ಶ್ರಾವಣ ಮಾಸದಲ್ಲಿ ವರ್ಷಕ್ಕೊಮ್ಮೆ ಹಾಲು ಕುಡಿಯುವ ಹಬ್ಬವನ್ನು ಶ್ರೀ ವಿಜಯ ಮಹಾಂತೇಶ್ವರ ಶಾಖ ಮಠ ಸಿದ್ದನ ಕೋಟೆ ಬಸವಲಿಂಗ ಸ್ವಾಮೀಜಿಗಳು.
ಸಿದ್ದಯ್ಯನ ಕೋಟೆ ಆಗಷ್ಟ.20

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಸಿದ್ದಯ್ಯನ ಕೋಟೆ ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಶಾಖ ಮಠದಲ್ಲಿ ವರ್ಷಕ್ಕೊಮ್ಮೆ ಶ್ರಾವಣ ಮಾಸದಲ್ಲಿ ಹಾಲು ಕುಡಿಯುವ ಹಬ್ಬವನ್ನು ಶ್ರೀ ಬಸವಲಿಂಗ ಸ್ವಾಮೀಜಿಗಳು ಮಠದ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಗಳಿಂದ ಬಂದಿರತಕ್ಕಂತಹ ಸಾರ್ವಜನಿಕರಿಗೆ ನಾಗರ ಪಂಚಮಿ ಎಂದು ಹಾಲು ಕುಡಿಯುವ ಹಬ್ಬವನ್ನು ಮಠದ ಆವರಣದಲ್ಲಿ ಬಸವಲಿಂಗ ಮಹಾಸ್ವಾಮಿಗಳು ಆಚರಿಸುತ್ತಾರೆ.

ಆತ್ಮೀಯ ಶರಣ ಬಂಧುಗಳೇ ಸೋಮವಾರ ಬೆಳಿಗ್ಗೆ 10:00ಗೆ ಶ್ರೀಮಠದ ಆವರಣದಲ್ಲಿ ಕಾಯಕಯೋಗಿ ಪರಮಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಶಿವಶರಣೆ ಅಕ್ಕನಾಗಮ್ಮನ ಜಯಂತಿ ಅಂಗವಾಗಿ ಹಾಲು ಕುಡಿಯುವ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಕಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳು ಹಾಗೂ ಬಸವಾದಿ ಶಿವಶರಣರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ ಶರಣು ಶರಣಾರ್ಥಿಗಳು ಶ್ರೀಮಠದ ಕಾರ್ಯದರ್ಶಿ ಪಿಆರ್ ಕಾಂತರಾಜ್ ಸಿದ್ದಯ್ಯನ ಕೋಟೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು