ಕೂಡ್ಲಿಗಿ ಉಪನೋಂದಣಿ ಕಛೇರಿಯಲ್ಲಿ ಆನ್ಲೈನ್ ಇ.ಸಿ. ಸಮಸ್ಯೆ — ಸಾರ್ವಜನಿಕರಲ್ಲಿ ಆತಂಕ…!
ಕೊಟ್ಟೂರು ಆಗಷ್ಟ.22

ತಾಲ್ಲೂಕು ಘೋಷಣೆಯಾಗಿ 5 ವರ್ಷಗಳು ಗತಿಸಿದರೂ ಸಹ ಇಲ್ಲಿ ಉಪನೋಂದಣಿ ಕಛೇರಿ ಇಲ್ಲದಿರುವುದು ದೊಡ್ಡಸಮಸ್ಯೆಯಾಗಿರುವುದರ ಜೊತೆಗೆ ಈಗ ಮತ್ತೊಂದು ಸಮಸ್ಯೆ ಸಾರ್ವಜನಿಕರಿಗೆ ಎದುರಾಗಿದೆ. ಮೊದಲೇ ನೋಂದಣಿಗೆ ಕೂಡ್ಲಿಗಿಗೆ ಹೋಗಿ ನೋಂದಣಿ ಮಾಡಿಸುವುದು ಒಂದು ಚಿಂತೆಯಾದರೆ, ಆನ್‌ಲೈನ್ ಇ.ಸಿ. ಸರ್ವರ್ ಸಮಸ್ಯೆಯಿಂದ ಒಂದೊಂದು ಸಲ ಒಂದೊಂದು ರೀತಿ ಬರುತ್ತಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಒಂದು ಸಲ ಆಯ್ಕೆಯಾಗಿರುವುದು ಬಂದರೆ, ಇನ್ನೊಂದು ಸಲ ಆಯ್ಕೆಯಾಗಿರುವುದೇ ಇರುವುದಿಲ್ಲ. ಈ ರೀತಿಯ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ನೋಂದಣಿಯ ಸಮಯದಲ್ಲಿ ಇ.ಸಿ. ಬಹಳ ಮುಖ್ಯವಾಗಿ ಬೇಕಾಗಿರುವ ದಾಖಲಾತಿಯಾಗಿದ್ದು, ಈ ರೀತಿ ತಪ್ಪಾಗಿರುವ ಇ.ಸಿ. ಬರುತ್ತಿರುವುದರಿಂದ ಸಾರ್ವಜನಿಕರ ದುಡ್ಡು ಪೋಲಾಗುತ್ತದೆ. ನೋಂದಣಿ ಮಾಡಿಸುವುದು ದುಸ್ತರವಾಗಿದೆ.ಮತ್ತು ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವವರಿಗೆ ಆತಂಕನು ಮೂಡಿದೆ . ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ನೀಡದೇ ಸಾರ್ವಜನಿಕರಿಗೆ ವಿಳಂಬ ನೀತಿ ಮಾಡುತ್ತಿರುವುದು ಕೂಡ್ಲಿಗಿ ಉಪನೋಂದಣಿ ಅಧಿಕಾರಿಗಳ ನಿರ್ಲಕ್ಷ್ಯತೆಗೆ ಕೈಗನ್ನಡಿಯಾಗಿದೆ.

ಕೂಡ್ಲಿಗಿ ಉಪನೋಂದಣಿ ಕಛೇರಿಗೆ ಕೊಟ್ಟೂರು ಭಾಗದಿಂದ ಲಕ್ಷಾಂತರ ತೆರಿಗೆ ಸಂಗ್ರಹವಾಗುತ್ತಿದ್ದು, ಯಾರೇ ಆಸ್ತಿಗಳನ್ನು ನೋಂದಣಿ ಮಾಡಿಸಲು ಹೋದರೆ ಮೊದಲು ಇ.ಸಿ.ಯನ್ನೇ ಪರಿಗಣಿಸುತ್ತಾರೆ. ಆದರೆ ಇ.ಸಿ.ಯು ತಪ್ಪಾಗಿ ಬರುತ್ತಿರುವುದರಿಂದ ನೋಂದಣಿ ಮಾಡಿಸಲು ಹೋಗುವ ಸಾರ್ವಜನಿಕರು ಆತಂಕದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜಿಲ್ಲಾ ನೋಂದಣಾಧಿಕಾರಿಗಳು ಜರೂರಾಗಿ ಪರಿಹರಿಸಲು ಆಗ್ರಹಿಸಿದ್ದಾರೆ.ಸರ್ಕಾರಕ್ಕೆ ಹೆಚ್ಚು ಆದಾಯವಿದ್ದರೂ ಸಹ ಕೊಟ್ಟೂರಿಗೆ ಉಪನೋಂದಣಿ ಕಛೇರಿ ಪ್ರಾರಂಭ ಮಾಡದೇ ಇರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಮಾತನಾಡಿದರು. ಸರ್ಕಾರ, ನೋಂದಣಿ ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಕೊಟ್ಟೂರಿಗೆ ಶೀಘ್ರದಲ್ಲಿ ಉಪನೋಂದಣಿ ಕಛೇರಿ ಪ್ರಾರಂಭಿಸಲು ಒತ್ತಾಯಿಸಿದರು. ಸಹಕಾರಿ ಬ್ಯಾಂಕಿನ ಕಾರ್ಯದರ್ಶಿಯವರು ಸಾರ್ವಜನಿಕರಾದ ಭಾಗ್ಯ ಎನ್ನುವವರು ತಮ್ಮ ಇ.ಸಿ.ಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದರು.ಕೊಟ್ -1ಸ್ಥಳದಿಂದ ಸ್ಥಳಕ್ಕೆ ವರ್ಗಾಯಿಸುವುದೇ ಒಂದು ಕೆಲಸವಾಗಿದೆ. ಎಂದು ಸಾರ್ವಜನಿಕರಿಗೆ ನೂನ್ಯತೆಯ ಕಾರಣ ಹೇಳುವ ಅಧಿಕಾರಿ ತಿಪ್ಪೇಸ್ವಾಮಿ, ಕೂಡ್ಲಿಗಿ ಉಪನೋಂದಣಿ ಕಛೇರಿ .? ಎಂದು ಪ್ರದೀಪ್ ಕುಮಾರ್ ಹೇಳಿಕೆ ಮೂಲಕ ತಿಳಿಸಿದರು.
ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.C ಕೊಟ್ಟೂರು