ಕೊಟ್ಟೂರಿನಲ್ಲಿ ನ್ಯೂನ್ಯತೆಗಳನ್ನು ಪರಿಶೀಲಿಸಲು ದಿಢೀರನೆ ಜಿಲ್ಲಾಧಿಕಾರಿ ಭೇಟಿ.
ಕೊಟ್ಟೂರು ಸಪ್ಟೆಂಬರ್.1

ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಶುಕ್ರವಾರ ಬೆಳಗ್ಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರನೆ ಭೇಟಿ ನೀಡಿದರು. ನಂತರ ಆಸ್ಪತ್ರೆಯ ಆಡಳಿತ ಕಚೇರಿಗೆ ಹೋಗಿ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿ ನಂತರ ಆಸ್ಪತ್ರೆಯ ಪ್ರಯೋಗಾಲಯ ಹಾಗೂ ವಾರ್ಡ್ ಗಳು ಹಾಗೂ ಔಷಧಿ ಉಗ್ರಾಣ ಕೊಠಡಿಗೆ ಭೇಟಿ ನೀಡಿ ಔಷಧಿಗಳನ್ನು ಪರಿಶೀಲನೆ ನಡೆಸಿದರು.ಯಾವುದೇ ಕಾರಣಕ್ಕೂ ಬರುವ ರೋಗಿಗಳಿಗೆ ಹೊರಗಡೆ ಔಷಧಿ ಬರೆಯಬಾರದು. ಒಂದು ವೇಳೆ ಬರೆದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ಡಿ ಗ್ರೂಪ್ ಸಿಬ್ಬಂದಿಯ ಕೊರತೆ ಇದೆ ಎಂದು ಸ್ವತ ಜಿಲ್ಲಾಧಿಕಾರಿಗಳೇ ಹೇಳಿದರು. ವೈದ್ಯಕೀಯ ವ್ಯಾಸಂಗ ಮಾಡಿ ಯಾರಾದರೂ ಕಾರ್ಯನಿರ್ವಹಿಸಲು ಮುಂದಾದರೆ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ್ ಸ್ಪಷ್ಟಪಡಿಸಿದರು. ಹಳೆಯ ಪಟ್ಟಣ ಪಂಚಾಯತಿಯ ಜಾಗದಲ್ಲಿ ನೂತನ ವಾಗಿ ಯಾತ್ರೆ ನಿವಾಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 13-14 ಸಾಲಿನ ಎಸ್ ಎಫ್ ಸಿ ವಿಶೇಷ ಅನುದಾನ ಸ್ಪೆಷಲ್ ಗ್ರಾಂಡ್ ನಲ್ಲಿ 50 ಲಕ್ಷದಲ್ಲಿ ಮಾಡಲಾಗಿತ್ತು.

ಮುಂದುವರೆದ ಕಾಮಗಾರಿಗೆ 18-19ನೇ ಸಾಲಿನಲ್ಲಿ 50 ಲಕ್ಷ ರೂಪಾಯಿ ತೆಗೆದುಕೊಂಡಿದ್ದರು.ಆದರೆ ಹೊಸ ಕಾಮಗಾರಿಗಳಿಗೆ ತೆಗೆದುಕೊಳ್ಳುವಂತಿಲ್ಲ.ಎಂದು ಸರ್ಕಾರ ಆದೇಶ ಬಂದಿದ್ದರಿಂದ ನಿಲ್ಲಿಸಲಾಯಿತು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಲಾಯಿತು.ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹೆಸರಿಗಷ್ಟೇ ನಿರ್ಮಿಸಲಾಗಿದೆ ಪಟ್ಟಣದಲ್ಲಿ 15 ರಿಂದ 16 ಶುದ್ದ ನೀರಿನ ಘಟಕ ಸ್ಥಾಪಿಸಲಾಗಿದ್ದು. ಅದರಲ್ಲಿ ಎರಡು-ಮೂರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾವೆ. ಉಳಿದೆಲ್ಲ ಹಾಗೆ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದ್ದಾವೆ ಎಂದು ರೈತ ಮುಖಂಡ ಜಯಪ್ರಕಾಶ್ ನಾಯಕ್ ಜಿಲ್ಲಾಧಿಕಾರಿ ಮುಂದೆ ಹೇಳಿದರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದುರ್ಸ್ಥಿತಿಯಲ್ಲಿರುವ ಶುದ್ಧ ನೀರಿನ ಘಟಕ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಆನಂತರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಯ ಕೊಠಡಿಗೆ ಹಾಗೂ ಅಡಿಗೆ ಕೊಠಡಿಯನ್ನು ಪರಿಶೀಲನೆ ನಡೆಸಿದರು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಕಡಿಮೆ ಆಹಾರ ನೀಡಬಾರದು ಒಂದು ವೇಳೆ ನೀಡಿದರೆ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಿಬ್ಬಂದಿಗಳಿಗೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕಿಗೆ ಅಗತ್ಯವಾಗಿ ಬೇಕಾಗಿರುವ ಕಚೇರಿಗಳು ಅತಿ ಶೀಘ್ರದಲ್ಲೇ ಆರಂಭಿಸಲಾಗುವುದು ಅದರಲ್ಲೂ ಹೆಚ್ಚಾಗಿ ಸಬ್ ರಿಜಿಸ್ಟರ್ ಕಚೇರಿಗೆ ತೆರೆಯಬೇಕೆಂದು ಕೊಟ್ಟೂರು ತಾಲೂಕಿನ ಸಾರ್ವಜನಿಕರ ಬಹು ಬೇಡಿಕೆಯಾಗಿದೆ ಶೀಘ್ರದಲ್ಲೇ ಕಚೇರಿಯನ್ನು ಪ್ರಾರಂಭವಾಗುತ್ತದೆ ಹೇಳಿದರುಸಾರ್ವಜನಿಕರು ಮತ್ತೊಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಕೊಟ್ಟೂರು ತಾಲೂಕಿನಾದ್ಯಂತ ಮಟ್ಕಾ ದಂಧೆ ಅತಿ ಹೆಚ್ಚಾಗಿದ್ದು ಎಷ್ಟೋ ಬಡ ಕುಟುಂಬಗಳು ಬಲಿಯಾಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳು ಮಟ್ಕಾ ದಂಧೆ ನಡೆಸುವವರ ಹೆಸರುಗಳನ್ನು ಗಡಿಪಾರು ಮಾಡಲು ಎಲ್ಲಾ ತಯಾರಿ ನಡೆದಿತ್ತು ಈ ವಿಚಾರವಾಗಿ ಎಸ್ಪಿ ಅವರ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕಾಳಾಪುರ ಗ್ರಾಮದಲ್ಲಿ ತರಳಬಾಳು ಕಾರ್ಯಕ್ರಮದ ನಿಮಿತ್ತ ಅವಘಡದಿಂದ ತೊಂದರೆಗೆ ಈಡಾಗಿರುವ ಕುಟುಂಬದ ಮಹಿಳೆಯ ಮನೆ ಹಾಳು ಆಗಿದ್ದು .ಮಳೆ ಬಂದರೆ ಸಾಕು ನೀರಿನಲ್ಲಿ ಬದುಕು ಪರಿಸ್ಥಿತಿ ಒದಗಿದೆ. ಎಂದು ಜಿಲ್ಲಾಧಿಕಾರಿಗಳ ಹತ್ತಿರ ತಮ್ಮ ಕಷ್ಟವನ್ನು ತೋಡಿಕೊಂಡರು.ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಅಮರೇಶ್ ಜಾಲಹಳ್ಳಿ, ಪ.ಪಂ. ಮುಖ್ಯಧಿಕಾರಿಗಳಾದ ಎ .ನಸ್ರುಲ್ಲಾ, ಕಂದಾಯ ನಿರೀಕ್ಷಕರಾದ ಎಂ. ಹಾಲಸ್ವಾಮಿ, ಗ್ರಾಮ ಲೆಕ್ಕಧಿಕಾರಿಗಳಾದ ಕೆ.ಕೊಟ್ರೇಶ್, ಹೆಚ್. ಹರೀಶ, ಮತ್ತು ಸಾರ್ವಜನಿಕರು ಇದ್ದರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು