ಶ್ರೀನಿವಾಸ್ ರವರದು ಇನ್ನೂ ಹತ್ತು ವರ್ಷಗಳ ಅಸಾಧಾರಣ ಸೇವೆ-ವಿನಯ್ ಗುರೂಜಿ.

ತರೀಕೆರೆ ಸಪ್ಟೆಂಬರ್.6

ತಾಯಿ ಜನ್ಮ ಕೊಟ್ಟರೆ, ಶಿಕ್ಷಕ ಜೀವನವನ್ನೇ ರೂಪಿಸುತ್ತಾನೆ. ಜಗತ್ತಿನಲ್ಲಿ ಎಲ್ಲರೂ ಗುರುಗಳೇ ಆಗಿರುತ್ತಾರೆ. ದೇಶದ ಪ್ರಧಾನಿಗೂ ಸಹ ಗುರು ಇದ್ದಾರೆ, ಪ್ರಧಾನಿಯಾದರು ಶಿಕ್ಷಕರಿಗೂ ಗುರುಗಳಿಗೂ ಗೌರವ ನೀಡುತ್ತಾರೆ ಎಂದು ಅವಧೂತ ವಿನಯ್ ಗುರೂಜಿ ರವರು ಇಂದು ಸಪ್ತಗಿರಿ ಕನ್ವೆನ್ಷನ್ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ತರೀಕೆರೆ ಮತ್ತು ಅಜ್ಜಂಪುರ, ಪುರಸಭೆ ತರೀಕೆರೆ, ಪಟ್ಟಣ ಪಂಚಾಯಿತಿ ಅಜ್ಜಂಪುರ, ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆ ಇವರ ವತಿಯಿಂದ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಶಾಸಕ ಶ್ರೀನಿವಾಸ ರವರು ಇನ್ನು ಹತ್ತು ವರ್ಷಗಳ ಅಸಾಧಾರಣ ಸೇವೆ ಮಾಡುವರು. ಬಾಡಿದ ಹೂಗಳನ್ನು ದೇವರಿಗೆ ಕೊಡುವವನು ಪುರೋಹಿತ ಪೂಜಾರಿ, ಎಂದೂ ಮಾಡದ ಹೂಗಳನ್ನು ಕೊಡುವವರು ಶಿಕ್ಷಕರು. ಜಾತಿ ಧರ್ಮ ಮೀರಿ ಬೆಳೆದಿರುವುದು ಶಿಕ್ಷಕ ವೃತ್ತಿ. ಭಗವಾನ್ ಬುದ್ಧನು ಅಂಗುಲಿಮಾಲನನ್ನು ಬದಲಾಯಿಸಿದ ಹಾಗೆ ಶಿಕ್ಷಕರು, ರೌಡಿಗಳು ಕಳ್ಳರನ್ನು ಇಲ್ಲದಂತೆ ಮಾಡುವ ಶಕ್ತಿ ಇದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಜಿಎಚ್ ಶ್ರೀನಿವಾಸ್ ಮಾತನಾಡಿ ಮಕ್ಕಳನ್ನು ಪ್ರೀತಿಯಿಂದ ಕಾಣಿರಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಪರಿವರ್ತನೆ ಮಾಡುವ ಶಕ್ತಿ ಇದೆ. ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಪ್ರಯತ್ನಿಸಬೇಕು. ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಬಟ್ಟೆ ಬಿಸಿಯೂಟ ಮೊಟ್ಟೆ ಹಾಲು ಶೂ ಸಾಕ್ಸುಗಳನ್ನು ಕೊಡುತ್ತಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಶಿಕ್ಷಕರು ಕಾರಣರಲ್ಲ, ಸಮಾಜವೇ ಕಾರಣ. ಶಿಕ್ಷಕರ ಮೆಡಿಕಲ್ ಬಿಲ್ 2.32 ಕೋಟಿ ರೂ ಕಳೆದ ವರ್ಷದಿಂದ ಬಾಕಿ ಇದ್ದದ್ದನ್ನು ತಕ್ಷಣವೇ ಕೊಡಿಸಿದ್ದೇನೆ. ಶಿಕ್ಷಕರಿ ಏನೇ ಸಮಸ್ಯೆಗಳಿದ್ದರೂ ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ನಾನು ನನ್ನ ಸಿಬ್ಬಂದಿಗಳು,ನನ್ನ ಪತ್ನಿ,ನನ್ನ ಮಗಳು, ನಾವುಗಳು ತಮಗೆ ಸ್ಪಂದಿಸುತ್ತೇವೆ. ಎಲ್ಲಾ ಜಾತಿ ಧರ್ಮದವರಿಗೆಲ್ಲರಿಗೂ ನಾನು ಶಾಸಕನಾಗಿದ್ದೇನೆ. ಬೇದ ಭಾವವಿಲ್ಲದೆ ಕೆಲಸ ಮಾಡುತ್ತೇನೆ.

ನಿಮ್ಮ ಬೇಡಿಕೆಯಂತೆ ಗುರುಭವನ ನಿರ್ಮಾಣಕ್ಕೆ ಸಹಕಾರ ಮಾಡುತ್ತೇನೆ. ತರೀಕೆರೆಯಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣ ಮಾಡುತ್ತೇನೆ. ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರಬೇಕೆಂದರೆ ಕ್ರೀಡಾ ಚಟುವಟಿಕೆಗಳನ್ನು ನಡೆಸಿ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿರಿ ಎಂದು ಹೇಳಿದರು. ಪುರಸಭಾ ಮುಖ್ಯ ಅಧಿಕಾರಿ ಎಚ್ ಪ್ರಶಾಂತ್ ಅವರು ಮಾತನಾಡಿ ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಕೊಳೆಯದೆ ಮೊಳಕೆಯಾಗಿ ಹೊರಬರಲಿ ಎಂದು ಸಾಹಿತಿ ದೇವನೂರು ಮಹದೇವರ ಮಾತುಗಳನ್ನು ಹೇಳುತ್ತಾ ಶಿಕ್ಷಕರು ಮಕ್ಕಳಿಗೆ ಮಾನವೀಯತೆ ಕಳಿಸಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬೋಧಿಸಬೇಕು. ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ, ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡಲು ಎಲ್ಲರಿಗೂ ಅರಿವು ಮೂಡಿಸಿರಿ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಗೋವಿಂದಪ್ಪ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಪ್ರೀತಿಯಿಂದ ಬೋಧನೆ ಮಾಡಿರಿ, ಮಕ್ಕಳು ಈ ದೇಶದ ಉಜ್ವಲವಾದ ಭವಿಷ್ಯ ರೂಪಿಸುವಂತಾಗಬೇಕು. ಶಾಸಕರಿಗೆ ಶಿಕ್ಷಕರ ಬಗ್ಗೆ ತುಂಬಾ ಗೌರವವಿದೆ,

ಶಿಕ್ಷಕರ ಮೆಡಿಕಲ್ ಬಿಲ್ಲನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಸಮಾಜ ಸೇವಕ ಎಂ ನರೇಂದ್ರ ಮಾತನಾಡಿ ತಾಯಿಯಂತೆ ಎರಡನೇ ತಾಯಿಯ ಸ್ಥಾನ ಶಿಕ್ಷಕರು ಹೊಂದಿದ್ದಾರೆ ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚಾಗಿದೆ. ತಾವು ದಾರಿ ತಪ್ಪಬಾರದು ಎಂದು ಹೇಳಿದರು. ಪ್ರಭಾಕರ್ ಅವರು ಮಾನ್ಯ ಮುಖ್ಯಮಂತ್ರಿಗಳು ಶಿಕ್ಷಕರ ದಿನಾಚರಣೆಯ ಸಂಬಂಧ ನೀಡಿರುವ ಸಂದೇಶವನ್ನು ಓದಿ ಹೇಳಿದರು. ಕಾರ್ಯಕ್ರಮದಲ್ಲಿ ಸಪ್ತಗಿರಿ ಗ್ರೂಪ್ಸ್ ಮಾಲೀಕರಾದ ಟಿಎನ್ ಲೋಕೇಶ್, ಬಿ ಆರ್ ಸಿ ಉಮೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಟಿ ಎಸ್ ಗಣೇಶ್, ದೈಹಿಕ ಶಿಕ್ಷಣ ಪರೀಕ್ಷಕರಾದ ಎಂ ಪ್ರಕಾಶ್, ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಎಚ್ ನಾಗರಾಜಪ್ಪ, ಜಿ ಎನ್ ಈಶ್ವರಪ್ಪ, ಸಿ ವಿ ರವಿ, ಎಸ್ ಬಿ ನಾಗರಾಜ್, ಎ ಪಿ ಚಂದ್ರಪ್ಪ, ಮಾಜಿ ಪುರಸಭಾ ಅಧ್ಯಕ್ಷ ಪ್ರಕಾಶ್ ವರ್ಮಾ, ಮುಂತಾದವರು ಉಪಸ್ಥಿತರಿದ್ದು, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು, ಮತ್ತು ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button