ಪ್ರತಿಭೆ – ಅನುಪಮಗೆ ಉನ್ನತ ಪದವಿ ವ್ಯಾಸಂಗಕ್ಕೆ ನೆರವಾದ ಕೂಡ್ಲಿಗಿ ಶಾಸಕರ ಸಹೋದರ ಎನ್.ಟಿ.ತಮ್ಮಣ್ಣ.

ನಾಣ್ಯಪುರ ಆಗಷ್ಟ.25

ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ನಾಣ್ಯಾಪುರ ಗ್ರಾಮದ ಪರಿಶಿಷ್ಟ ಪಂಗಡದ ಬಡ ರೇತ ಕುಟುಂಬದಲ್ಲಿ ಜನಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ಬರ್ಲಿ ಅನುಪಮ. ಅವಳು ಕೂಡ್ಲಿಗಿ ಪಟ್ಟಣದ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, 2016 – 2021 ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದಾಳೆ. ತಿಮಲಾಪುರದ ಮೊರಾರ್ಜಿ ಪದವಿಪೂರ್ವ ಕಾಲೇಜ್ ನಲ್ಲಿ, ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದಾಳೆ. ಪ್ರಸ್ತುತ ರಾಷ್ಟ್ರೀಯ ಮಟ್ಟದ IIT JEE  ಪರೀಕ್ಷೆಯಲ್ಲಿ,ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉನ್ನತ ಪದವಿ ವ್ಯಾಸಾಂಗಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಹಾಕಲಾಗಿದ್ದು, ತಮಿಳುನಾಡಿನ ತಂಜಾವೂರಿನ ಕಾಲೇಜಿಗೆ ಆಯ್ಕೆಯಾಗಿದ್ದಾರೆ. ಆದರೆ ಬಡ ರೈತ ಕುಟುಂಬ ಹಿನ್ನಲೆಯ ಮನೆಯಲ್ಲಿ, ಬರ್ಲಿ ಅನುಪಮ ಅವರಿಗೆ  ವಿದ್ಯಾಭ್ಯಾಸ ಮಾಡಲು ಅಗತ್ಯ ಆರ್ಥಿಕ ಸಾಮಾರ್ಥ್ಯ ಇರಲಿಲ್ಲ. ಅದು ಅವಳು ಮುಂದೆ ಓದುವ ಆಸೆಯನ್ನು, ಮೊಟಕುಗೊಳಿಸಿತ್ತು. ಅನುಪಮಾಳು ತಾನು ವ್ಯಾಸಾಂಗ ಮಾಡುತ್ತಲೇ ನಿತ್ಯ ಮನೆ ಕೆಲಸದೊಂದಿಗೆ, ಮನೆಯ ಸದಸ್ಯರೊಡಗೂಡಿ. ತಮ್ಮ ಹೊಲದಲ್ಲಿನ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಳು, ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಶಿಕ್ಷಣಕ್ಕೆ ಇತಿಶ್ರೀ ಹೇಳೋ ಪರಿಸ್ಥಿತಿ ಎದುರಾಗಿತ್ತು. ಇದನ್ನರಿತ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, ಅನುಪಮಾ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕರ್ತವ್ಯದಲ್ಲಿದ್ದ. ಇತ್ತೀಚೆಗಷ್ಟೇ ಬೇರೆಡೆಗೆ ವರ್ಗಾವಣೆ ಗೊಂಡಿದ್ದ, ಪ್ರಾಚಾರ್ಯರಾದ ಕನ್ನಿಹಳ್ಳಿ ನಾಗರ‍ಾಜರವರು. ಪ್ರತಿಭಾನ್ವಿತೆ ಬರ್ಲಿ ಅನುಪಮಾಳ ಸ್ಥಿತಿಗತಿ ತಿಳಿದು, ಅವಳಿಗೆ ಅಗತ್ಯ ನೆರವು ಕೊಡಿಸುವ ಕುರಿತು ಅಪಾರ ಕಾಳಜಿ ತೋರಿದ್ದಾರೆ. ನಿವೃತ್ತ ದೈಹಿಕ ಶಿಕ್ಷಕರಾದ ಡಿ.ನಾಗರಾಜಪ್ಪರವರೊಂದಿಗೆ ಚರ್ಚಿಸಿ, ವಿದ್ಯಾರ್ಥಿನಿ ಅನುಪಮಾಳ ವ್ಯ‍ಾಸಾಂಗಕ್ಕೆ ನೆರವು ಕೋರಲು ಪ್ರಯತ್ನಿಸಿದ್ದಾರೆ.

ಅವರುಬರ್ಲಿ ಅನುಪಮ ಅವರ ಪರಿಸ್ಥಿತಿಯನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸ್ ರವರಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಡ ಗ್ರಾಮೀಣ ಪ್ರತಿಭಾವಂತ ಬಾಲಕಿಯ ಸಾಧನೆ ಬಗ್ಗೆ ತಿಳಿದ ಶಾಸಕರು, ಮೆಚ್ಚುಗೆ ವ್ಯಕ್ತಪಡಿಸಿ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ. ಶಾಸಕರು ತಮ್ಮ ಅಣ್ಣನವರು ಹಾಗೂ ಕಾಂಗ್ರೆಸ್ ಮುಖಂಡರಾದ, ಎನ್.ಟಿ.ತಮ್ಮಣ್ಣರವರ ಮೂಲಕ. ವಿದ್ಯಾರ್ಥಿನಿ ಬರ್ಲಿ ಅನುಪಮ ರವರ ಮನೆಗೆ ಸಕಾಲಕ್ಕೆ, ನಗದು ರೂಪದಲ್ಲಿ ಆರ್ಥಿಕ ನೆರವು ತಲುಪಿಸಿದ್ದಾರೆ. ಅನುಪಮ ವಿದ್ಯಾಭ್ಯಾಸದೊಂದಿಗೆ ತಮ್ಮ ಮನೆಯ ಸದಸ್ಯರೊಂದಿಗೆ,  ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೊಲಕ್ಕೆ ನೀರು ಹಾಯಿಸಲು ತೆರಳುತ್ತಾಳೆ, ಕಳೆ ತೆಗೆಯಲು, ಹೂ ಬಿಡಿಸಲು ತಂದೆ – ತಾಯಿಗೆ, ನೆರವಾಗುತ್ತಿರುವುದನ್ನು ಶಾಸಕರು ಮನಗಂಡು. ಅನುಪಮಾರನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ,

ದೂರವಾಣಿ ಮೂಲಕ ಸಂಪರ್ಕಿಸಿ ಶುಭಾಶಯಗಳನ್ನು  ತಿಳಿಸಿದ್ದಾರೆ.‌ ಸದ್ಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಬರ್ಲಿ ಅನುಪಮಾ, ಉನ್ನತ ಶಿಕ್ಷಣಕ್ಕ‍ಾಗಿ ತಮಿಳು ನಾಡಿನ ತಾಂಜಾವೂರಿನ ಕಾಲೇಜ್ ಗೆ ದಾಖಲಾತಿಗಾಗಿ ತೆರಳಿದ್ದಾರೆ. ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಜನರಿಗೆ ನೆರವು ನೀಡುವುದಕ್ಕೆ, ಮೂಗು ಮುರಿದುಕೊಳ್ಳೋವ ಕಾಲದಲ್ಲಿ. ತಮ್ಮ ಕ್ಷೇತ್ರ ವ್ಯಾಪ್ತಿಗೆ ಬಾರದ ನೆರೆ ತಾಲೂಕಿನ, ಗ್ರಾಮೀಣ ಪ್ರತಿಭೆಗೆ ಉನ್ನತ ಶಿಕ್ಷಣಾಭಿವೃದ್ಧಿಗೆ ಅಗತ್ಯ ನೆರವು ನೀಡಿರುವ. ಕೂಡ್ಲಿಗಿ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸರವರ ಶಿಕ್ಷಣ ಪ್ರೇಮ, ಆದರ್ಶನೀಯವಾಗಿದೆ ಹಾಗೂ ಅವರ ಮಹಾ ಮಾನವತಾವಾದದ ಪ್ರತಿಪಾದನೆಗೆ ಸಾಕ್ಷಿಯಾಗಿದೆ. ಶಾಸಕರ ನೆರವಿನ ಹಸ್ತದ ಶ್ರೀರಕ್ಷೆ ಹೊಂದಿದ ಅನುಪಮಾರವರ ಕುಟುಂಬದವರು, ಮುಖಂಡ ಎನ್.ಟಿ.ತಮ್ಮಣ್ಣ. ಮತ್ತು ಅವರ ಸಹೋದರರು, ಹಾಗೂ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸರವರ ಹಿರಿತನಕ್ಕೆ ಹೃದಯ ಶ್ರೀಮಂತಿಕೆಗೆ. ಈ ಮೂಲಕ ಈ ಇಬ್ಬರು ಸಹೋದರರಿಗೆ, ಹೃದಯ ಸ್ಪರ್ಶಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ. “ನಮ್ಮ ಹೆಮ್ಮೆ-ನಮ್ಮ ನೆಚ್ಚಿನ ಶಾಸಕರು” ಡಾ”ಎನ್.ಟಿ.ಶ್ರೀನಿವಾಸ್ ರವರು ಎಂದು, ಕೂಡ್ಲಿಗಿ ಕ್ಷೇತ್ರದ ಪ್ರಜ್ಞಾವಂತರು ಉಧ್ಘೋಷಿಸುತ್ತಿದ್ದಾರೆ.

ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button