಸು
ಅನ್ನದಾತರ ಸೈನಿಕರ ಗೌರವಿಸು
ಗುರು ಹಿರಿಯರ ಪುರಸ್ಕರಿಸು
ನಮಸ್ಕರಿಸು
ಸ್ನೇಹಿತರ ಹಿತೈಷಿಗಳ ಧೂಷೀಸಬೇಡ
ಬಂಧು ಬಾಂಧವರ ಋಣಭಾರ
ಇಳಿಸು
ವೃತ್ತಿಬಾಂಧವರ ಅವಮಾನಿಸದಿರು
ತಂದೆ ತಾಯಿಯ ಕಡೆಗಾಣಿಸದಿರು
ಸಹೋದರ ಸಹೋದರಿಯರ
ತಾತ್ಸರ ಮಾಡದಿರು
ಏನೇ ಬರಲಿ ಧೈರ್ಯದಿಂದಿರು
ಒಬ್ಬಂಟಿಗನಾದರೂ ಸರಿ
ಸ್ವಾಭಿಮಾನಿಯಾಗು
ಗೌರವ ಕೊಡದಿರುವವರ ಬಗ್ಗೆ
ಚಿಂತಿಸದಿರು
“ಸೃಷ್ಠಿಯ ಸಿರಿತನದ ಸ್ನೇಹ,
ಕಾಯಕ ನಿಜ ಗೌರವ”
ಸುಖ ಜೀವನ ಸೊಗಸು
ನಗಸಿ ಅಳಿಸುವವರ ಏದಿರು
ಕುಗ್ಗದಿರು ಮನವೇ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.