ಹುಣಸಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ – ಇಂದ್ರಮ್ಮ ಆಯ್ಕೆ.
ತರೀಕೆರೆ ಡಿ. 12

ಅಭಿವೃದ್ಧಿ ಕೆಲಸದಲ್ಲಿ ತಾರತಮ್ಯ ಮಾಡದೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಆದ್ಯತೆ ನೀಡುತ್ತೇನೆ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಇಂದ್ರಮ್ಮ ರವರು ಅಭಿನಂದನಾ ಸಮಾರಂಭದಲ್ಲಿ ಹೇಳಿದರು. ಅವರು ಇಂದು ಹುಣಸಘಟ್ಟ ಗ್ರಾಮ ಪಂಚಾಯಿತಿಯಲ್ಲಿ, ವಿನೋದಭಾಯಿ ಮಲ್ಲೇಶ್ ನಾಯಕ್ ರವರಿಂದ ತೆರುವಾದ, ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದರು. ನಿಕಟ ಪೂರ್ವ ಅಧ್ಯಕ್ಷರಾದ ವಿನೋದಬಾಯಿ ಮಲ್ಲೇಶ ನಾಯಕ್ ಮಾತನಾಡಿ ನನ್ನ ಅವಧಿಯಲ್ಲಿ ಯಾವುದೇ ಸಮಸ್ಯೆಗಳು ಇಲ್ಲದೆ ಉತ್ತಮವಾದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತೇನೆ. ಇಂದ್ರಮ್ಮ ರವರು ಸಹ ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಹೇಳಿದರು. ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಮತ್ತು ಸಹಾಯಕ ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಗಣೇಶ್ ಹಾಗೂ ಸಿಬ್ಬಂದಿ ವರ್ಗ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು. ಉಪಾಧ್ಯಕ್ಷರಾದ ರಮೇಶ್ ನಾಯಕ್, ಸದಸ್ಯರಾದ ರವಿಕುಮಾರ್, ದೇವೇಂದ್ರಪ್ಪ, ಪ್ರಿಯಾಂಕಾ, ಗೌರಮ್ಮ, ಶ್ರೀನಿವಾಸ, ಮಂಜುನಾಥ, ವೀಣಾ,ಚೇತನ್ ಕುಮಾರ್,ಗಂಗಮ್ಮ, ಪಿಡಿಒ ಚೇತನ್ ಕುಮಾರ್, ಪ್ರಸನ್ನ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್. ತರೀಕೆರೆ.ಚಿಕ್ಕಮಗಳೂರು

