ಕೇಂದ್ರದ ಬಜೆಟ್ ದಲ್ಲಿ ಕರ್ನಾಟಕಕ್ಕೆ ಅನ್ಯಾಯ – ಸಚಿವ ಶಿವಾನಂದ ಪಾಟೀಲ.
ಬಸವನ ಬಾಗೇವಾಡಿ ಫೆ.02

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಬಜೆಟ್ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಕೇಂದ್ರ ಬಜೆಟ್ ಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕ ರಾಜ್ಯಕ್ಕೆ ಕೇಂದ್ರದ ಬಜೆಟ್ ಏನನ್ನೂ ಕೊಟ್ಟಿಲ್ಲ.
ರಾಜ್ಯದ ನೀರಾವರಿಗೆ, ಕೃಷಿಗೆ ಆದ್ಯತೆ ಸಿಕ್ಕಿಲ್ಲ. ರೈತರಿಗೆ ಸಾಲ ಕೊಡುವ ನಬಾರ್ಡ್ ನೆರವು ಕಡಿಮೆ ಮಾಡಲಾಗಿದೆ. ಹೆಚ್ಚಿನ ತೆರಿಗೆ ಕೊಡುವ ರಾಜ್ಯಗಳಿಗೆ ಉತ್ತೇಜನ ನೀಡಿಲ್ಲ. ಬ್ರಾಡ್ ಗೇಜ್, ವಿಮಾನ ನಿಲ್ದಾಣದ ಘೋಷಣೆ ಇಲ್ಲ. ಜಿ.ಎಸ್.ಟಿ ಅತೀ ವೇಗದಲ್ಲಿ ಕಾರ್ಯಗತ ಗೊಳಿಸಿದ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ ಎಂದ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

