ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸ ಮಾಡುತ್ತೇನೆ – ರಿಹಾನ ಪರ್ವೀನ್.
ತರೀಕೆರೆ ಆಗಷ್ಟ.29

ಪಟ್ಟಣದಲ್ಲಿ ಪುರಸಭಾ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಿಹನಾ ಪರ್ವೀನ್ ರವರು ಇಂದು ಅಭಿನಂದನಾ ಸಮಾರಂಭದಲ್ಲಿ ಹೇಳಿದರು. ಪುರಸಭಾ ಅಧ್ಯಕ್ಷೆ ಕಮಲಾ ರಾಜೇಂದ್ರ ರವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷೆ ರಿಹಾನ ಪರ್ವೀನ್ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಹಿರಿಯ ಪುರಸಭಾ ಸದಸ್ಯರಾದ ಟಿ ಜಿ ಅಶೋಕ್ ಕುಮಾರ್,
ಪರಮೇಶ್, ಟಿ ದಾದಾಪೀರ್, ನಿಕಟ ಪೂರ್ವ ಅಧ್ಯಕ್ಷರಾದ ಕಮಲ ರಾಜೇಂದ್ರ, ಟಿ ಎಂ ಭೋಜರಾಜ್, ಚೇತನ್, ಅನಿಲ್ ಕುಮಾರ್, ಮಾಜಿ ಪುರಸಭಾ ಅಧ್ಯಕ್ಷರಾದ ಟಿ ಎಸ್ ಪ್ರಕಾಶ್ ವರ್ಮಾ, ಮುಖ್ಯ ಅಧಿಕಾರಿ ಎಚ್ ಪ್ರಶಾಂತ್ ರವರು ಶುಭಕೋರಿ ಅಭಿನಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ