ಇಂದು ಮಣಿಕಂಠನ ಮಂದಿರ ಉದ್ಘಾಟನಾ ಸಂಭ್ರಮ – ಕುಂಭಮೇಳ ಹಾಗೂ ಅನ್ನ ಸಂತರ್ಪಣೆ ಸೇವೆ ಜರುಗಿತು.
ಜಕ್ಕಲಿ ಜ.03

ಸ್ಥಳೀಯ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಸಮಿತಿ (ರಿ) ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯ ಉದ್ಘಾಟನಾ ಸಮಾರಂಭ, ಮಹಾಪೂಜೆ, ಅಗ್ನಿಪೂಜೆ ಹಾಗೂ ಎಣ್ಣೆಸೇವೆ ಕಾರ್ಯಕ್ರಮಗಳು ಜನವರಿ 04 ರ ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಅತ್ಯಂತ ಸಡಗರದಿಂದ ಜರುಗಲಿವೆ.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ನಿಡಗುಂದಿಕೊಪ್ಪದ ಶಾಂತಾ ಶಿವಯೋಗಿ ಮಂದಿರದ ಶ್ರೀ ಮು.ನಿ.ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಮಿಥುನ ಜಿ. ಪಾಟೀಲ (ಅಧ್ಯಕ್ಷರು, ತಾಲೂಕು ಗ್ಯಾರಂಟಿ ಸಮಿತಿ, ರೋಣ) ಅವರು ಉದ್ಘಾಟಿಸಲಿದ್ದಾರೆ. ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಸಮಿತಿಯ ಅಧ್ಯಕ್ಷರಾದ ಶ್ರೀ ವೀರಪ್ಪ ತಳವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ರವೀಂದ್ರನಾಥ ದೊಡ್ಡಮೇಟಿ, ಶ್ರೀ ಗುರುಲಿಂಗಮೂರ್ತಿ ಮಂಟಯ್ಯನಮಠ, ಶ್ರೀ ಅಪ್ಪಣ್ಣ ಗರಡಿ, ಶ್ರೀ ಭದ್ರಪ್ಪ ಗಂಟೇರ, ಶ್ರೀ ಅಂದಾನಪ್ಪ ಜಿ. ದೊಡ್ಡಮೇಟಿ, ಶ್ರೀ ರಾಜು ಪಲ್ಲೇದ, ಶ್ರೀ ರಾಜು ಮುಗಳಿ, ಶ್ರೀ ಶ್ರೀನಿವಾಸ ಹುಲ್ಲೂರ, ಶ್ರೀ ಮುತ್ತು ಮೇಟಿ, ಶ್ರೀ ಮುತ್ತಣ್ಣ ಅಕ್ಕಿಶೆಟ್ಟರ, ಶ್ರೀ ಮೌನೇಶ ಬಡಿಗೇರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜಕ್ಕಲಿ ಗ್ರಾಮದ ಗುರು-ಹಿರಿಯರು ಹಾಗೂ ಸದ್ಭಕ್ತ ಮಂಡಳಿಯವರು ಉಪಸ್ಥಿತರಿರುವರು.

ಭಾನುವಾರ ಬೆಳಿಗ್ಗೆ 8:00 ಗಂಟೆಗೆ ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಶ್ರೀ ಅಯ್ಯಪ್ಪಸ್ವಾಮಿಯ ಮೂರ್ತಿ ಮೆರವಣಿಗೆ ಹಾಗೂ ಕುಂಭ ಮೇಳದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 11:30 ಕ್ಕೆ ಮಹಾ ಪೂಜೆ ಹಾಗೂ ಮಹಾ ಮಂಗಳಾರತಿ ಜರುಗಲಿದ್ದು, ತದನಂತರ ಸದ್ಭಕ್ತರಿಗೆ ಮಹಾ ಪ್ರಸಾದ (ಅನ್ನಸಂತರ್ಪಣೆ) ಹಮ್ಮಿಕೊಳ್ಳಲಾಗಿದೆ.
ಮುಂದುವರಿದು, ಜನವರಿ 07 ರ ಬುಧವಾರ ಮಧ್ಯಾಹ್ನ 12:00 ಗಂಟೆಗೆ ಇರುಮುಡಿ ಪೂಜೆ ಹಾಗೂ ಅಂದು ಸಾಯಂಕಾಲ 7:00 ಗಂಟೆಗೆ ಶಬರಿಯಾತ್ರೆ ಜರುಗಲಿದೆ ಎಂದು ಸಮಿತಿ ತಿಳಿಸಿದೆ.
ಈ ಎಲ್ಲಾ ಪುಣ್ಯ ಕಾರ್ಯಗಳಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಸದ್ಭಕ್ತರು ತನು-ಮನ-ಧನಗಳಿಂದ ಸಹಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಸಮಿತಿ ಹಾಗೂ ಜಕ್ಕಲಿ ಗ್ರಾಮದ ಗುರು-ಹಿರಿಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

