ಗ್ರಾಮ ಅಭಿವೃದ್ಧಿಗೆ ಗ್ರಾಮ ಸಭೆ ಅಗತ್ಯ – ಎಂದ ಹಡಪದ.
ಯಲಗೋಡ ಮೇ.23

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಸಾಮಾಜಿಕ ಪರಿಶೋಧನ ನಿರ್ದೇಶನಾಲಯ ಬೆಂಗಳೂರು ಜಿಲ್ಲಾ ಪಂಚಾಯತ ವಿಜಯಪುರ ಹಾಗೂ ತಾಲ್ಲೂಕ ಪಂಚಾಯತಿ ದೇವರ ಹಿಪ್ಪರಗಿ ಇವರ ಸಹಯೋಗ ದಲ್ಲಿ 2023/24 ಸಾಲಿನ ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು 15 ನೇ. ಹಣಕಾಸು ಆಯೋಗದ ಅನುದಾನ, 2023/24 ಸಾಲಿನ ಸಾಮಾಜಿಕ ಪರಿಶೋಧನ ಗ್ರಾಮ ಸಭೆಯನ್ನು ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿಯಲ್ಲಿ ನಡೆಯಿತು. ಈ ಗ್ರಾಮ ಸಭೆಯನ್ನು ಸ್ವಾಗತಿಸಿದರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಕೆ ಹಡಪದ, ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕರಾದ ಶಾಂತಗೌಡ ನ್ಯಾಮಣ್ಣನವರ್ ಈ ಗ್ರಾಮ ಸಭೆಯ ಬಗ್ಗೆ ಮಾಹಿತಿ ನೀಡಿದರು, 2023/24 ಸಾಲಿನ ಕಾಮಗಾರಿಗಳ ಗ್ರಾಮದಲ್ಲಿ ಆಗಿವೆ ಇಲ್ಲ ಹಾಗೂ 15 ನೇ. ಹಣಕಾಸಿನಲ್ಲಿ ವಿದ್ಯುತ್ ಬಿಲ್ ಸಿಬ್ಬಂದಿಗಳ ಪಗಾರ ನೀರಿನ ವ್ಯವಸ್ಥೆ ಗ್ರಾಮದಲ್ಲಿ ಮೂಲಕ ಸೌಕರ್ಯಗಳನ್ನು ಈ ಹಣಕಾಸಿನಲ್ಲಿ ಮಾಡಬೇಕು, ಕಾಮಗಾರಿ ಖರ್ಚು ವೆಚ್ಚದ ಬಗ್ಗೆ ಸಾರ್ವಜನಿಕರ ಮುಂದೆ ಸವಿಸ್ತಾರವಾಗಿ ತಿಳಿಸಿದರು. ಹಾಗೂ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿ ಇಂದ ಕೆಲಸವನ್ನು ಕೊಡಬೇಕು ಲೆಕ್ಕ ಪರಿಶೋಧನ ಅಧಿಕಾರಿಗಳಾದ ಸುಜಾತ ಕಟ್ಟಿ, ಯವರು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಮುಂದೆ ತಿಳಿಸಿದರು, ಈ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ಕಣಮೇಶ್ವರ. ಉಪಾಧ್ಯಕ್ಷರ ಪ್ರತಿ ನಿಧಿಯಾದ ಮಲ್ಲಕಪ್ಪ ನಾಟಿಕಾರ ಸದಸ್ಯರಾದ ಹುಸೇನಿ ತಳ್ಳೋಳ್ಳಿ ರಾಜ ಪಟೇಲ್ ಕಣಿಮೇಶ್ವರ ಪ್ರಕಾಶ ರಾಠೋಡ ಶಿವಶಂಕರ ಬೂದಿಹಾಳ ಶಂಕ್ರಪ್ಪ ಪೂಜಾರಿ ಬೂತಾಳಿ ಇಂಗಳಗಿ ಮಶಾಕ್ ನದಾಫ್ ಗ್ರಾಪಂ ಸಿಬ್ಬಂದಿಗಳು ಹಾಗೂ ಎಮ್ ಬಿ ಕೆ ಪ್ರತಿ ನಿಧಿಯಾದ ಮಲಾನಭಿ ದೊಡ್ಡಮನಿ ಪಶು ಸುಖಿ ಪ್ರತಿ ನಿಧಿಯಾದ ಯಮನವ್ವ ತಳ್ಳೋಳ್ಳಿ, ಹಾಗೂ ಆಶಾ ಕಾರ್ಯಕರ್ತೆಯಾದ ಖಾಜಭಿ ಬಾಗವಾನ ಮತ್ತುಗ್ರಾಮದ ಎಲ್ಲಾ ಸಾರ್ವಜನಿಕರು ಈ ಗ್ರಾಮ ಸಭೆಯಲ್ಲಿ ಭಾಗಿಯಾಗಿದ್ದರು ಹಾಗೂ ಕಲಿಕೇರಿ ಪೊಲೀಸರು ಠಾಣೆಯ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್ ಗ್ರಾಮ ಸಭೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಭೀಮಪ್ಪ. ಹಚ್ಯಾಳ ದೇವರ ಹಿಪ್ಪರಗಿ.