ವಿದ್ಯಾರ್ಥಿನಿಯರ ಕಬಡ್ಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಕೊಟ್ಟೂರು ಸಪ್ಟೆಂಬರ್.8

ತಾಲೂಕಿನ ರಾಂಪುರ ಗ್ರಾಮದ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರು ತಾಲೂಕು ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಪಡೆದಿದ್ದಾರೆ.ಗುರುವಾರ ಕೂಡ್ಲಿಗಿ ತಾಲೂಕಿನ ವಾಸವಿ ಪ್ರೌಢಶಾಲೆ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಂಪುರ ಗ್ರಾಮದ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರು ಬಡಲಡುಕು ಪ್ರೌಢಶಾಲೆ ವಿದ್ಯಾರ್ಥಿನಿಯರ ವಿರುದ್ಧ 08 ಅಂಕ ಅಂತರದಿಂದ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ದೈಹಿಕ ಶಿಕ್ಷಕರಾದ ಎಲ್. ಸಿ. ಅನಿಲ್ ಕುಮಾರ್ ರವರು ತಿಳಿಸಿದರು.ಕೋಟ್.ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪಂದ್ಯವು ಅತ್ಯಂತ ಪುರಾತನವಾದದ್ದು ಈ ಕ್ರೀಡೆಯಲ್ಲಿ ಗಂಡು ಮಕ್ಕಳು ಹೆಚ್ಚು ಆಸಕ್ತಿ ಇರುವಾಗ ಇಂತಹ ಕ್ರೀಡಾ ಚಟುವಟಿಕೆಗಲ್ಲಿ ಮಹಿಳೆಯರ ಪಾತ್ರ ಇತ್ತೀಚಿಗೆ ಘಣನೀಯವಾಗುತ್ತಿದೆ ರಾಂಪುರ ಗ್ರಾಮದ ವಿದ್ಯಾರ್ಥಿನಿಯರು ಕಬಡ್ಡಿ ಪಂದ್ಯದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ಸಂತೋಷದ ವಿಷಯವಾಗಿದೆ ಇವರು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳಲಿ ಎಂದು ಗ್ರಾಮಸ್ಥರ ಆಶಯವಾಗಿದೆ ರಮೇಶ್.ರಾಂಪುರ ಗ್ರಾಮದ ನಿವಾಸಿ ಹಾಗೂ ಕಬಡ್ಡಿ ತರಬೇತಿದಾರರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಪತ್ರಿಕೆ ಜೊತೆ ಹಂಚಿಕೊಂಡರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು