ಅಮರ ದೇವರ ಗುಡ್ಡ ಗೊಲ್ಲರ ಹಟ್ಟಿಯಲ್ಲಿ ವಾಂತಿಭೇದಿ 20 ಜನ ಅಸ್ವಸ್ಥ, ಚೇತರಿಕೆ, ವಿಷಯ ತಿಳಿದ ತಕ್ಷಣ ಧಾವಿಸಿದ – ಡಾ.ಎನ್.ಟಿ. ಶ್ರೀನಿವಾಸ್.
ಎ.ಡಿ.ಗುಡ್ಡ ಏಪ್ರಿಲ್.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರ ದೇವರ ಗುಡ್ಡ(ಎ.ಡಿ.ಗುಡ್ಡ) ಗೊಲ್ಲರ ಹಟ್ಟಿಯಲ್ಲಿ. ಏ 10 ರಂದು ಅತಿಯಾದ ಭೇಧಿಯಿಂದಾಗಿ(ಅತಿಸಾರ), ಸುಮಾರು 20 ಕ್ಕೂ ಹೆಚ್ಚು ಗ್ರಾಮಸ್ಥರು ತೀವ್ರ ಅಸ್ವಸ್ಥ ಗೊಂಡಿರುವ ಘಟನೆ ಜರುಗಿದೆ. ತಕ್ಷಣ ಅವರನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸಗೆ ದಾಖಲಿಸಲಾಗಿದ್ದು. ವೈದ್ಯರ ಹಾಗೂ ಸಿಬ್ಬಂದಿಯವರ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆತೋರಿ ಚಿಕಿತ್ಸೆ ನೀಡಿರುವ ಪರಿಣಾಮ. ಅತಿಸಾರ ದಿಂದಾಗಿ ಅಸ್ವಸ್ಥ ಗೊಂಡವರು ಕೆಲ ತಾಸುಗಳ ನಂತರ ಚೇತರಿಸಿ ಕೊಂಡಿದ್ದಾರೆ. ಮಾಹಿತಿ ತಿಳಿದಾಕ್ಷಣ ಶಾಸಕರಾದ ಡಾ”ಎನ್.ಟಿ ಶ್ರೀನಿವಾಸ ರವರು. ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿದ್ದಾರೆ, ಅವರಿಗೆ ವೈಯುಕ್ತಿಕ ಸ್ವಚ್ಚತೆ ಹಾಗೂ ಪರಿಸರ ಸ್ವಚ್ಚತೆ ಬಗ್ಗೆ ತಿಳಿ ಹೇಳಿದ್ದಾರೆ. ಘಟನೆಯ ಕುರಿತು ಸಂಪೂರ್ಣ ಮಾಾಹಿತಿ ಪಡೆದು, ಮೌಢ್ಯತೆ ಕಂಧಾಚಾರಗಳನ್ನು ತೊರೆಯ ಬೇಕಿದೆ ಎಂದು ಸೂಚಿಸಿದ್ದಾರೆ.

ಗ್ರಾಮದ ಪ್ರಮುಖರನ್ನು ಸಂಪರ್ಕಿಸಿ ಅವರ ಯೋಗ ಕ್ಷೇಮ ವಿಚಾರಿಸಿದ ಶಾಸಕರು. ವೈಯಕ್ತಿಕ ಸ್ವಚ್ಚತೆ ಹಾಗೂ ವಾತಾವರಣದಲ್ಲಿ ಸ್ವಚ್ಚತೆ ಕಾಪಾಡಿ ಕೊಳ್ಳಲು ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಶಾಸಕರು ಕೂಡಲೇ ಗ್ರಾಮಸ್ಥರಿಗಾಗಿ ಶುದ್ಧ ಕುಡಿಯುವ ನೀರು, ಹಾಗೂ ಗಂಜಿ ವ್ಯವಸ್ಥೆಯನ್ನು ಮಾಡಿದ್ದಾರೆಂದು ತಿಳಿದು ಬಂದಿದೆ. ನಂತರ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ, ಚಿಕಿತ್ಸೆಗೆ ದಾಖಲಾದ ಎಲ್ಲರ ಆರೋಗ್ಯ ಸ್ಥಿತಿ ಗತಿ ವಿಚಾರಿಸಿದರು. ಹಾಜರಿದ್ದ ವೈಧ್ಯರು ಹಾಗೂ ಸರ್ವ ಸಿಬ್ಬಂದಿಗೆ, ಸಮಯೋಚಿತವಾಗಿ ತುರ್ತು ಅಗತ್ಯ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದು. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳನ್ನ, ಹಾಗೂ ಸಿಬ್ಬಂದಿ ಮತ್ತು ಅಂಬಲೆನ್ಸ್ ನಿಯೋಜಿಸಿ ತೀವ್ರ ನಿಗಾ ವಹಿಸುವಂತೆ ಅಧಿಕಾರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಸ್ವಸ್ಥರಾಗಿದ್ದವರೆಲ್ಲರೂ ಚಿಕಿತ್ಸೆಯಿಂದಾಗಿ ಸಂಪೂರ್ಣ ಚೇತರಿಸಿ ಕೊಂಡಿರುವುದನ್ನು, ಮನವರಿಕೆ ಮಾಡಿ ಕೊಂಡ ನಂತರವೇ ಶಾಸಕರು ಆಸ್ಪತ್ರೆಯಿಂದ ಹೊರ ನಡೆದಿದ್ದಾರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಡಿ.ಎಚ್.ಓ ಭೇಟ- ಏ 11. ರಂದು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾವೈದ್ಯಾಧಿಕಾರಿ ಶಂಕರ ನಾಯ್ಕ, ಹಾಗೂ ಸಹ ವೈದ್ಯಾಧಿಕಾರಿಗಳಾದ ಷಣ್ಮುಖ ನಾಯ್ಕ, ಜಂಬಯ್ಯರವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದಾರೆ, ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಕರ್ತವ್ಯ ನಿಷ್ಠೆ ಮೆರೆಯಲು ತಿಳಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿ ಪ್ರದೀಪಕುಮಾರ ನೇತೃತ್ವದ ವೈದ್ಯರ ತಂಡಕ್ಕೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಜರುಗಿಸುವಂತೆ ಸೂಚಿಸಿದ್ದಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.