ಇದ್ದಲಗಿ ಶ್ರೀ ಶರಣಬಸವೇಶ್ವರ ಪುರಾಣ ಸುವರ್ಣ ಮಹೋತ್ಸವದಲ್ಲಿ ಗದಗಿನ ಕಲ್ಲಯ್ಯ ಅಜ್ಜನವರಿಗೆ ನಾಣ್ಯದ ತುಲಾಭಾರ.
ಇದ್ದಲಗಿ ಆಗಷ್ಟ.23
ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಶ್ರೀ ಶರಣಬಸವೇಶ್ವರ ೫೦ ನೆಯ ವರ್ಷದ ಶ್ರಾವಣ ಮಾಸದ ಪುರಾಣ ಸುವರ್ಣ ಮಹೋತ್ಸವದ ಪ್ರಯುಕ್ತ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರಿಗೆ ನಾಣ್ಯದ ತುಲಾಭಾರ ಮಾಡಲಾಯಿತು.1973 ರಲ್ಲಿ ಮೊದಲ ಬಾರಿಗೆ ಇದ್ದಲಗಿ ಗ್ರಾಮದಲ್ಲಿ ಬರಗಾಲದ ಭಂಟ,ಪವಾಡ ಪುರುಷ ಶ್ರೀ ಶರಣಬಸವೇಶ್ವರ ಮೊದಲ ಪುರಾಣ ಆರಂಭಿಸಿದ ಗ್ರಾಮಸ್ಥರು ಎಂಥಹ ಕಠಿಣ ಪರಸ್ಥಿತಿಯಲ್ಲಿ ಒಂದು ವರ್ಷವೋ ಪುರಾಣವನ್ನು ನಿಲ್ಲಿಸದೇ ಕಳೆದ 5೦ ವರ್ಷಗಳಿಂದ ನಿರಂತರವಾಗಿ ಶ್ರಾವಣ ಮಾಸದಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು.

ಈ ಹಿಂದೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಂಧ ಅನಾಥರ ಪಾಲಿನ ದೇವರು,ಗಾನಯೋಗಿ ಗದಗಿನ ಪುಟ್ಟರಾಜರಿಗೂ ಕೂಡಾ ಶರಣಬಸವೇಶ್ವರ ಪುರಾಣದಲ್ಲಿ ತುಲಾಭಾರ ಮಾಡಲಾಗಿತ್ತು.ಸಧ್ಯ ಪುರಾಣ ಪ್ರವಚನದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರಿಗೆ 2೦78 ನೆಯ ತುಲಾಭಾರವನ್ನು ಇದ್ದಲಗಿ ಶ್ರೀ ಶರಣಬಸವೇಶ್ವರ ದೇವಸ್ಥಾನ ಸಮಿತಿಯಿಂದ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಪುರಾಣ ಪ್ರವಚನಕಾರ ಎಂ.ಜಿ.ಗುರುಸಿದ್ದೇಶ್ವರ ಶಾಸ್ತ್ರಿ ಕಲ್ಯಾಣಕುಮಾರ ಬಂಟನಳ್ಳಿ,ಶೇಖರ ಇಮ್ಮಡಿ,ಶರಣಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಂಗಮೇಶ ಹಾವರಗಿ,ಸಿ.ಜಿ.ಅಂಗಡಿ,ಸಂಗಯ್ಯ ಗಡ್ಡಿಮಠ,ಶರಣಯ್ಯಸ್ವಾಮಿ ಮಂಡೇದೇವರಮಠ,ಶಶಿಕಾಂತ ತಿಮ್ಮಾಪುರ,ಸಿದ್ದು ಹಾವರಗಿ,ಮುತ್ತಣ್ಣ ಬೋನೂರ,ಕುಮಾರಸ್ವಾಮಿ ಮಠ,ಸಂಗಮೇಶ ಆನೇಹೊಸೂರ ಸೇರಿದಂತೆ ಇದ್ದಲಗಿ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ