ಕೆ.ಆರ್.ಎಸ್ ಪಕ್ಷದ ರಾಜ್ಯ ಯುವ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ – ನಬಿರಸೂಲ್ ಹುಣಶಾಳ ಆಯ್ಕೆ.
ದೇವರ ಹಿಪ್ಪರಗಿ ನ .28

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಯುವ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ನಬಿರಸೂಲ್ ಹುಣಶಾಳ ಅವರನ್ನು ನೇಮಕ ಮಾಡಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಯುವ ಘಟಕ ಅಧ್ಯಕ್ಷ ಜನನಿ ವತ್ಸಲ ರವರು ಆದೇಶ ಹೊರಡಿಸಿದ್ದಾರೆ.ವಿಜಯಪೂರ ಜಿಲ್ಲೆಯಲ್ಲಿ ಜಿಲ್ಲೆಯ ಸಾಮಾಜಿಕ ಜಾಲತಾಣ ಅಧ್ಯಕ್ಷರಾಗಿ ಪಕ್ಷದ ಉತ್ತಮ ಸಂಘಟನಾ ಕೆಲಸ ಗುರುತಿಸಿ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಲು ಆದೇಶ ಹೊರಡಿಸಲಾಗಿದ್ದು. ಪಕ್ಷದ ಕಾರ್ಯಕರ್ತರಲ್ಲಿ ಹರ್ಷ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ. ನಬಿರಸೂಲ್ ರವರಿಗೆ ಅಭಿನಂದನೆಗಳು ಮಹಾ ಪೂರವೆ ಹರಿದು ಬಂದಿದೆ.
ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ