ನವಜಾತ ಶಿಶುವಿಗೆ ತಾಯಿಯ ಎದೆ ಹಾಲು ಜೀವಾಮೃತವಾಗಿದೆ-ಡಾ.ಸುಜಾತಾ ಪಾಟೀಲ.

ಹುನಗುಂದ ಸಪ್ಟೆಂಬರ್.3

ನವಜಾತ ಶಿಶುವಿಗೆ ತಾಯಿಯ ಎದೆ ಹಾಲು ಜೀವಾಮೃತ,ಮಗುವಿಗೆ ಹಾಲುಣಿಸುವುದರಿಂದ ತಾಯಿ ಮತ್ತು ಮಗವಿನ ನಡುವೆ ವಾತ್ಸಲ್ಯ ಮತ್ತು ಬಾಂಧವ್ಯ ಹಾಗೂ ಪ್ರೀತಿಯನ್ನು ಹೆಚ್ಚಿಸಲು ಸಾಧ್ಯ ಎಂದು ಚಿಕ್ಕ ಮಕ್ಕಳ ತಜ್ಞೆ ಡಾ. ಸುಜಾತಾ ಪಾಟೀಲ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಗೌರಮ್ಮ ಚರಂತಿಮಠ ನರ್ಸಿಂಗ್ ಮಹಾವಿದ್ಯಾಲಯದ ಸಹಯೋಗದಲಿ ಒಂದು ವಾರ ಹಮ್ಮಿಕೊಳ್ಳಲಾಗಿದ್ದ ಸ್ತನಪಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ತಾಯಿ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇದ್ದು ತಾಯಿ ತನ್ನ ಮಗುವಿಗೆ ಹಾಲುಣಿಸುವುದರಿಂದ ಮಗುವಿಗೆ ಬರುವ ಅನೇಕ ರೋಗಗಳನ್ನು ತಡೆಯಬಹುದು.ಮಗು ಮತ್ತು ತಾಯಿಯ ಆರೋಗ್ಯದಲ್ಲೂ ಸಾಕಷ್ಟು ಧನಾತ್ಮಕ ಬದಲಾವಣೆ ಉಂಟಾಗಲಿದೆ.ಸೂಕ್ತ ಸಮಯದಲ್ಲಿ ಮಗುವಿಗೆ ಎದೆಯ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಇನ್ನೀತರ ರೋಗಗಳನ್ನು ಬರದಂತೆ ತಡೆಯಬಹುದಾಗಿದೆ.ಮಗುವಿಗೆ ಹುಟ್ಟಿನಿಂದ ಎರಡು ವರ್ಷದವರಗೆ ಹಾಲುಣಿಸುವುದರಿಂದ ದೇಹ ಮತ್ತು ಹಾರ್ಮೋನ್‌ಗಳಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ.ತಾಯಿಯ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆಯಾಗುತ್ತದೆ.ಮತ್ತೇ ಸುಂದರ ದೇಹ ನಿರ್ಮಾಣವಾಗಲಿದೆ.ಮೊದಲ ಬಾರಿಗೆ ತಾಯಿಯಾದ ಎದೆ ಹಾಲುಣಿಸಲು ಒಂದಿಷ್ಟು ಸಂಕೋಚ ಮತ್ತು ಗೊಂದಲಗಳು ಸರ್ವೆಸಾಮಾನ್ಯ.ಇತ್ತೀಚಿಗೆ ತಾಯಿತನವನ್ನು ಪಡೆದವರು ಹೆಚ್ಚು ಎದೆ ಹಾಲು ಕೊಟ್ಟರೇ ನಮ್ಮ ದೇಹದ ಸೌಂದರ್ಯ ಹಾಳಾಗುತ್ತದೆಂದು ತಾಯಂದಿರು ಸ್ವಲ್ಪು ಅವಧಿಯಲ್ಲೇ ಮಕ್ಕಳಿಗೆ ಹಾಲು ಕೊಡುವುದ್ದನ್ನು ನಿಲ್ಲಿಸಿ ಬಿಡುತ್ತಾರೆ ಇದರಿಂದ ಮಕ್ಕಳು ಜೀವನದುದ್ದಕ್ಕೂ ಅನಾರೋಗ್ಯದಿಂದ ಬಳಲುವ ಸಾಧ್ಯಗಳಿವೆ.ಎಷ್ಟೆಯಲ್ಲ ತಾಯಿ ಆರೋಗ್ಯದ ಮೇಲೂ ಕೂಡಾ ಪರಿಣಾಮ ಬೀರಬಹುದಾಗಿದೆ ಎಂದರು.ಈ ಸಂದರ್ಭದಲ್ಲಿ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಳು ಕಿರು ನಾಟಕದ ಮೂಲಕ ಸ್ತನಪಾನದ ಮಹತ್ವ ಕುರಿತು ಜಾಗೃತಿ ಮೂಡಿಸಿದರು.ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಸುರೇಶಗೌಡ ಪಾಟೀಲ,ಆಪ್ತ ಸಮಾಲೋಚಕಿ ಆರ್.ಕೆ. ಕುಂಟೋಜಿ, ಸುಮಿತ್ರಾ, ವೀಣಾ ಕರಗಿ, ಮಹಾಂತೇಶ ಭಾವಿಕಟ್ಟಿ,ಮಲ್ಲು ಮೂಲಿಮನಿ, ಬಸವರಾಜ ದರಗಾದ ಉಪಸ್ಥಿತರಿದ್ದರು.ರಾಹುಲ್ ಮೈತ್ರಿ ಸ್ವಾಗತಿಸಿದರು.ಅಂಕಿತ್ ಕುಂಟೋಜಿ ನಿರೂಪಿಸಿದರು.ಚಂದ್ರಕಲಾ ಚಲವಾದಿ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button