ಆಗಷ್ಟ.26 ರಂದು ಶ್ರೀ ವಿಜಯ ಮಹಾಂತೇಶ ಬ್ಯಾಂಕ್ ಸರ್ವ ಸಾಧಾರಣ ಸಭೆ.
ಹುನಗುಂದ ಆಗಷ್ಟ.23

ಪಟ್ಟಣದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ 2022-23ನೇ ಹಣಕಾಸು ವರ್ಷದಲ್ಲಿ ರೂ.282.24 ಲಕ್ಷ ನಿವ್ವಳ ಲಾಭ ಗಳಿಸಿದೆ.62 ನೆಯ ವಾರ್ಷಿಕ ಮಹಾಸಭೆಯು ಆ.26 ರಂದು ಶನಿವಾರ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ರವಿ ಎಂ.ಹುಚನೂರ ಹೇಳಿದರು.
ಮಂಗಳವಾರ ನಗರದಲ್ಲಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಆಡಳಿತ ಮಂಡಳಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ 62 ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಗೆ ಬ್ಯಾಂಕ್ ಸದಸ್ಯರಿಂದ ಆರ್ಥಿಕವಾಗಿ ಸಾಕಷ್ಟು ಅಭಿವೃದ್ದಿ ಹೊಂದಿ ಸದ್ಯ ಮುಖ್ಯ ಕಚೇರಿ ಸೇರಿ 12 ಶಾಖೆಗಳನ್ನು ಹೊಂದಿದ್ದು.
127 ಜನ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. 33.೦89 ಸದಸ್ಯರನ್ನು ಹೊಂದಿದೆ. ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ 2022-23 ನೇ ಸಾಲಿನಲ್ಲಿ ರೂ.282.24 ಲಕ್ಷ ನಿವ್ವಳ ಲಾಭ. 182೦.೦9 ಶೇರು ಬಂಡವಾಳು, 56.47೦.85. ಒಟ್ಟು ಠೇವುಗಳು, 61.815.69 ದುಡಿಯುವ ಬಂಡವಾಳ, 4೦.998.೦1 ಸಾಲ ಮತ್ತು ಮುಂಗಡಗಳು ಹೊಂದಿದೆ.
ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಬ್ಯಾಂಕಿನ ಶೇರು ಸದಸ್ಯರು ವೇಳೆಗೆ ಸರಿಯಾಗಿ ಹಾಜರ ಇರುವಂತೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಆಲದಿ ತಿಳಿಸಿದ್ದಾರೆ.ಬ್ಯಾಂಕಿನ ಉಪಾಧ್ಯಕ್ಷ ದೇವು ಡಂಬಳ, ನಿರ್ದೇಶಕರಾದ ಅನ್ನಪೂರ್ಣ ಹೊಸೂರ,ಬಸವರಾಜ ನಾಡಗೌಡ, ಮಂಜುನಾಥ ಆಲೂರ, ನೀಲಪ್ಪ ತಫೇಲಿ,ಮಲ್ಲಪ್ಪ ವೀರಾಪೂರ,ಮಹಾಂತೇಶ ಅವಾರಿ,ಶಶಿಕಾಂತ ಪಾಟೀಲ, ರಾಜಕುಮಾರ ಬಾದವಾಡಗಿ, ಸಂಗಣ್ಣ ಕಡಪಟ್ಟಿ, ಬಸವರಾಜ ಗದ್ದಿ,ಬಿ.ವಿ. ಪಾಟೀಲ, ಶಿವಾನಂದ ಕಂಠಿ, ತಿರುಪತಿ ಕುಷ್ಟಗಿ,ಸೋಮಶೇಖರ ಬಲಕುಂದಿ, ಲಕ್ಷ್ಮೀ ಬಾಯಿ ಮುಕ್ಕಣ್ಣವರ,ಎಸ್.ಎಸ್.ಗಂಜಿಹಾಳ,ಸುಜಾತಾ ನಾಗರಾಳ,ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಪಾಟೀಲ,ಸಿಬ್ಬಂದಿಗಳಾದ ರಾಜು ಬಯ್ಯಾಪೂರ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ. ಬಂಡರಗಲ್ಲ