ಇಂದು ಅಮರಾವತಿ ಬೈಲ ಬಸವೇಶ್ವರ ಜಾತ್ರೆ ಹಾಗೂ ಸಾಮೂಹಿಕ ವಿವಾಹ.
ಹುನಗುಂದ ಸಪ್ಟೆಂಬರ್.9

ತಾಲೂಕಿನ ಅಮರಾವತಿ ಗ್ರಾಮದ ಶ್ರೀ ಬೈಲಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು 17ನೆಯ ಸಾಮೂಹಿಕ ವಿವಾಹ ಕಾರ್ಯಕ್ರಮ ಸೆ.1೦ ರಂದು ರವಿವಾರ ಬೆಳಗ್ಗೆ 9.3೦ ಗಂಟೆಗೆ ಜರುಗಲಿದೆ.ಚಳಗೇರಿ ತಳಗೇರಿಯ ವೀರಸಂಗಮೇಶ್ವರ ಶ್ರೀಗಳು,ಹರಸೂರ ಸಂಸ್ಥಾನಮಠದ ಸಿದ್ದರಾಮ ಶ್ರೀಗಳು,ಗುಳೇದಗುಡ್ಡದ ಡಾ.ನೀಲಕಂಠ ಶ್ರೀಗಳು,ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು,ಮನಸೂರ ಮಠದ ಡಾ.ಬಸವರಾಜ ದೇವರು,ದಾಸಬಾಳಮಠದ ವೀರೇಶ್ವರ ಸ್ವಾಮಿಗಳು,

ಅಂಕಲಿಮಠದ ವೀರಭದ್ರೇಶ್ವರ ಶರಣರು,ಸಜ್ಜಲಗುಡ್ಡದ ದೊಡ್ಡ ಬಸವಾಚಾರ್ಯ ಶರಣರು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದಾರೆ.ಅಧ್ಯಕ್ಷತೆಯನ್ನು ಧನಂಜಯ ಸರದೇಸಾಯಿಯವರು ವಹಿಸಿಕೊಳ್ಳಲಿದ್ದು.ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಲಿದ್ದಾರೆ .ಸಂಸದ ಪಿ.ಸಿ.ಗದ್ದಿಗೌಡರ,ಮಾಜಿ ಶಾಸಕರಾದ ವೀರಣ್ಣ ಚಿರಂತಿಮಠ,ದೊಡ್ಡನಗೌಡ ಪಾಟೀಲ ಜ್ಯೋತಿ ಬೆಳಗಿಸಲಿದ್ದಾರೆ.ಗ್ರಾ.ಪಂ ಅಧ್ಯಕ್ಷ ಬಸವರಾಜ ಕಮತರ,ಶರಣಪ್ಪ ಬಂಡೆಪ್ಪನವರ,ಪಿ.ಬಿ.ನದಾಫ್,ನಿಂಗಪ್ಪ ಅಮರಾವತಿ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ದೇವಸ್ಥಾನದ ಸಮಿತಿಯರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ