ಕೋಡಿಹಳ್ಳಿ ಗ್ರಾಮದ ಹಿರಿಯ ಮುಖಂಡ, ಎಸ್.ಪಾಲಯ್ಯರವರು – ಇನ್ನೂ ನೆನಪು ಮಾತ್ರ.
ಚಳ್ಳಕೆರೆ ಡಿ.24

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಹಿರಿಯ ಮುಖಂಡರು ಮತ್ತು ಯಜಮಾನರು ಆದ ಶ್ರೀಯುತ ಎಸ್.ಪಾಲಯ್ಯನವರು ಸುಮಾರು 90 ವರ್ಷ ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿ ದಿನಾಂಕ : 23/12/2024 ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನ ರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಇಂದು ಇವರ ಸ್ವ ಗ್ರಾಮದಲ್ಲಿ ಇವರ ವಿಧಿ ವಿಧಾನಗಳ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ಮಗಳು ಮೊಮ್ಮಕ್ಕಳು ಇದ್ದು ಅಪಾರ ಬಂಧುಗಳು ಸ್ನೇಹಿತರು ಹಿತೈಷಿಗಳು ಗ್ರಾಮದ ಜನರ ಆಪ್ತ ಬಳಗ, ಒಡನಾಡಿಗಳನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ನಮ್ಮ ಗ್ರಾಮಕ್ಕೆ ಒಬ್ಬ ನಿಷ್ಟಾವಂತ ಪ್ರಾಮಾಣಿಕ ವ್ಯಕ್ತಿ ಇವರ ಕೊಡುಗೆ ಅಪಾರವಾದದ್ದು, ಇವರ ನಿಸ್ವಾರ್ಥ ಜನ ಸೇವೆ ಕಾರ್ಯ ನಿಜಕ್ಕೂ ಅತ್ಯಂತ ಶ್ಲಾಘನೀಯ.

ಇವರು ನಮ್ಮ ಕೋಡಿಹಳ್ಳಿ ಗ್ರಾಮಕ್ಕೆ ಒಂದು ದೊಡ್ಡ ಕಳಸ ಇದ್ದಂತೆ ಯಾವುದೇ ರೀತಿಯ ಘಟನೆಗಳು ಸಮಸ್ಯೆಗಳು ಬಂದರೂ ಅವುಗಳನ್ನು ಗ್ರಾಮದಲ್ಲಿಯೇ ಬಗೆ ಹರಿಸಿ ಅವರಿಗೆ ನ್ಯಾಯವನ್ನು ಕೊಡಿಸುವಂತಹ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಇಂತಹ ಮಹಾನ್ ಚೇತನ ಗ್ರಾಮದ ದಿವ್ಯ ಜ್ಯೋತಿಯು ಇಂದು ತನ್ನ ಬೆಳಕನ್ನು ನಿಲ್ಲಿಸಿದೆ. ಹಾಗಾಗಿ ಇಡೀ ಗ್ರಾಮವೇ ಅಂಧಕಾರದಲ್ಲಿ ಮುಳುಗಿದೆ ಎಂದರೆ ತಪ್ಪಾಗಲಾರದು.ಇವರು ಕಾಂಗ್ರೇಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಕಾರ್ಯಕರ್ತರಾಗಿ ಅನೇಕ ಹೋರಾಟಗಳನ್ನು ನಡೆಸಿ ತಳಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ನಿರಂತರವಾಗಿ ಜನ ಸೇವೆಯನ್ನು ಸಲ್ಲಿಸಿರುತ್ತಾರೆ, ಅಲ್ಲದೆ ಡಿ.ಸಿ.ಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಹಾಗೂ ಸಮಾಜಮುಖಿ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ