ಪ್ರಥಮ ದರ್ಜೆಯ ಕಾಲೇಜಿನ ಪ್ರಾಂಶುಪಾಲರು ನೇಣಿಗೆ ಶರಣು.

ಹುನಗುಂದ ಆಗಷ್ಟ.22

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಒಬ್ಬರು ಕಾಲೇಜ ಕ್ಯಾಂಟಿನ್ ಕಟ್ಟಡದ ಸ್ಟೇರ್‌ಕೇಸ್‌ನಲ್ಲಿ ಸಂಶಯಾಸ್ಪದವಾಗಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.ಸಧ್ಯ ಪ್ರಾಂಶುಪಾಲರು ನಿಗೂಢ ಸಾವಿನ ಸುತ್ತ ಅನೇಕ ಅನುಮಾನದ ಹುತ್ತ ನಿರ್ಮಾಣವಾಗಿದೆ.ನಾಗರಾಜ ಹನಮಂತಪ್ಪ ಮುದಗಲ್ಲ (೫೬) ಆತ್ಮಹತ್ಯೆಗೆ ಮಾಡಿಕೊಂಡ ಪ್ರಾಂಶುಪಾಲರು.ಮಂಗಳವಾರ ನಸುಕಿನ ಜಾವದಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು.ಮೃತರಿಗೆ ಪತ್ನಿ,ಒರ್ವ ಪುತ್ರ,ಇಬ್ಬರು ಪುತ್ರಿಯರಿದ್ದಾರೆ.ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ.ಕೌಟಂಬಕವಾಗಿ ಯಾವದೇ ಕಲಹ ವಿರಲಿಲ್ಲ.ಕಾಲೇಜು ಕೆಲಸಕ್ಕೆ ಹೋದವರು ಶವವಾಗಿ ಪತ್ತೆಯಾಗಿದ್ದಾರೆಂದು ರೋಧಿಸುವ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.

ಘಟನೆ ವಿವರ-ಆಗಷ್ಟ.೨೨ ರ ಮಂಗಳವಾರ ಕಾಲೇಜನಲ್ಲಿ ಹೊನ್ನ ಸಂಭ್ರಮ ಮತ್ತು ಜನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು.ಸೋಮವಾರ ಇಡೀ ದಿನ ಗಣ್ಯರಿಗೆ ಕಾರ್ಯಕ್ರಮದ ಆಮಂತ್ರಣ ಪತ್ರಕೆಯನ್ನು ಕೊಟ್ಟು ಕಾರ್ಯಕ್ರಮದ ಸಿದ್ದತೆಗಾಗಿ ರಾತ್ರಿ ಕಾಲೇಜಿನಲ್ಲಿಯೇ ವಾಸ್ತವ್ಯ ಹೂಡಿದ್ದರು.ಬೆಳಗಿನ ಜಾವದಲ್ಲಿ ಎದ್ದು ಹೊರ ಬಂದ ಪ್ರಾಂಶುಪಾಲರು ಕಾಲೇಜ ಆವರಣದಲ್ಲಿರುವ ಕ್ಯಾಂಟಿನ್ ಕಟ್ಟಡದ ಸ್ಟೇರ್‌ಕೇಸ್ ಮೇಲಿನ ಕಬ್ಬಿಣದ ಪೈಪಿಗೆ ನೂಲಿನ ಹಗ್ಗದಿಂದ ಹಾಕಿ ನೇಣು ಹಾಕಿಕೊಂಡು ಶವವಾಗಿ ಪತ್ತೆಯಾಗಿದ್ದಾರೆ.ಕಳೆದ ಆರು ತಿಂಗಳ ಹಿಂದೆ ಇಳಕಲ್ಲ ಕಾಲೇಜಿನಿಂದ ವರ್ಗಾವಣೆಯಾಗಿ ಹುನಗುಂದಕ್ಕೆ ಬಂದಿದ್ದ ಇವರು ಇಳಕಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೧೪ ವರ್ಷ ಸೇವೆ ಸಲ್ಲಿಸಿದ್ದರು.ಘಟನಾ ಸ್ಥಳಕ್ಕೆ ಹುನಗುಂದ ಪೊಲೀಸ್ ಠಾಣೆಯ ಡಿವೈಎಸ್‌ಪಿ ಪ್ರಭುಗೌಡ ಕೀರದಳ್ಳಿ,ಸಿಪಿಐ ಸುರೇಶ ಬೆಂಡೆಗುಂಬಳ,ಪಿಎಸ್‌ಐ ಚನ್ನಯ್ಯ ದೇವೂರ,ಅಪರಾಧ ವಿಭಾಗದ ಪಿಎಸ್‌ಐ ಎಸ್.ಆರ್.ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾವಿನ ಬಗ್ಗೆ ಯಾವದೇ ನಿಖರ ಮಾಹಿತಿ ತಿಳಿದು ಬಂದಿಲ್ಲ,ಈ ಆತ್ಮಹತ್ಯೆ ಹಿಂದಿನ ಮರ್ಮ ಮತ್ತು ಅದರ ಸತ್ಯಾಸತ್ಯತೆಯ ಇದರ ಸಂಪೂರ್ಣ ತನಿಖೆಯ ನಂತರ ತಿಳಿದು ಬರಲಿದೆ.ಸಧ್ಯ ಪ್ರಾಂಶುಪಾಲರ ಆತ್ಮಹತ್ಯೆಯ ಪ್ರಕರಣವು ಹುನಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಬಾಕ್ಸ್ ಸುದ್ದಿ-ಕಾಲೇಜು ಕೆಲಸಕ್ಕೆಂದು ಹೋದವರು ನಿಗೂಢವಾಗಿ ಸಾವನ್ನಪ್ಪಿ ಈ ರೀತಿ ಶವವಾಗಿ ಪತ್ತೆಯಾಗಿದ್ದು ನಿಜಕ್ಕೂ ಅಘಾತ ತಂದಿದೆ.ಮನೆಯಲ್ಲಿ ಯಾವದೇ ಕಲಹಗಳು ಇರಲಿಲ್ಲ.ಕೇವಲ ಅವರಿಗೆ ಕಾಲೇಜ ಕೆಲಸದ ಒತ್ತಡ ಇದೆಯೆಂದು ಹೇಳಿತ್ತಿದ್ದರೂ ಹೊರತು ಅದೇನು ಅಂತ ನಮ್ಮ ಮುಂದೆ ಯಾವತ್ತು ಹೇಳತ್ತಿರಲಿಲ್ಲ.ಕಾಲೇಜ ಕೆಲಸನೇ ಅವರ ಜೀವ ತಗೆದುಕೊಂಡಿದೆ.ಜಯಲಕ್ಷ್ಮೀ ಎನ್ ಮುದಗಲ್ಲ ಮೃತ ಪ್ರಾಂಶುಪಾಲರ ಪತ್ನಿ ಹೇಳಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button