ಪುರಸಭಾ ಕಾರ್ಯಾಚರಣೆ – ಪ್ಲಾಸ್ಟಿಕ್ ಬಳಸಿದವರಿಗೆ ದಂಡ.
ತರೀಕೆರೆ ಸಪ್ಟೆಂಬರ್.1

ಶುಕ್ರವಾರ ಸಂತೆ ಮಾರ್ಕೆಟ್ ಮತ್ತು ಎಪಿಎಂಸಿ ಯಾರ್ಡ್ ಬಳಿ, ಬೆಳಿಗ್ಗೆ 7:00 ಸಮಯದಲ್ಲಿ ತರೀಕೆರೆ ಪುರಸಭೆಯ ಸಿಬ್ಬಂದಿಗಳೊಂದಿಗೆ ಆರೋಗ್ಯ ನಿರೀಕ್ಷಕರಾದ ಮಹೇಶ್ ರವರು ಮೇಸ್ತ್ರಿ ಪ್ರಕಾಶ್ ದಿಢೀರ್ ಎಂದು ಕಾರ್ಯಾಚರಣೆ ನಡೆಸಿದರು. ಇವರು ಬರುತ್ತಾರೆಂಬ ಅರಿವೇ ಇಲ್ಲದೆ ವ್ಯಾಪಾರದಲ್ಲಿ ಮಗ್ನರಾದವರಿಗೆ ಶಾಕ್ ಆಯ್ತು. ಪ್ಲಾಸ್ಟಿಕ್ ಕವರ್ ಬಳಸಿದವರೆಲ್ಲರಿಗೂ ಸಹ ದಂಡ ಹಾಕಿ ಪ್ಲಾಸ್ಟಿಕ್ ಕವರ್ ಗಳನ್ನು ಅಮಾನತ್ತು ಮಾಡಿಕೊಂಡರು. ನಂತರ ವ್ಯಾಪಾರಸ್ಥರಿಗೆ ಇನ್ನು ಮುಂದೆ ಪ್ಲಾಸ್ಟಿಕ್ ಬಳಸಿದರೆ ಹೆಚ್ಚಿನದಾಗಿ ಅಂದರೆ ಗರಿಷ್ಠ ದಂಡ ಹಾಕಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳುವಳಿಕೆ ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ