ದಿನಗಳಲ್ಲಿಯೇ ಸರ್ವಶ್ರೇಷ್ಟ ದಾನವೇ ರಕ್ತದಾನವಾಗಿದೆ-ಕಲ್ಲಪ್ಪ ಅಮ್ಮಿನಭಾವಿ.

ಹುನಗುಂದ ಸಪ್ಟೆಂಬರ್.3

ಮಾನವನ ದೇಹದ ಜೀವಸೆಲೆಯಾದ ರಕ್ತವನ್ನು ದಾನ ಮಾಡೋದರಿಂದ ಎರಡರಿಂದ ಮೂರು ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಮತ್ತು ಇನ್ನೊಬ್ಬರ ಜೀವವನ್ನು ಉಳಿಸುವ ಸರ್ವಶ್ರೇಷ್ಠ ದಾನವೇ ರಕ್ತದಾನವಾಗಿದೆ ಎಂದು ಬಾಗಲಕೋಟಿಯ ಕೆರೂಡಿ ಬ್ಲಡ್ ಸೆಂಟರ್ ಸುಪರ್ವೈಜರ್ ಕಲ್ಲಪ್ಪ ಅಮ್ಮಿನಭಾವಿ ಹೇಳಿದರು.ತಾಲೂಕಿನ ಸುಕ್ಷೇತ್ರ ಕೂಡಲಸಂಗಮದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜೆಟಿಸಿಸಿ) ಮತ್ತು ಕೆರೂಡಿ ಆಸ್ಪತ್ರೆಯ ಬ್ಲಡ್ ಸೆಂಟರ್ ಸಹೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಕೃತಕವಾಗಿ ತಯಾರು ಮಾಡಲು ಬರದೇ ಇರುವ ಏಕೈಕ ಸಂಪನ್ಮೂಲವೇ ರಕ್ತವಾಗಿದೆ.ಇಂದು ರಕ್ತಹೀನರಿಗೆ ಸರಿಯಾದ ಸಮಯಕ್ಕೆ ರಕ್ತ ಸಿಗದೇ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ.ಒಬ್ಬರ ರಕ್ತದಲ್ಲಿ ಕೆಂಪು ರಕ್ತಕಣ ಮತ್ತು ಬಿಳಿ ರಕ್ತಕಣ ಮತ್ತು ಪ್ಲಾಸ್ಮಾ ಅಂತ ಈ ರೀತಿ ಐದು ತರವಾಗಿ ವರ್ಗಿಸಲಾಗುವುದು.ಒಬ್ಬರ ರಕ್ತದಾನದಿಂದ ಮೂವರ ಜೀವವನ್ನು ಉಳಿಸಲು ಸಾಧ್ಯ.ರಕ್ತದಾನ ಮಾಡೋದರಿಂದ ಹೃದಯ ಖಾಯಿಲೆ ಮತ್ತು ಕ್ಯಾನ್ಸರ್‌ದಂತ ರೋಗಗಳು ಸಮೀಪಕ್ಕೆ ಸುಳಿಯೋದಿಲ್ಲ.ಅವರ ದೇಹದಲ್ಲಿ ಕೊಬ್ಬಿನಾಂಶವನ್ನು ಕಡಿಮೆಯಾಗುತ್ತೇ ಹೊಸ ರಕ್ತ ಉತ್ಪತ್ತಿ ಹೆಚ್ಚಾಗುತ್ತದೆ ಎಂದರು.ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ವೀರೇಶ ನಂದಿಕೋಲಮಠ ನೇತೃತ್ವವನ್ನು ವಹಿಸಿಕೊಂಡಿದ್ದರು.ಪ್ರಾಚಾರ್ಯ ಸುರೇಶ್ ರಾಠೋಡ,ಯುನಿಟ್ ಹೆಡ್ ಯಲ್ಲಪ್ಪ ಸವದತ್ತಿ ಮತ್ತು ಬೋಧಕ ವಿಶ್ವನಾಥ್ ಹೊಕ್ರಾನಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button