ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಜನ್ಮ ದಿನಾಚರಣೆ – ಜೀವನ ಆದರ್ಶಗಳು ಇಂದಿಗೂ ಮಾದರಿ.

ಹುನಗುಂದ ಸಪ್ಟೆಂಬರ್.1

ಸಧೃಡ ದೇಶ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳಷ್ಟು ಮಹತ್ವದ್ದಾಗಿದೆ.ವಿದ್ಯಾರ್ಥಿ ಜೀವನದಲ್ಲಿ ಶಿಸ್ತು.ಸಂಯಮ ಗಾಂಭೀರ್ಯ,ನೈತಿಕತೆಯಂತ ಉದಾತ್ತ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಶಕ್ತ ದೇಶ ಕಟ್ಟುವಲ್ಲಿ ಮುಂದಾಗಬೇಕು ಎಂದು ನಿವೃತ್ತ ಗೌರವ ಕ್ಯಾಪ್ಟನ್ ಅರ್ಜುನ ಕೋರಿ ಹೇಳಿದರು.ಪಟ್ಟಣದ ವ್ಹಿ.ಎಂ.ಕೆ.ಎಸ್.ಆರ್ ವಸ್ತೃದ ಕಲಾ,ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ. ಕ್ರೀಡಾ ವಿಭಾಗ ಹಾಗೂ ಎನ್.ಸಿ.ಸಿ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕ್ರೀಡಾ ದಿನಾಚರಣೆಯ ಕಾರ್ಯಕ್ರಮದ ಅತಿಥಿ ಸ್ಥಾನವಹಿಸಿಕೊಂಡು ಮಾತನಾಡಿದ ಅವರು ಮೇಜರ್ ಧ್ಯಾನಚಂದ್ ಅವರ ಆದರ್ಶಗಳನ್ನು ಮತ್ತು ಸೇನಾ ಜೀವನದ ಅನೇಕ ವಾಸ್ತವ ಘಟನೆಗಳ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು.ಸೌಭಾಗ್ಯ,ತೋಟಗೇರ ಮಾತನಾಡಿ ತಾನು ಅಗ್ನಿವೀರ ನೌಕಾ ವಿಭಾಗದಲ್ಲಿ ಆಯ್ಕೆಯಾಗಲು ಲೆಪ್ಟಿನೆಂಟ ಎಸ್.ಬಿ.ಚಳಗೇರಿಯವರ ಮಾರ್ಗದರ್ಶನ ಕಾರಣವೆಂದು ಹೇಳಿದರು.ಕರ್ನಾಟಕದಿಂದ ಒಟ್ಟು ಆರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು ಬಾಗಲಕೋಟಿ ಜಿಲ್ಲೆಯಿಂದ ತಾನೊಬ್ಬಳೆ ಆಯ್ಕೆಯಾಗಿದ್ದು ಖುಷಿ ತಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಈರ್ವರು ಅತಿಥಿಗಳನ್ನು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು. ಸಂಘ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ. ಎಸ್. ಕಡಪಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಮಾದಕ ವ್ಯಸನಗಳಿಗೆ ಅಂಟಿಕೊಳ್ಳದೆ ದೇಶದ ಉತ್ತಮ ಪ್ರಜೆಗಳಾಗಬೆಕೆಂದು ಹೇಳಿದರು. ಕ್ರೀಡಾ ಕ್ಷೇತ್ರದಲ್ಲಿ ವಿಶೇಷವಾಗಿ ಹಾಕಿ ಕ್ರೀಡೆಯಲ್ಲಿ ಗಣನೀಯ ಸಾಧನೆಗೈದು ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮೇಜರ್ ಧ್ಯಾನಚಂದ್ ಅವರ ಜೀವನದ ಮೌಲ್ಯಗಳು ಇಂದಿಗೂ ಸ್ಮರಿಸಿಕೊಳ್ಳಬೇಕಾಗಿದೆ ಎಂದರು.ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ ಎಸ್.ಬಿ ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಮೇಜರ್ ಧ್ಯಾನಚಂದವರ ಹಾಗೆ ನಿರ್ದಿಷ್ಟ ಗುರಿ ಇಟ್ಟುಕೂಂಡು ಅದನ್ನು ಸಾಧಿಸುವತ್ತ ತಮ್ಮ ಶ್ರಮವನ್ನು ವಿನಿಯೋಗಿಸಬೇಕು ಎಂದರು.ಕುಮಾರಿ. ದ್ರಾಕ್ಷಾಯಣಿ ಗೌಡರ ಪ್ರಾರ್ಥಿಸಿದರು.ಪ್ರೋ.ಎಸ್.ಆರ್.ಗೋಲಗೊಂಡ ಸ್ವಾಗತಿಸಿ, ಡಾ.ಎಸ್.ಆರ್.ನಾಗಣ್ಣವರ ನಿರೂಪಿಸಿ,ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಬಿ.ಎ.ಕಂಠಿಯವರು ವಂದಿಸಿದರು.

ತಾಲೂಕ ವರದಿಗಾರರು:ಮಲ್ಲಿಕಾರ್ಜುನ ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button