ಗಣಕ ಯಂತ್ರ ಸಿಬ್ಬಂದಿ ಇಲ್ಲದ ಕಾರಣಕ್ಕೆ ಸಾರ್ವಜನಿಕರ ಪರದಾಟ.
ಯಲಗೋಡ ಫೆಬ್ರುವರಿ.5

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಐದು ಆರು ತಿಂಗಳಯಿಂದ ಗಣಕ ಯಂತ್ರ ಸಿಬ್ಬಂದಿ ಇಲ್ಲದ ಕಾರಣಕ್ಕೆ ಗ್ರಾಮ ಪಂಚಾಯತಿ ಸಿಬ್ಬಂದಿಯಾದ ಡಿ ಎಸ್ ಕಣಮೇಶ್ವರ ಇವರ ಮುಖಾಂತರ ತಾಲೂಕಾ ಪಂಚಾಯತ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ನೀಡುವಂತೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಹಲವಾರು ತಿಂಗಳಿಂದ ಗಣಕ ಯಂತ್ರ ಸಿಬ್ಬಂದಿ ಇಲ್ಲದ ಕಾರಣ ಬೇಗನೆ ನೇಮಕ ಮಾಡಬೇಕು ಎಂದು ಮಾತನಾಡಿದರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಹುಸೇನ ತಳ್ಳೋಳ್ಳಿ ,ಗ್ರಾಮ ಪಂಚಾಯತಿ ಸದಸ್ಯರ ಪ್ರತಿ ನಿಧಿಯಾದ ಗುರುನಾಥ ರಾಠೋಡ,ಹಾಗೂ ದಲಿತ ಮುಖಂಡರಾದ ದೇವೇಂದ್ರ ಮಾದರ ರಾಮು ವಂದಾಲ ದವಲ್ಲಪ್ಪ ತಳ್ಳೋಳ್ಳಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ. ದೇವರಹಿಪ್ಪರಗಿ