ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ-ಡಾ. ದೇವರಾಜ್.

ತರೀಕೆರೆ ಸಪ್ಟೆಂಬರ್.6

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಶಿಕ್ಷಕರು ಪ್ರಮುಖರಾಗಿದ್ದಾರೆ. ಅವರ ಮಾರ್ಗದರ್ಶನವೇ ಸಾಧನಗೆ ಮುಖ್ಯ ಕಾರಣವೆಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿಯಾದ ಡಾ. ಟಿ ಎಂ ದೇವರಾಜ್ ಹೇಳಿದರು. ಅವರು ಇಂದು ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿವೃತ್ತ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು 38ನೇ ರಾಷ್ಟ್ರೀಯ ನೇತ್ರದಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಇಲ್ಲಿನ ಆಸ್ಪತ್ರೆಯಲ್ಲಿರುವ ವೈದ್ಯರು, ದಾದಿಯರು ಸಿಬ್ಬಂದಿಗಳು ಇಂದು ಕರ್ತವ್ಯ ನಿರ್ವಹಿಸಲು ಪಾಠ ಪ್ರವಚನಗಳನ್ನು ಹೇಳಿಕೊಟ್ಟ ಶಿಕ್ಷಕರಿಂದ ಸಾಧ್ಯವಾಯಿತು. ಈ ವೇದಿಕೆಯಲ್ಲಿ ಆಸೀನರಾಗಿರುವ ನಿವೃತ್ತ ಶಿಕ್ಷಕರಾದ ಕಲ್ಲೇಶಪ್ಪ, ಶಿವಮೂರ್ತಿ, ಸಿದ್ದರಾಮಪ್ಪ, ಟಿಎಂ ಸೋಮಶೇಖರ್, ಬಿ ಕುಮಾರಪ್ಪ,ಬಿ ಬಸವರಾಜಪ್ಪ, ಚಂದ್ರಪ್ಪ, ಬಿಎಚ್ ಕುಮಾರಸ್ವಾಮಿ, ಎಸ್ ಹೆಚ್ ರಂಗಪ್ಪ,ಬಿ ಬಸವಲಿಂಗಪ್ಪ,ಟಿ ರವಿಕುಮಾರ್ ಮುಂತಾದ ಶಿಕ್ಷಕರಿಂದ ಇಂದು ಸಾವಿರಾರು ಜನ ಉನ್ನತವಾದ ಸ್ಥಾನಮಾನ ಪಡೆದಿದ್ದಾರೆ. ಡಾಕ್ಟರ್, ಇಂಜಿನಿಯರ್, ಲಾಯರ್, ಮತ್ತು ಐಎಎಸ್ ಅಧಿಕಾರಿಗಳು ಐಪಿಎಸ್ ಅಧಿಕಾರಿಗಳು, ಮತ್ತು ರಾಜಕಾರಣಿಗಳು ಆಗಿದ್ದಾರೆ, ಹಾಗೆಯೇ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಯುಷ್ಯ ವೈದ್ಯರಾದ ಡಾ. ಶ್ರೀನಿವಾಸ್ ಮಾತನಾಡಿ ಶಿಕ್ಷಕರು ಜ್ಞಾನಾರ್ಜನೆಯನ್ನು ಮಕ್ಕಳಿಗೆ ದಾರೆ ಎರೆದಿದ್ದಾರೆ. ದೇಶದ ಮೊದಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಮಕ್ಕಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡುಯುತ್ತಾರೆ ಶಿಕ್ಷಕರು. ಗುರುಗಳ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ ಎಂದು ಹೇಳಿದರು. ನೇತ್ರಾಧಿಕಾರಿ ಕೆಂಪು ರಂಗಯ್ಯರವರು ಮಾತನಾಡಿ ಒಬ್ಬ ವ್ಯಕ್ತಿಯು ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯ ಅಂದರಿಗೆ ದೃಷ್ಟಿ ನೀಡುತ್ತದೆ. ಪ್ರತಿ ವರ್ಷ ಸರಾಸರಿ 5600 ನೇತ್ರ ದಾನಿಗಳಾಗುತ್ತಿದೆ. ಅಂದಾಜು1.25 ಲಕ್ಷ ಜನರು ಕಾರ್ನಿಯಾ ಸಂಬಂಧಿ ಅಂಧತ್ವದಿಂದ ಬಳಲುತ್ತಿದ್ದು ದಾನಕ್ಕಾಗಿ ಕಾಯುತ್ತಿರುತ್ತಾರೆ. ಕರ್ನಾಟಕದಲ್ಲಿ 32 ನೇತ್ರ ಬ್ಯಾಂಕುಗಳು ಸೇವೆ ಸಲ್ಲಿಸುತ್ತಿದ್ದು, 7 ಸರ್ಕಾರಿ ಸೌಮ್ಯದಲ್ಲಿದೆ. ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಬೇಧ ಭಾವವಿಲ್ಲದೆ ನೇತ್ರದಾನ ಮಾಡಬಹುದು. ನೇತ್ರದಾನ ಅತ್ಯುತ್ತಮ ಮಾನವೀಯ ಸೇವೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಮಂಜುನಾಥ್, ಡಾ. ಚನ್ನಬಸಪ್ಪ, ಡಾ. ಭಾಗ್ಯಲಕ್ಷ್ಮಿ, ಡಾ. ಮೋಹನ್, ಉಪಸ್ಥಿತರಿದ್ದರು. ಹಾಗೂ ಎಲ್ಲಾ ಶಿಕ್ಷಕರಿಗೂ ಉಚಿತ ಆರೋಗ್ಯ ತಪಾಸಣೆ ಮಾಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಶೃಶೋಸಕರಾದ ಗುರುಮೂರ್ತಿ ಸ್ವಾಗತಿಸಿ, ಹಿರಿಯ ಫಾರ್ಮಸಿಸ್ಟ್ ಸುಮಾ ಪ್ರಾರ್ಥಿಸಿ, ಮಂಜಪ್ಪ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button