ಗೃಹಲಕ್ಷ್ಮೀ ಯೋಜನೆ ಯೊಂದಿಗೆ ನುಡಿದಂತೆ ನಡೆದಿದ್ದೇವೆ – ಜಿ.ಎಚ್.ಶ್ರೀನಿವಾಸ್.
ತರೀಕೆರೆ ಆಗಷ್ಟ.30

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಆರ್ ಹೆಬ್ಬಳ್ಕರ್, ರವರು ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಶಾಸಕ ಜಿ ಹೆಚ್ ಶ್ರೀನಿವಾಸ್ ರವರು ತಾಲೂಕಿನ ಮುಡುಗೋಡು ಗ್ರಾಮ ಪಂಚಾಯಿತಿ ಅಂಬಾಭವಾನಿ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯಿಂದ 1975ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಪ್ರತ್ಯೇಕಗೊಳಿಸಿ ಪ್ರಾರಂಭಿಸಲಾಯಿತು. ನಂತರ ಶ್ರೀ ಶಕ್ತಿ ಯೋಜನೆ ಜಾರಿಗೆ ತಂದು ಮಹಿಳೆಯರು ಬ್ಯಾಂಕ್ ವ್ಯವಹಾರದೊಂದಿಗೆ ಉಳಿತಾಯ ಮಾಡುವುದು ಮತ್ತು ಸಾಲ ಪಡೆಯುವುದರಿಂದ ಮಹಿಳೆಯರಿಗೆ ಅನುಕೂಲವಾಗಿದೆ. 2006ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಪ್ರತಿ ಹೆಣ್ಣು ಮಗಳಿಗೂ ಒಂದು ಲಕ್ಷ ರೂ ಭಾಗ್ಯಲಕ್ಷ್ಮಿ ಬಾಂಡ್ ನೀಡುವ ಯೋಜನೆ ಜಾರಿಯಾಗಿದೆ. 2023 ಅಂದರೆ ಇಂದು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದು ಸ್ತ್ರೀ ಸ್ವಾವಲಂಬಿನೇಯತ್ತ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಈ ದೇಶವೇ ಒಪ್ಪುವ ಮಾದರಿಯಾದ ಕಾರ್ಯಕ್ರಮ ಇದಾಗಿದ್ದು ಪ್ರತಿ ಮನೆ ಯಜಮಾನರಿಗೂ ಸಾವಿರಾರು ಹಣ ಕೊಡುವ ಮೂಲಕ ಗೃಹಲಕ್ಷ್ಮಿ ಯೋಜನೆ ಯೊಂದಿಗೆ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣರವರು ಮಾತನಾಡಿ ಬಡ ಕುಟುಂಬಗಳ ಮನೆ ಯೋಡತಿ ಗೆ ಗೃಹಲಕ್ಷ್ಮಿ ಯೋಜನೆ ಆಸರೆಯಾಗಿದೆ. ಮಾಸಿಕ 2,000 ಗಳಿಂದ ಕುಟುಂಬ ನಿರ್ವಹಣೆ ಮಾಡಬಹುದಾಗಿದೆ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದರು. ಹಾಗೂ ಈ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರೆಲ್ಲರಿಗೂ ಧನ್ಯವಾದ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಮಾತನಾಡಿ ಎಷ್ಟೋ ಕುಟುಂಬಗಳು ತುಂಬಾ ಬಡತನದಲ್ಲಿದ್ದು ವಯಸ್ಸಾದವರಿಗೂ ಸಹ ಈ ಯೋಜನೆಯು ಆದಾರದ ಸ್ತಂಭವಾಗಿದೆ, ಸರ್ಕಾರಕ್ಕೆ ಕೋಟಿ ಕೋಟಿ ಧನ್ಯವಾದಗಳು ಎಂದು ತಿಳಿಸಿದರು. ಸಾರ್ವಜನಿಕ ಮಹಿಳೆ ಚೈತ್ರ ಮಾತನಾಡಿ ಸರ್ಕಾರ ಆರ್ಥಿಕ ನೆರವು ನೀಡುತ್ತಿರುವುದು ತುಂಬಾ ಉತ್ತಮವಾದ ಯೋಜನೆ ಎಂದು ಹೇಳಿದರು. ಉಪ ವಿಭಾಗ ಅಧಿಕಾರಿ ಡಾ. ಕಾಂತರಾಜ್ ಮಾತನಾಡಿ ಎಲ್ಲಾ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್ ವಿಶ್ವನಾಥ್, ಎಚ್ಎನ್ ಮಂಜುನಾಥ ಲಾಡ್, ಜಿಲ್ಲಾ ಪಂಚಾಯಿತಿ ಉಪನಿರ್ದೇಶಕರಾದ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದರ್ಶಕರಾದ ಯೋಗೀಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯದ ಗೀತಾ ಶಂಕರ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಯೋಗೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿನತ್ ಭಾನು, ಮಾಜಿ ಪುರಸಭಾ ಅಧ್ಯಕ್ಷರಾದ ಎಚ್ ಯು ಫಾರೂಕ್ ಉಪಸ್ಥಿತರಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜ್ಯೋತಿಲಕ್ಷ್ಮಿ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

