ಪೌರ ಕಾರ್ಮಿಕರ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸ ಬೇಕು – ಶಿವಕುಮಾರ ರಾಮನಕೊಪ್ಪ.

ಗದಗ ಜೂ.01

ರಾಜ್ಯದಾದ್ಯಂತ ಸಫಾಯಿ ಪೌರ ಕಾರ್ಮಿಕರು ಶ್ರದ್ಧೆಯಿಂದ ದುಡಿದರು ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ. ಬಹುಪಾಲು ಪೌರ ಕಾರ್ಮಿಕರು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡುತ್ತಿದ್ದು, ಖಾಯಂ ಉದ್ಯೋಗ ಸಮರ್ಪಕ ವೇತನ, ಆರೋಗ್ಯ ವಿಮೆ ಕೂಡಲೇ ಕೂಡಬೇಕು. ಪೌರ ಕಾರ್ಮಿಕರ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸ ಬೇಕು ಎಂದು ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಒತ್ತಾಯಿಸಿದರು. ಗದಗ ಪಟ್ಟಣದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕುಳಿತ ಗದಗ ಬೆಟಗೇರಿ ನಗರ ಸಭೆಯ ಪೌರ ಕಾರ್ಮಿಕರ ಪ್ರತಿಭಟನೆಗೆ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಬೆಂಬಲಿಸಿ ಮಾತನಾಡಿದರು.”ನಗರದ ಸ್ವಚ್ಛತೆಯ ಹಿಂದೆ ನಿಂತಿರುವ ಅಜ್ಞಾತ ಶಕ್ತಿಗಳು ಪೌರ ಕಾರ್ಮಿಕರಾಗಿದ್ದು, ಬೆಳಗಿನ ಜಾವದಿಂದಲೇ ಬೀದಿಗಳ ಸ್ವಚ್ಛತೆ, ಕಸದ ಸಂಗ್ರಹಣೆ, ಗಟಾರು ಸ್ವಚ್ಛ ಗೊಳಿಸುವ ಕಾಯಕ ಮಾಡುತ್ತಾರೆ. ಅಪಾಯಕರ ಹಾಗೂ ಶ್ರಮದ ಕೆಲಸಗಳನ್ನು ನಿರಂತರವಾಗಿ ನಿರ್ವಹಿಸುವ ಈ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬಹಳ ದಿನಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡುತ್ತಿದ್ದಾರೆ” ಎಂದರು.ರಾಜ್ಯ ಅದ್ಯಕ್ಷರು ಪಿ.ಸುಬ್ರಮಣ್ಯಂ ರೆಡ್ಡಿ ಮಾತನಾಡಿ, “ಎಲ್ಲಾ ಪೌರ ಕಾರ್ಮಿಕರಿಗೆ ಖಾಯಂ ಉದ್ಯೋಗದ ಭರವಸೆ ಈ ಕೂಡಲೇ ಕೊಡಬೇಕು” ಎಂದರು.ಧರಣಿಯಲ್ಲಿ ಕಾರ್ಮಿಕ ಘಟಕ ರಾಜ್ಯಾದ್ಯಕ್ಷರು ಶಿವಾನಂದಯ್ಯ ಹಿರೇಮಠ, ರಾಜ್ಯ ನಿರ್ದೇಶಕರು ಎಮ್. ಎಸ.ಪರ್ವತಗೌಡ್ರ, ರಾಜ್ಯ ಕಾರ್ಯದರ್ಶಿ ಯು.ಆರ್. ಬೂಸನೂರಮಠ, ರಾಜ್ಯ ವಕ್ತಾರರು ಪ್ರಭಾಕರ್ ಹೆಬಸೂರ, ಪೌರ ಕಾರ್ಮಿಕರ ಮುಷ್ಕರವನ್ನು ಬೆಂಬಲಿಸಿ ಮಾತನಾಡಿದರು. ರಾಮು.ಪಿ ಬಳ್ಳಾರಿ ಎಲ್ಲರನ್ನೂ ಸ್ವಾಗತಿಸಿದರು ವೇದಿಕೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button